ಅಮರಾವತಿ (Amaravati): ಮಹಾರಾಷ್ಟ್ರದ (Maharashtra) ಅಮರಾವತಿಯಲ್ಲಿ (Amaravati) ಟೆಂಪೋ-ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತದಲ್ಲಿ (Accident) ನಾಲ್ವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ನಂದಗಾಂವ್ ಖಂಡೇಶ್ವರ ತಾಲೂಕಿನ ಶಿಂಗ್ಣಾಪುರ ಫಾಟಾದಲ್ಲಿ ಅಪಘಾತ ಸಂಭವಿಸಿದ್ದು, ಟೆಂಪೋದಲ್ಲಿ ಅಮರಾವತಿ ನಗರದ ಕ್ರಿಕೆಟ್ (cricket) ತಂಡದ 21 ಸದಸ್ಯರಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಆನಂದ್ ಅವರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, 10 ಮಂದಿ ಗಾಯಗೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Maharashtra #Amaravati #accident #trukaccident #death