BREAKING NEWS : ಅಮೆರಿಕಾದ ಉತ್ಪನ್ನಗಳ ಮೇಲೆ ಶೇ.125 ರಷ್ಟು ಅಮದು ಸುಂಕ ವಿಧಿಸಿ ಚೀನಾ ಆದೇಶ ಹೊರಡಿಸಿದೆ. ಆ ಮೂಲಕ ಅಮೆರಿಕಾದ ಕ್ರಮಕ್ಕೆ ಪ್ರತೀಕಾರವಾಗಿ ಸುಂಕ ವಿಧಿಸಿದ ಚೀನಾ ತೆರಿಗೆ ಯುದ್ಧ ಮುಂದುವರೆಸಿದೆ.

ನಿನ್ನೆ ಅಮೆರಿಕಾದ ಉತ್ಪನ್ನಗಳ ಮೇಲಿನ ಅಮದು ಸುಂಕವನ್ನು ಶೇ.84 ಕ್ಕೆ ಏರಿಸಿ ಚೀನಾ ಆದೇಶ ಮಾಡಿತ್ತು. ಇದೀಗ ಅದನ್ನು ಶೇ.125 ಕ್ಕೆ ಹೆಚ್ಚಿಸಿ ಚೀನಾ ಅಮೆರಿಕಾಗೆ ಟಕ್ಕರ್ ಕೊಟ್ಟಿದೆ.
ನಾಳೆಯಿಂದ (ಏ.12) ಅಮದು ಸುಂಕ ಏರಿಕೆ ಜಾರಿಯಾಗಲಿದೆ ಎಂದು ಚೀನಾ ತಿಳಿಸಿದೆ. ಇದರ ಜೊತೆಗೆ ಇನ್ನು ದೆ ಅಮೆರಿಕಾ, ಚೀನಾದ ಉತ್ಪನ್ನಗಳ ಮೇಲೆ ಸುಂಕ ಏರಿಸಿದರೂ, ಚೀನಾ ಏರಿಕೆ ಮಾಡಲ್ಲ ಎಂದು ಕೂಡ ಹೇಳಿದೆ.

ಈಗಾಗಲೇ ಚೀನಾದ ಉತ್ಪನ್ನಗಳ ಮೇಲೆ ಅಮೇರಿಕಾ ಶೇ.145 ರಷ್ಟು ಅಮದು ಸುಂಕ ವಿಧಿಸಿದ್ದು , ಆ ನಂತರದಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ.