• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

TMC ಗೆಲುವಿಗೆ ಬೆನ್ನೆಲುಬಾದ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಜ್ಞ ಹುದ್ದೆ ತ್ಯಜಿಸಲು ನಿರ್ಧಾರ

Any Mind by Any Mind
May 2, 2021
in ದೇಶ
0
TMC ಗೆಲುವಿಗೆ ಬೆನ್ನೆಲುಬಾದ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಜ್ಞ ಹುದ್ದೆ ತ್ಯಜಿಸಲು ನಿರ್ಧಾರ
Share on WhatsAppShare on FacebookShare on Telegram

  

ADVERTISEMENT

ಪಂಚರಾಜ್ಯಗಳ  ವಿಧಾನಸಭಾ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ  ಪರ ಚುನಾವನಾ ಪ್ರಚಾರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ, ಚುನಾವಣಾ ರಣತಂತ್ರ ಪರಿಣಿತನೆಂದೇ ಹೆಸರು ಪಡೆದ ಪ್ರಶಾಂತ್‌ ಕಿಶೋರ್‌ ಚುನಾವಣಾ ತಂತ್ರಜ್ಞ ಹುದ್ದೆಗೆ ತ್ಯಜಿಸುವುದಾಗಿ ಘೋಷಿಸಿದ್ದಾರೆ.

ನಾನು ಎಂಟು-ಒಂಬತ್ತು ವರ್ಷಗಳಿಂದ ಚುನಾವಣಾ ತಂತ್ರಜ್ಞನ ಕೆಲಸ ಮಾಡುತ್ತಿದ್ದೇನೆ, ನಾನು ಸಾಕಷ್ಟು ನೋಡಿದ್ದೇನೆ, ನಾನು ಈ ಹುದ್ದೆಯಲ್ಲಿ ಮತ್ತೆ ಮುಂದುವರೆಯಲು ಬಯಸುವುದಿಲ್ಲ. ಈಗಾಗಲೇ ಈ ಸ್ಥಾನದಲ್ಲಿದ್ದು, ಸಾಕಷ್ಟು ಮಾಡಿದ್ದೇನೆ. ಈಗ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಜೀವನದಲ್ಲಿ ಇನ್ನೇನಾದರೂ ಮಾಡಲು ಬಯಸುತ್ತೇನೆ.  ಇದೀಗ ಈ ಜವಾಬ್ದಾರಿಯಿಂದ ತ್ಯಜಿಸಲು ಬಯಸುತ್ತೇನೆ” ಎಂದು ಪ್ರಶಾಂತ್ ಕಿಶೋರ್ ಎನ್‌ಡಿಟಿವಿ ಯ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನು ವಿಫಲ ರಾಜಕಾರಣಿ ಎಂದ ಪ್ರಶಾಂತ್‌ ಕಿಶೋರ್‌  ರಾಜಕೀಯಕ್ಕೆ ಸೇರುವುದರ ಅಥವಾ ರಾಜಕೀಯದಿಂದ ದೂರ ಉಳಿವ ಬಗ್ಗೆ  ಮಾತನಾಡಿಲ್ಲ. ತಮ್ಮ ಸಂಸ್ಥೆಯಾದ ಐಪಾಕ್ ಸಮರ್ಥರ ಕೈನಲ್ಲಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಹೆಚ್ಚು ಸದ್ದು ಮಾಡಿದ ಪ್ರಶಾಂತ್‌ ಕಿಶೋರ್‌ ಟ್ವೀಟ್

ಪಶ್ಚಿಮ ಬಂಗಾಳದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕಮಲವನ್ನು ಅರಳಿಸಲು ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿಂದ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕರು ಕೋವಿಡ್‌ ಎರಡನೇ ಅಲೆಯನ್ನೂ ಲೆಕ್ಕಿಸದೆ. ಪಶ್ಚಿಮ ಬಂಗಾಳದಲ್ಲಿ ಬೃಹತ್‌ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು.  ಮಮತಾ ಬ್ಯಾನರ್ಜಿ ಮತ್ತು ಮೋದಿ ನಡುವೆ ಸಾಕಷ್ಟು ವಾಕ್‌ ಸಮರಗಳು ನಡೆದಿದ್ದವು, ಈ ಮಧ್ಯೆ ಭಾರತದ ರಾಜಕೀಯ ಚಾಣಾಕ್ಷನೆಂದೇ ಹೆಸರು ಪಡೆದಿರುವ ಪ್ರಶಾಂತ್‌ ಕಿಶೋರ್‌ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿ ಮಾಡಿರುವ ಟ್ವೀಟ್‌ ಹೆಚ್ಚು ಸದ್ದು ಮಾಡುತ್ತು.

ದೇಶದ ಪ್ರಜಾಪ್ರಭುತ್ವದ ಪ್ರಮುಖ ಯುದ್ಧಗಳಲ್ಲಿ ಪಶ್ಚಿಮ‌ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯೂ ಒಂದು, ಎನ್ನುವ ಮೂಲಕ ಟಿಎಂಸಿಯ ಘೋಷವಾಕ್ಯವನ್ನು ಹಂಚಿಕೊಂಡು ತೃಣಮೂಲ ಕಾಂಗ್ರೆಸ್‌ ಗೆಲುವಿಗೆ ಪ್ರಶಾಂತ್‌ ಬೆನ್ನೆಲುಬಾಗಿ ನಿಂತಿದ್ದರು.

“ಬಂಗಾಳ ಮಾತ್ರ ತನ್ನ ಸ್ವಂತ ಮಗಳನ್ನು ಬಯಸುತ್ತದೆ”. ಈ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸಮರಗಳಲ್ಲಿ ಒಂದಾಗಿದೆ. ಬಂಗಾಳದ ಜನತೆ ತಮ್ಮ ಸಂದೇಶ ನೀಡಲು ಸಜ್ಜಾಗಿದ್ದಾರೆ. ಜನತೆ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಲು ಧೃಢ ನಿರ್ಧಾರ ಮಾಡಿಕೊಂಡಿದ್ದಾರೆ. ಮೇ 2 ರಂದು ನನ್ನ ಈ ಕೊನೆಯ ಟ್ವೀಟನ್ನು ಗಮನಿಸಿ ಎಂಬ ಸಂದೇಶವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದರು.

2020ರ ಡಿಸೆಂಬರ್ 21 ರಂದು ಪ್ರಶಾಂತ್‌ ಕಿಶೋರ್‌ ಬಿಜೆಪಿಗೆ ಮತ್ತೊಂದು ಸವಾಲು ಹಾಕಿದ್ದರು. ” ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡಲಿದೆ. ನನ್ನ ಮಾತು ಸುಳ್ಳಾದರೆ ಈ ಕ್ಷೇತ್ರ ತ್ಯಜಿಸುತ್ತೇನೆ, ಬರೆದಿಟ್ಟುಕೊಳ್ಳಿ” ಎಂದಿದ್ದರು.‌

For all the hype AMPLIFIED by a section of supportive media, in reality BJP will struggle to CROSS DOUBLE DIGITS in #WestBengal

PS: Please save this tweet and if BJP does any better I must quit this space!

— Prashant Kishor (@PrashantKishor) December 21, 2020

ಟಿಎಂಸಿ ಗೆಲುವಿನ ಬಗ್ಗೆ ನನಗೆ ಭರವಸೆ ಇತ್ತು

ಪಶ್ಚಿಮ ಬಂಗಾಳದಲ್ಲಿ  294 ವಿಧಾನಸಭಾ ಕ್ಷೇತ್ರಗಳಿಗೆ  ಒಟ್ಟು 8 ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಏಣಿಕೆ ಇಂದು ನಡೆಯುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್‌ ಕಿಶೋರ್‌  ನನಗೆ ಮೊದಲಿನಿಂದಲೂ ಟಿಎಂಸಿ ಗೆಲುವಿನ ವಿಚಾರ ಕುರಿತು ಬಹಳ ಭರವಸೆಯಿತ್ತು. ಬಿಜೆಪಿಯ ಜೊತೆ ನಾವು ತೀವ್ರ ಸ್ಪರ್ಧೆ ಮಾಡಿದ್ದೇವೆ. ಹಾಗು  ಕಠಿಣ ಹೋರಾಟ ಎದುರಿಸಿದ್ದೇವೆ ಎಂದಿದ್ದಾರೆ.  ಇಂದು ಬೆಳಗ್ಗೆಯಿಂದ ನಡೆಯುತ್ತಿರುವ  ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ  ಬಿಜೆಪಿ ಅನ್ನು ಹಿಂದಿಕ್ಕಿ ಟಿಎಂಸಿ ಭರ್ಜರಿಯಾಗಿ ಮುನ್ನುಗುತ್ತಿದೆ.

Tags: After Bengal victory
Previous Post

ಬಸವಕಲ್ಯಾಣದಲ್ಲಿ ಅರಳಿದ ಕಮಲ; ಕಾಂಗ್ರೆಸ್ ತೆಕ್ಕೆಗೆ ಮಸ್ಕಿ – ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ

Next Post

ಮಸ್ಕಿಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಪಕ್ಷದ ಕಾರ್ಯಕರ್ತರು ವಿಜಯೋತ್ಸವ‌ ನಡೆಸದೆ‌ ಸಂಯಮದಿಂದ ವರ್ತಿಸಬೇಕು -ಸಿದ್ದರಾಮಯ್ಯ

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

by ಪ್ರತಿಧ್ವನಿ
April 23, 2026
0

(ಡಾ ಬಾಬು ಜಗಜೀವನ್‌ರಾಮ್‌ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ದಿನಾಂಕ 06-04-2026ರಂದು ನಡೆದ...

Read moreDetails
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
Next Post
ಮಸ್ಕಿಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಪಕ್ಷದ ಕಾರ್ಯಕರ್ತರು ವಿಜಯೋತ್ಸವ‌ ನಡೆಸದೆ‌ ಸಂಯಮದಿಂದ ವರ್ತಿಸಬೇಕು -ಸಿದ್ದರಾಮಯ್ಯ

ಮಸ್ಕಿಯಲ್ಲಿ ಕಾಂಗ್ರೆಸ್‌ಗೆ ಗೆಲುವು: ಪಕ್ಷದ ಕಾರ್ಯಕರ್ತರು ವಿಜಯೋತ್ಸವ‌ ನಡೆಸದೆ‌ ಸಂಯಮದಿಂದ ವರ್ತಿಸಬೇಕು -ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada