ಚಿತದುರ್ಗದ ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ನಟ ದರ್ಶನ್ (Actor darshan) 100 ಕ್ಕೂ ಅಧಿಕ ದಿನಗಳ ಕಲಾ ಸೆರೆವಾಸ ಅನುಭವಿಸುವ ವೇಳೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಕೈ ಮುಗಿಯದ ದೇವರಿಲ್ಲ. ತಮ್ಮ ಪತಿಗೆ ಜಾಮೀನು ಸಿಗಲಿ ಎಂದು ಹಲವು ದೇವತುಗಳಿಗೆ ಹರಕೆ ಕಟ್ಟಿಕೊಂಡಿದ್ದರು.
ಹೀಗಾಗಿ ಬೆಂಗಳೂರಿನ ಪುಸಿದ್ಧ ಶಕ್ತಿ ಪೀಠದಲ್ಲಿ ಕೂಡ ಹರಕೆ ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಹರಕೆ ತೀರಿಸಿದ್ದಾರೆ. ತಮ್ಮ ಗಂಡನಿಗೆ ಬೇಲ್ ಸಿಕ್ಕಿ, ಎಂದಿನಂತೆ ಸಿನಿಮಾದಲ್ಲಿ ತೊಡಗಿಕೊಳ್ಳೋದಕ್ಕಾಗಿ ಹರೆಕೆ ಹೊತ್ತಿದ್ದರು ಎನ್ನಲಾಗಿದೆ.

ಹೌದು ಬೆಂಗಳೂರಿನ ತಾಯಿ ಅಣ್ಣಮ್ಮ ದೇವಾಲಯದಲ್ಲಿ (Annamma temple) ನಿನ್ನೆ ತಮ್ಮ ಹರಕೆಯನ್ನು ಪತ್ನಿ ವಿಜಯಲಕ್ಷ್ಮಿ ಪೂರ್ಣಗೊಳಿಸಿದ್ದಾರೆ. ಕೊಲೆ ಕೇಸ್ ನಲ್ಲಿ ನಟ ದರ್ಶನ್ ಆರೆಸ್ಟ್ ಆಗಿದ್ದಾಗ ಹರೆಕೆ ಹೊತ್ತಿದ್ದರು.
ನಿನ್ನೆ (ಏ.11) ಶುಕ್ರವಾರ ಸಂಜೆ ದೇವಾಲಯಕ್ಕೆ ಆಗಮಿಸಿ ಬಲಿಪೀಠಕ್ಕೆ ಮೊಸರು, ಉಪ್ಪು ಸಮರ್ಪಣೆ ಮಾಡಿ ಪತ್ನಿ ವಿಜಯಲಕ್ಷ್ಮಿ ಅಣ್ಣಮ್ಮ ತಾಯಿಗೆ ನಮಿಸಿದ್ದಾರೆ.