ಕ್ರಿಕೆಟ್ ಆಡುವಾದ ಕುಸಿದುಬಿದ್ದ ಕಿರುತೆರೆ ನಟ ದಿಪೇಶ್ ಭಾನ್ ಮೃತಪಟ್ಟಿರುವ ಆಘಾತಕಾರಿ ಘಟನೆ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದೆ.
ಜನಪ್ರಿಯ ಧಾರವಾಹಿ ಭಾಬಿಜಿ ಘರ್ ಪರ್ ಹೆಯಲ್ಲಿ ಮಲ್ಕಾನ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದ ದಿಪೇಶ್ ಭಾನ್ ಅವರಿಗೆ 41 ವರ್ಷ ಆಗಿದ್ದು, ಕೆಲವೇ ದಿನಗಳ ಹಿಂದೆ ಜನ್ಮದಿನ ಆಚರಿಸಿಕೊಂಡಿದ್ದರು. ಮದುವೆ ಆಗಿ ಒಂದು ವರ್ಷ ಪೂರೈಸಿದ್ದು, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.
ದಿಪೇಶ್ ಭಾನುಗೆ ಯಾವುದೇ ಧೂಮಪಾನ, ಮದ್ಯಪಾನದ ಅಭ್ಯಾಸವಿರಲಿಲ್ಲ. ಅಲ್ಲದೇ ದೈಹಿಕವಾಗಿ ಸಾಕಷ್ಟು ಫಿಟ್ ಆಗಿದ್ದರು. ಇಂತಹ ವ್ಯಕ್ತಿಗೆ ಹೀಗೆ ದಿಢೀರನೆ ಸಾವು ಬರಲು ಹೇಗೆ ಸಾಧ್ಯ ಎಂದು ಎಫ್ ಐಆರ್ ಧಾರವಾಹಿಯ ಸಹನಟಿ ಕವಿತಾ ಕೌಶಿಕ್ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಆಡುವಾಗ ದಿಢೀರನೆ ಕುಸಿದ ಬಿದ್ದ ದಿಪೇಶ್ ಭಾನುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆದಲ್ಲೇ ಮೃತಪಟ್ಟ ಎಂದು ಸಹದ್ಯೋಗಿ ಕಲಾವಿದರು ತಿಳಿಸಿದ್ದಾರೆ.
ದೀಪೇಶ್ ಭಾನು ಅವರ ತಾಯಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ತಾಯಿಯನ್ನು ನೆನೆದು ಅವರು ತುಂಬಾ ಭಾವುಕರಾಗಿದ್ದರು.