ಮೊಬೈಲ್ ಬಳಕೆ ಇತ್ತೀಚಿಗೆ ಹೆಚ್ಚಾಗುತ್ತದೆ ಅದರಲ್ಲೂ ಸಣ್ಣ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಐಷಾರಾಮಿ ಹಾಗೂ ದುಬಾರಿ ಬೆಲೆಯ ಮೊಬೈಲ್ ಗಳು ಇದ್ದೇ ಇರುತ್ತದೆ ಇವತ್ತು ಮೊಬೈಲ್ ಬಳಕೆಯಿಂದ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಹೆಚ್ಚಾಗುತ್ತದೆ ಅದರಲ್ಲೂ ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜಗತ್ತಿನಾದ್ಯಂತ ಮೊಬೈಲ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ

ಇವತ್ತು ಮೊಬೈಲ್ ಬಳಸದೆ ಇರುವ ಜನಸಂಖ್ಯೆ ಕೆಲವೇ ಕೆಲವು ಮಂದಿ ಅಷ್ಟೇ, ಹೀಗಾಗಿ ಇವತ್ತು ಈ ಮೊಬೈಲ್ ಅನ್ನುವಂತದ್ದು ಒಂದು ರೀತಿಯ ಚಟವಾಗಿ ಮಾರ್ಪಟ್ಟಿದೆ ಅಂದ್ರೆ ತಪ್ಪಾಗುವುದಿಲ್ಲ ಅದರಲ್ಲೂ ಮೊಬೈಲ್ ಬಳಕೆ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ..

ಈ ಮೊಬೈಲ್ ಬಳಕೆಯಿಂದ ಎಷ್ಟೋ ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ಸಾಕಷ್ಟು ಇವೆ ಕೆಲವರು ಮೊಬೈಲ್ ಗೋಸ್ಕರ ಪ್ರಾಣ ಕಳೆದುಕೊಳ್ಳಲು ಮುಂದಾಗಿರುವಂತ ಘಟನೆಗಳು ಕೂಡ ಆಗಾಗ ಸದ್ದು ಮಾಡುತ್ತಿರುತ್ತವೆ ಒಂದು ಘಟನೆ ಚತ್ತೀಸ್ಗಡದಲ್ಲಿ ನಡೆದಿದೆ.
ಹೌದು ಚತ್ತೀಸ್‌ಗಡದಲ್ಲಿ ವಿದ್ಯಾರ್ಥಿನಿ ಒಬ್ಬಳಿಗೆ ಹಾಕಿಯ ಪೋಷಕರು ಮೊಬೈಲ್ ಹೆಚ್ಚಾಗಿ ಬಳಸಬೇಡ ಎಂದಿದ್ದಕ್ಕೆ ಆಕೆ 90 ಅಡಿ ಜಲಪಾತದಿಂದ ಧುಮುಕಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾಳೆ ವೈರಲ್ ಆಗ್ತಿದೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಈ ಘಟನೆ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ. ಆದರೂ ಆಕೆ ಧುಮುಕಿಯೇಬಿಟ್ಟಿದ್ದಾಳೆ. ಚಿತ್ರಕೋಟೆ ಜಲಪಾತದ ಮೂಲ ಇಂದ್ರಾವತಿ ನದಿ. ಬಸ್ತಾರ್ನ ಜಗದಲ್ಪುರದಿಂದ 38.ಕೀಮೀ ದೂರದಲ್ಲಿ ಈ ಜಲಪಾತವಿದೆ. ಇದನ್ನು ಮಿನಿ ನಯಾಗರ ಜಲಪಾತ ಎಂದೂ ಕರೆಯುತ್ತಾರೆ. ಈಗ ಈ ಬಾಲಕಿ ಬದುಕುಳಿದಿರುವುದು ಖಚಿತವಾಗಿದೆ. ವಿಷಯ ತಿಳಿದ ಪೊಲೀಸರು ತನಿಖೆ ನಡೆಸಿದ್ದಾರೆ. ಮೊಬೈಲ್ ಬಳಕೆಯ ವಿಷಯವಾಗಿ ಪೋಷಕರು ಗದರಿದ್ದರಿಂದ ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನುವುದು ಸಾಬೀತಾಗಿದೆ.