• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆನ್ನಿಗೆ ದುಖಃದ ಮೂಟೆ ಹೊತ್ತು ಕಪ್‌ ಗೆದ್ದ ಈ ಆಟಗಾರನ ಕಣ್ಣೀರ ಕಥೆ : ಕ್ರಿಕೆಟಿಗನ ಜೀವನದಲ್ಲಿ ನಡೆದಿದ್ದೇನು..?

ಮ್ಯಾಚ್‌ಗೂ ಮೊದಲನೇ ದಿನವೇ ಅಂದರೆ ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಅಪಘಾತ ಸಂಭವಿಸಿತ್ತು

ಪ್ರತಿಧ್ವನಿ by ಪ್ರತಿಧ್ವನಿ
March 9, 2026
in Top Story, ಇದೀಗ, ಕ್ರೀಡೆ, ದೇಶ
0
ಬೆನ್ನಿಗೆ ದುಖಃದ ಮೂಟೆ ಹೊತ್ತು ಕಪ್‌ ಗೆದ್ದ ಈ ಆಟಗಾರನ ಕಣ್ಣೀರ ಕಥೆ : ಕ್ರಿಕೆಟಿಗನ ಜೀವನದಲ್ಲಿ ನಡೆದಿದ್ದೇನು..?
Share on WhatsAppShare on FacebookShare on Telegram

ಬೆಂಗಳೂರು : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ADVERTISEMENT
Laxman Savadi : ಸಚಿವ ಜಾರಕಿಹೊಳಿಗೆ ಟಾಂಗ್‌ ಕೊಟ್ರಾ ಶಾಸಕ ಲಕ್ಷ್ಮಣ್ ಸವದಿ..? #satishjarkiholi #congress

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 256 ರನ್ ಗಳ ಅತ್ಯಧಿಕ ರನ್ ಟಾರ್ಗೆಟ್ ನೀಡಿತ್ತು. ಭಾರತದ ಪರ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ಗಳಿಸುವಂತಾಗಿದೆ.  ಭಾರತದ ತಂಡದ ಗೆಲುವಿನ ಬೆನ್ನಲ್ಲೇ ಇಡೀ ಭಾರತೀಯರು ಸಂಭ್ರಮದಲ್ಲಿದ್ದರು. ಆದರೆ ಈ ಗೆಲುವಿಗೆ ಕಾರಣವಾಗಿದ್ದ ಆಟಗಾರ ದುಖಃದಲ್ಲಿದ್ದರು.

ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವೇನೋ ಅಲಂಕರಿಸಿದೆ. ಆದರೆ ಈ ಗೆಲುವು ತಂದುಕೊಡುವಲ್ಲಿ ಪಾತ್ರವಹಿಸಿದ್ದ ಆಟಗಾರ ಇಶಾನ್‌ ಕಿಶನ್‌, ತಮ್ಮ ಬೆನ್ನಿಗೆ ದುಖಃದ ಮೂಟೆಯನ್ನೇ ಹೊತ್ತು ದೇಶಕ್ಕಾಗಿ ಅದರಲ್ಲೂ ಕ್ರಿಕೆಟ್‌ ಅಭಿಮಾನಿಗಳಿಗಾಗಿ ಫೈನಲ್‌ ಪಂದ್ಯವಾಡಿದ್ದಾರೆ. ಫೈನಲ್‌ ಪಂದ್ಯಕ್ಕೂ ಮುನ್ನವೇ ಇಶಾನ್‌ ಕಿಶನ್‌ ಸಹೋದರಿ ಅಪಘಾತದಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ : ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು  ವಿದ್ಯಾರ್ಥಿನಿಯರ ಶವ ಪತ್ತೆ,

ಮ್ಯಾಚ್‌ಗೂ ಮೊದಲನೇ ದಿನವೇ ಅಂದರೆ ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಅಪಘಾತ ಸಂಭವಿಸಿತ್ತು. ಭೀಕರ ಈ ರಸ್ತೆ ದುರ್ಘಟನೆಯಲ್ಲಿ ಇಶಾನ್ ಕಿಶನ್ ಸಹೋದರಿ ವೈಷ್ಣವಿ ಸಿಂಗ್ ದಂಪತಿ ಅಸುನೀಗಿದ್ದರು, ಆದರೆ ಅಪಘಾತದಲ್ಲಿ ಆರು ತಿಂಗಳು ಹಾಗೂ ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಕಾರಿನಲ್ಲಿದ್ದರು. ಅದೃಷ್ಟವಶಾತ್‌ ಎನ್ನುವಂತೆ ಈ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇನ್ನೂ ಈ ಬಗ್ಗೆ ಗೆವುವಿನ ಬಳಿಕ ಮಾಹಿತಿ ಹಂಚಿಕೊಂಡ ಕಿಶನ್‌, ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಅವಳು ನನ್ನ ಈ ಐತಿಹಾಸಿಕ ಕ್ಷಣಗಳನ್ನು ನೋಡಬೇಕೆಂದು ಅಪೇಕ್ಷಿಸಿದ್ದಳು. ಹೀಗಾಗಿ ಈ ಟ್ರೋಫಿಯನ್ನು ನಾನು ಸಹೋದರಿಗೆ ಅರ್ಪಿಸುತ್ತೇನೆ ಎಂದು ಸಹೋದರಿಯನ್ನು ಸ್ಮರಿಸಿ ಇಶಾನ್ ಕಿಶನ್ ಗದ್ಗರಿತರಾದರು. ಅಲ್ಲದೆ ನೆಚ್ಚಿನ ಸಹೋದರಿಯನ್ನು ನೆನೆದ ಕಿಶನ್‌ ಕಣ್ಣಾಲಿಗಳು ತೇವವಾಗಿದ್ದವು.

ಪ್ರಮುಖವಾಗಿ ದುಖಃದಲ್ಲಿದ್ದ ಆಟಗಾರನಿಗೆ ಸಹ ಆಟಗಾರ ಹಾರ್ದಿಕ್‌ ಪಾಂಡ್ಯ ಧೈರ್ಯ ತುಂಬಿ ಫೈನಲ್‌ ಪಂದ್ಯ ಆಡುವಂತೆ ಪ್ರೇರೇಪಿಸಿದ್ದರು. ಅಲ್ಲದೆ ಕುಟುಂಬದಲ್ಲಿ ಶೋಕ ಸಾಗರ ಆವರಿಸಿದ್ದರೂ ತಂಡದ ಹಿತ ಹಾಗೂ ದೇಶಕ್ಕಾಗಿ ಆಡುವ ಗಟ್ಟಿ ಮನಸ್ಸು ಮಾಡಿದ್ದರು.

ಈ ಮೂಲಕ ದುಖಃದಲ್ಲೂ ಕೂಡ ಅಮೋಘ, ಅದ್ಭುತ ಪ್ರದರ್ಶನ ನೀಡಿ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ವರ್ಲ್ಡ್‌ ಕಪ್ ತಂದುಕೊಟ್ಟಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ ಸಹ ದೇಶಕ್ಕಾಗಿ ಪಂದ್ಯದಲ್ಲಿ ಭಾಗವಹಿಸಿರುವ ಇಶಾನ್‌ ಕಿಶನ್‌ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Tags: Abhishek SharmaaccidentCricket FansCricket NewsEmotional momentInd vs newzelandishan kishanPratidhvaniSanju Samsonsports newsTeam Indiatragedy storywest Bengal newsWorld Cup ChampionWorldcu[p cricket Match
Previous Post

ದೇವಸ್ಥಾನದ ವಾಶ್‌ರೂಂನಲ್ಲಿ ಇಬ್ಬರು  ವಿದ್ಯಾರ್ಥಿನಿಯರ ಶವ ಪತ್ತೆ,

Next Post

ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

by ಪ್ರತಿಧ್ವನಿ
May 21, 2026
0

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ...

Read moreDetails
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
Next Post
ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

ಇರಾನ್‌ - ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada