ಭಾರತದಲ್ಲಿ ಪ್ರತಿದಿನ 25000 ಸಾವು ಆಗ್ತಿದೆ, ಆದರೆ ಸರ್ಕಾರ ತಪ್ಪು ಅಂಕಿ ಅಂಶಗಳನ್ನು ನೀಡುತ್ತಿವೆ!: ಖ್ಯಾತ ತಜ್ಞ ಕೆ.ಆಶಿಶ್

ಅಮೆರಿಕದ ಖ್ಯಾತ ಸಾರ್ವಜನಿಕ ಆರೋಗ್ಯ ತಜ್ಞ ಕೆ. ಆಶಿಶ್ ಭಾರತದಲ್ಲಿ COVID-19 ನಿಂದ ಉಂಟಾಗುವ ಸಾವುಗಳು ಮತ್ತು ಸೋಂಕುಗಳ ಅಧಿಕೃತ ಡೇಟಾವನ್ನು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಪ್ರತಿದಿನ ಸಾವನಪ್ಪುತ್ತಿರುವವರ ಸಂಖ್ಯೆ 4000ಕ್ಕೆ ಹತ್ತಿರದಲ್ಲಿದೆ. ಆದರೆ ಅದು ಸುಮಾರು 25000 ಆಗಿರಬಹುದು ಎಂದು ಡಾಕ್ಟರ್ ಕೆ.ಆಶಿಶ್ ಹೇಳಿದ್ದಾರೆ.

ಭಾನುವಾರ ಡಾ.ಆಶಿಶ್ ಅವರು “ಭಾರತದಲ್ಲಿ ದಿನಕ್ಕೆ 400000 ಕ್ಕೂ ಹೆಚ್ಚು ಕರೋನ ಪ್ರಕರಣದ ದಾಖಲಾಗುತ್ತಿವೆ, ಇದರಿಂದಾಗಿ 4000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ” ಎಂಬ ಭಾರತದ ಈ ಅಂಕಿ ಅಂಶಗಳು ಸರಿಯಾಗಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಅವರ ಟ್ವೀಟರ್ ನಲ್ಲಿ ಬರೆದುಕೊಂಡಿರುವ ಪ್ರಕಾರ, ” ಭಾರತದಲ್ಲಿ ಸುಮಾರು 25000 ಸಾವುಗಳು ಮತ್ತು 2-5 ಮಿಲಿಯನ್ ಸೋಂಕುಗಳು ಆಗುತ್ತಿವೆ.” ಇದು ಸರಿಯಾದ ಅಂಕಿ ಅಂಶಗಳ ಸಮೀಪದಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಮುಂದುವರೆದು, “ಅಂದಾಜು ಮಾಡಲು ಹಲವು ಮಾರ್ಗಗಳಿವೆ, ಆದರೆ ಇಲ್ಲಿ ಒಂದು ಸರಳ ಮಾರ್ಗವೆಂದರೆ ಸ್ಮಶಾನಗಳನ್ನು ನೋಡುವುದು ಎಂದು ಹೇಳಿದ್ದಾರೆ.

2019ರ ಸಾಂಕ್ರಾಮಿಕವಲ್ಲದ ಸಮಯದಲ್ಲಿ ದಿನಕ್ಕೆ ಸುಮಾರು 27000 ಸಾವಿರ ಭಾರತೀಯರು ಸಾಯುತ್ತಿದ್ದರು, ಸ್ಮಶಾನಗಳು ಈ ಮಟ್ಟದ ಸಾವುಗಳನ್ನ ಪ್ರತಿದಿನ ಅಚ್ಚುಕಟ್ಟಾಗಿ ನಿಭಾಯಿಸುತ್ತಿತ್ತು. ಈಗ ಹೆಚ್ಚುವರಿ 4000 ಸಾವುಗಳು ಅವರಿಗೆ ಹೆಚ್ಚು ಬಾದಿಸುವುದಿಲ್ಲ. ದೇಶಾದ್ಯಂತ ಸ್ಮಶಾನ ಸಿಬ್ಬಂದಿ ಸಾಮಾನ್ಯ ಸಾಮರ್ಥ್ಯಕ್ಕಿಂತ 2-4 ಪಟ್ಟು ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಡಾ. ಕೆ.ಆಶಿಶ್ ಹೇಳಿದ್ದಾರೆ.

“ಭಾರತದಲ್ಲಿ ಪ್ರತಿದಿನ 55 ರಿಂದ 80 ಸಾವಿರ ಜನರು ಸಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ”. ಸಾವಿನ ಬೇಸ್‌ಲೈನ್ 25-30 ಸಾವಿರ ಎಂದು ನೀವು ಪರಿಗಣಿಸಿದರೆ, ಕರೋನದಿಂದ ಪ್ರತಿದಿನ 25 ರಿಂದ 50 ಸಾವಿರ ಹೆಚ್ಚುವರಿ ಸಾವುಗಳು ಸಂಭವಿಸುತ್ತವೆಯೇ ಹೊರತು 4000 ಅಲ್ಲ.” ಎಂದು ಡಾಕ್ಟರ್ ಕೆ.ಆಶಿಶ್ ಹೇಳಿದ್ದಾರೆ

ಡಾಕ್ಟರ್ ಆಶಿಶ್ ಸಹ ಸೋಂಕಿನ ಅಂಕಿ ಅಂಶಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದು ಈಗ ಸಮಾಜಿಕ ಜಾಲತಾಣದಲ್ಲಿ ಚರ್ಚೆಗೆ ದಾರಿಯಾಗಿದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...