ಬೆಂಗಳೂರು : ಕಳೆದ ಫೆಬ್ರವರಿ 28ರಂದು ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಯುದ್ಧ ಆರಂಭದ ಒಂದೇ ದಿನದಲ್ಲಿ 463 ಲಕ್ಷ ಕೋಟಿಗಳಷ್ಟಿದ್ದ ಮಾರುಕಟ್ಟೆ ಬಂಡವಾಳ, ಮಾರ್ಚ್ 6ರ ವೇಳೆಗೆ 444 ಲಕ್ಷ ಕೋಟಿಗೆ ಕುಸಿತ ಕಂಡಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತಕ್ಕೆ ನಾಂದಿ ಹಾಡಿದಂತಾಗಿದೆ.

ಅಂದರೆ ಬರೊಬ್ಬರಿ 19 ಲಕ್ಷ ಕೋಟಿಯಷ್ಟು ಬಳಿಕ ಮಾರ್ಚ್ 9ರ ಹೊತ್ತಿಗೆ ಅಂದರೆ ಇಂದು ಈ ಪ್ರಮಾಣ ಮತ್ತೆ 12 ಲಕ್ಷ ಕೋಟಿಗಳಷ್ಟು ಕುಸಿದು 432 ಲಕ್ಷ ಕೋಟಿಗಳಿಗೆ ಬಂದು ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 31 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಕಳೆದುಹೋಗಿದೆ.
ಇವತ್ತಿನ ದಿನದ ಆರಂಭದಲ್ಲಿ ಭಾರತೀಯ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ. ಸೆನ್ಸೆಕ್ಸ್ 2,400 ಕ್ಕೂ ಹೆಚ್ಚು ಅಂಕಗಳಿಗೆ ಮತ್ತು ನಿಫ್ಟಿ 23,750 ಕ್ಕಿಂತ ಕುಸಿದಿವೆ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 115 ಕ್ಕಿಂತ ಅಧಿಕ ಡಾಲರ್‌ಗೆ ಏರಿಕಯಾದ ನಂತರ ಜಾಗತಿಕವಾಗಿ ಷೇರು ಮಾರುಕಟ್ಟೆಯು ಕುಸಿದಿದೆ.
ಇದನ್ನೂ ಓದಿ : ಮಾರುಕಟ್ಟೆ ಶ್ರದ್ಧೆಯೂ ಭರವಸೆಗಳ ನಂಬಿಕೆಯೂ
ಇಂದು ಬೆಳಿಗ್ಗೆ 09:25 ಕ್ಕೆ, ಸೆನ್ಸೆಕ್ಸ್ 2,401 ಅಂಕಗಳು ಅಥವಾ ಶೇಕಡಾ 3 ರಷ್ಟು ಕುಸಿದು, 76,518 ಕ್ಕೆ ತಲುಪಿತು. ಆದರೆ ನಿಫ್ಟಿ 727 ಅಂಕಗಳಿಗೆ ಇಳಿಕೆಯಾಗಿ 23,723 ಕ್ಕೆ ತಲುಪಿತು. ಮಾರುಕಟ್ಟೆ ವಿಸ್ತಾರದಲ್ಲಿ ಯಾವುದೇ ಆಶಾದಾಯಕ ಲಕ್ಷಣಗಳು ಕಂಡುಬಂದಿಲ್ಲ., ಹೀಗಾಗಿ 537 ಷೇರುಗಳು 2,603 ರಷ್ಟು ಕಡಿಮೆಯಾಗಿವೆ, ಆದರೆ ಗಮನಾರ್ಹ ಸಂಗತಿಯೆಂದರೆ 18 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಮುಖ್ಯವಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯ ಪರಿಣಾಮ ಷೇರು ಮಾರುಕಟ್ಟೆಗೂ ತಟ್ಟಿದೆ., ಬ್ರೆಂಟ್ ಕಚ್ಚಾ ತೈಲ ದರ ಏರಿಕೆಯ ಇದು ಜಾಗತಿಕ ಮಾರುಕಟ್ಟೆಗಳಿಗೆ ಪ್ರಮುಖ ತೈಲ ಆಘಾತವಾಗಿದೆ. ಅಲ್ಲದೆ ಮತ್ತೆ ಹಣದುಬ್ಬರ ಒತ್ತಡಗಳ ಭಯವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕಚ್ಚಾ ತೈಲದ ಏರಿಕೆಯು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ಆರ್ಥಿಕತೆಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದ ಆರ್ಥಿಕತೆ ಹಾಗೂ ಮಾರುಕಟ್ಟೆಗಳಿಗೆ ತೈಲದ ದೊಡ್ಡ ಆಘಾತವನ್ನುಂಟುಮಾಡಿದೆ. ಪಶ್ಚಿಮ ಏಷ್ಯಾದ ಯುದ್ಧ ಮುಂದುವರೆದರೆ ಕಚ್ಚಾ ತೈಲ ಬೆಲೆ ಇನ್ನಷ್ಟು ಹೆಚ್ಚಿದ್ದರೆ ಭಾರತದಂತಹ ದೊಡ್ಡ ತೈಲ ಆಮದುದಾರರಿಗೆ ತೀವ್ರ ಹೊಡೆತ ಬೀಳುತ್ತದೆ. ಈ ತೈಲ ಆಘಾತದ ಆರ್ಥಿಕ ಪರಿಣಾಮಗಳಲ್ಲಿ ಮಾರುಕಟ್ಟೆಯು ಬೆಲೆಯನ್ನು ಹೆಚ್ಚಿಸುತ್ತದೆ ಎಂದು ಹೂಡಿಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.






