ನಾ ದಿವಾಕರ
ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಸ್ವಿಜರ್‌ಲೆಂಡ್ ಸರ್ಕಾರವು ಭಾರತಕ್ಕೆ ನೀಡಲಾಗಿದ್ದ ಅಂತ್ಯಂತ ಒಲವುಳ್ಳ ರಾಷ್ಟ್ರ (Most favoured Nation- ಎಮ್‌ಎಫ್‌ಎನ್) ಸ್ಥಾನವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ. ಸ್ವಿಸ್ ಉದ್ದಿಮೆ ನೆಸ್ಲೆ ವಿರುದ್ಧ ಭಾರತದ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2021ರಲ್ಲಿ ದ್ವಿ-ತೆರಿಗೆ (Double Taxation) ತಪ್ಪಿಸುವ ಸಲುವಾಗಿ ಉಭಯ ದೇಶಗಳು ಮಾಡಿಕೊಂಡ ಒಪ್ಪಂದವನ್ನು ಪರಿಗಣಿಸಿ ದೆಹಲಿಹ ಹೈಕೋರ್ಟ್ ಉಳಿದ ತೆರಿಗೆಗಳ ಅನ್ವಯವನ್ನು ಎತ್ತಿಹಿಡಿದಿತ್ತು. ಆದರೆ 2023ರಲ್ಲಿ ಸುಪ್ರೀಂಕೋರ್ಟ್ ಈ ನಿರ್ಣಯವನ್ನು ರದ್ದುಗೊಳಿಸಿತ್ತು. ಎಮ್‌ಎಫ್‌ಎನ್ ಷರತ್ತುಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 90ರ ಪ್ರಕಾರ, ಯಾವುದೇ ಅಧಿಸೂಚನೆ ಇಲ್ಲದೆಹೋದಲ್ಲಿ ನೇರವಾಗಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಸ್ವಿಜರ್‌ಲೆಂಡ್ ಸರ್ಕಾರದ ಈ ಆದೇಶದ ಪರಿಣಾಮ 2025ರ ಜನವರಿ 1ರ ನಂತರ ಸ್ವಿಜರ್‌ಲಂಡ್‌ನಲ್ಲಿ ಉತ್ಪತ್ತಿಯಾಗುವ ಆದಾಯದ ಮೇಲೆ ಭಾರತೀಯ ಉದ್ದಿಮೆಗಳು ಹೆಚ್ಚಿನ ತೆರಿಗೆಗಳಿಗೆ ಒಳಪಡುತ್ತವೆ. ಎಮ್‌ಎಫ್‌ಎನ್ ಸ್ಥಾನವನು ಅಮಾನತುಗೊಳಿಸಲು, ನೆಸ್ಲೆ ಕಂಪನಿಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕಾರಣ ಎಂದು ಸ್ವಿಜರ್‌ಲೆಂಡ್ ಸರ್ಕಾರ ಹೇಳಿದೆ. ಇದರ ಪರಿಣಾಮವಾಗಿ ಜನವರಿ 1, 2025 ರಿಂದ ಸ್ವಿಜರ್‌ಲೆಂಡ್‌ನಲ್ಲಿ ಭಾರತೀಯ ಘಟಕಗಳು ಗಳಿಸುವ ಲಾಭಾಂಶದ ಮೇಲೆ ಶೇಕಡಾ 10 ರಷ್ಟು ತೆರಿಗೆ ವಿಧಿಸುತ್ತದೆ . ಈ ಮೊದಲು ತೆರಿಗೆ ದರವು ಶೇಕಡಾ 5 ರಷ್ಟಿತ್ತು.
ಸ್ವಿಸ್ ಅಧಿಕಾರಿಗಳ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ನಂಗಿಯಾ ಆಂಡರ್ಸನ್ ಎಂ & ಎ ಕಂಪನಿಯ ತೆರಿಗೆ ಪಾಲುದಾರ ಸಂದೀಪ್ ಜುಂಜುನ್‌ವಾಲಾ, ಭಾರತದೊಂದಿಗೆ ತೆರಿಗೆ ಒಪ್ಪಂದದ ಅಡಿಯಲ್ಲಿ ಎಂಎಫ್‌ಎನ್ ಷರತ್ತು ಅನ್ವಯವನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಿರುವುದು ದ್ವಿಪಕ್ಷೀಯ ಒಪ್ಪಂದದ ಸಂದರ್ಭದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಈ ಅಮಾನತು ಸ್ವಿಜರ್‌ಲೆಂಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಘಟಕಗಳಿಗೆ ಹೆಚ್ಚಿದ ತೆರಿಗೆ ಹೊಣೆಗಾರಿಕೆಗಳಿಗೆ ಕಾರಣವಾಗಬಹುದು, ವಿಕಸನಗೊಳ್ಳುತ್ತಿರುವ ಜಾಗತಿಕ ಮಾರುಕಟ್ಟೆ ವಲಯದಲ್ಲಿ ಅಂತರರಾಷ್ಟ್ರೀಯ ತೆರಿಗೆ ಒಪ್ಪಂದಗಳನ್ನು ನಿರ್ವಹಣೆ ಮಾಡುವುದರಲ್ಲಿ ಇರುವ ಸಂಕೀರ್ಣತೆಗಳನ್ನು ಈ ನಿರ್ಧಾರ ಎತ್ತಿ ತೋರಿಸುತ್ತದೆ .
ಅಂತರರಾಷ್ಟ್ರೀಯ ತೆರಿಗೆ ಚೌಕಟ್ಟಿನಲ್ಲಿ ಭವಿಷ್ಯದ ವ್ಯವಹಾರ , ಸಮಾನ ಅವಕಾಶ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆ ಒಪ್ಪಂದದ ಷರತ್ತುಗಳ ವ್ಯಾಖ್ಯಾನ ಮತ್ತು ಅನ್ವಯದ ಮೇಲೆ ಒಪ್ಪಂದದ ಪಾಲುದಾರರನ್ನು ಒಟ್ಟುಗೂಡಿಸುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ ಎಂದು ಜುಂಜುನ್‌ವಾಲಾ ಹೇಳುತ್ತಾರೆ. ಎಕೆಎಂ ಗ್ಲೋಬಲ್ ಕಂಪನಿಯ ತೆರಿಗೆ ಪಾಲುದಾರರಾದ ಅಮಿತ್ ಮಹೇಶ್ವರಿ, MFN ಹಿಂತೆಗೆದುಕೊಳ್ಳುವ ನಿರ್ಧಾರದ ಹಿಂದಿನ ಮುಖ್ಯ ಕಾರಣವೆಂದರೆ ಪರಸ್ಪರ ಸಂಬಂಧ, ಇದು ಎರಡೂ ದೇಶಗಳಲ್ಲಿನ ತೆರಿಗೆದಾರರನ್ನು ಸಮಾನವಾಗಿ ಮತ್ತು ನ್ಯಾಯಯುತವಾಗಿ ಪರಿಗಣಿಸುವುದನ್ನು ಖಚಿತಪಡಿಸಿದೆ ಎಂದು ಹೇಳಿದ್ದಾರೆ. “ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ MFN ಷರತ್ತಿನ ಆಧಾರದ ಮೇಲೆ, ಅರ್ಹತಾ ಷೇರುದಾರರ ಲಾಭಾಂಶದ ಮೇಲಿನ ತೆರಿಗೆ ದರವನ್ನು 10 ಪ್ರತಿಶತದಿಂದ 5 ಪ್ರತಿಶತಕ್ಕೆ ಇಳಿಸಲಾಗುವುದು ಎಂದು ಸ್ವಿಸ್ ಅಧಿಕಾರಿಗಳು ಆಗಸ್ಟ್ 2021 ರಲ್ಲಿ ಘೋಷಿಸಿದರು, ಇದು ಜುಲೈ 5, 2018 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆ. ನಂತರದ 2023 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಅದೇ ವಿರುದ್ಧವಾಗಿದೆ, ”ಮಹೇಶ್ವರಿ ಹೇಳಿದರು. ಒಟ್ಟಾರೆಯಾಗಿ, ಲಾಭಾಂಶಗಳು ಈಗ ಹೆಚ್ಚಿನ ತಡೆಹಿಡಿಯುವ ತೆರಿಗೆಗೆ ಒಳಪಟ್ಟಿರುವುದರಿಂದ ಇದು ಭಾರತದಲ್ಲಿ ಸ್ವಿಸ್ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.
2010 ರಲ್ಲಿ ತಿದ್ದುಪಡಿಯ ಮೂಲಕ 1994 ರ ಒಪ್ಪಂದಕ್ಕೆ ಸೇರಿಸಲಾದ ಎಂಎಫ್‌ಎನ್ ಷರತ್ತಿನ ಪ್ರಕಾರ, ಮೂಲದಲ್ಲಿ ತೆರಿಗೆಯ ದರಗಳು ಭಾರತ ಮತ್ತು ಮೂರನೇ ವಿಶ್ವದ ಒಇಸಿಎಡಿ (OECD) ದೇಶಗಳ ನಡುವೆ ಲಾಭಾಂಶ, ಬಡ್ಡಿ, ರಾಯಧನ ಅಥವಾ ತಾಂತ್ರಿಕ ಸೇವೆಗಳ ಶುಲ್ಕಗಳು ನಮೂದಿಸಿದ್ದಕ್ಕಿಂತ ಕಡಿಮೆಯಿದ್ದವು. 1994 ರಲ್ಲಿ ಒಪ್ಪಂದವು ಸ್ವಿಜರ್‌ಲೆಂಡ್ ಮತ್ತು ಭಾರತದ ನಡುವೆ ವ್ಯಾಪಾರಕ್ಕೆ ಅನ್ವಯಿಸುತ್ತದೆ. ಆದರೆ ಭಾರತೀಯ ಸುಪ್ರೀಂ ಕೋರ್ಟ್‌ನ ಸೆಪ್ಟೆಂಬರ್ 2023 ರ ತೀರ್ಪು ಅಂತಹ ‘ಡಬಲ್ ಟ್ಯಾಕ್ಸೇಶನ್ ತಪ್ಪಿಸುವ ಒಪ್ಪಂದಗಳನ್ನು’ ಜಾರಿಗೆ ತರಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 90 (1) ರ ಅಡಿಯಲ್ಲಿ ಅಧಿಸೂಚನೆಯು ಅಗತ್ಯವಾಗಿದೆ ಎಂದು ಹೇಳಿದೆ. . ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಅಂತಹ ಅಧಿಸೂಚನೆಯಿಲ್ಲದೆ ಭಾರತದ MFN ಸ್ಥಿತಿ ನೇರವಾಗಿ ಅನ್ವಯಿಸುವುದಿಲ್ಲ ಎಂದು ಸ್ವಿಸ್ ಹಣಕಾಸು ಇಲಾಖೆ ಬುಧವಾರ ಹೇಳಿದೆ.
2011 ರಲ್ಲಿ ಭಾರತವು ಲಿಥುವೇನಿಯಾ ಮತ್ತು ಕೊಲಂಬಿಯಾದೊಂದಿಗೆ 5% ತೆರಿಗೆ ದರದ ಒಪ್ಪಂದಗಳನ್ನು ಮಾಡಿಕೊಂಡಿದೆ ಮತ್ತು ನಂತರದ ಎರಡು ದೇಶಗಳು ಕ್ರಮವಾಗಿ 2018 ಮತ್ತು 2020 ರಲ್ಲಿ ಒಇಸಿಡಿ ಗೆ ಸೇರಿಕೊಂಡವು ಎಂಬ ಕಾರಣಕ್ಕೆ ಸ್ವಿಸ್ ಸರ್ಕಾರದ ಖಾತೆಯಲ್ಲಿ 2021 ರಲ್ಲಿ 10% ರಿಂದ 5% ಕ್ಕೆ ಇಳಿಸಲಾಯಿತು. ಆದಾಗ್ಯೂ, ಸುಪ್ರೀಂ ಕೋರ್ಟ್ ತೀರ್ಪಿನ ಅರ್ಥವೆಂದರೆ ಲಿಥುವೇನಿಯಾ ಮತ್ತು ಕೊಲಂಬಿಯಾ ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಾಗ ಒಇಸಿಡಿ ರಾಷ್ಟ್ರಗಳಾಗಿರಲಿಲ್ಲ, ಇಂಡೋ-ಸ್ವಿಸ್ ಒಪ್ಪಂದದಲ್ಲಿ ತೆರಿಗೆಯ ನಂತರದ ಹೊಂದಾಣಿಕೆಯು ಅನ್ವಯಿಸುವುದಿಲ್ಲ ಎಂದು ಸ್ವಿಸ್ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.
ಶುಕ್ರವಾರ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ವಿಸ್ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಕೇಳಲಾಯಿತು. ಸ್ವಿಜರ್‌ಲೆಂಡ್‌ನೊಂದಿಗೆ , EFTA [ಯುರೋಪಿಯನ್ ಮುಕ್ತ ವ್ಯಾಪಾರ ಸಂಘ], ನಾವು ಹೊಂದಿರುವ ಡಬಲ್ ಟ್ಯಾಕ್ಸೇಷನ್ ಒಪ್ಪಂದದ ಕಾರಣದಿಂದಾಗಿ, ಅದನ್ನು ಮರುಸಂಧಾನ ಮಾಡಲಾಗುವುದು. ಆದ್ದರಿಂದ ಇದು ಅದರ ಒಂದು ಅಂಶವಾಗಿದೆ, ”ಎಂದು ಅವರು ಹೇಳಿದರು.
-೦-೦-೦-೦