• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಗಡಿಭಾಗದಲ್ಲಿ ಶವವಾಗಿ ಪತ್ತೆ: ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು!

ಪ್ರತಿಧ್ವನಿ by ಪ್ರತಿಧ್ವನಿ
May 8, 2026
in ಕರ್ನಾಟಕ
0
ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಗಡಿಭಾಗದಲ್ಲಿ ಶವವಾಗಿ ಪತ್ತೆ: ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು!
Share on WhatsAppShare on FacebookShare on Telegram

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯ ಹಣಮಾಪುರ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಕೋಸಾರಿ ಗ್ರಾಮದ ದಾದಾಸೋ ಇಮಗರ (56) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ADVERTISEMENT

ಮೃತ ದಾದಾಸೋ ಇಮಗರ ಅವರು ನಿನ್ನೆ ಸಾಂಗ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ತೆರಳುತ್ತಿದ್ದ ವೇಳೆ ಮಹಾರಾಷ್ಟ್ರದ ನಾಗಜ ಬಳಿ ಅಪಹರಣಕ್ಕೊಳಗಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಬಳಿಕ ಅವರನ್ನು ಕೊಲೆ ಮಾಡಿ, ಶವವನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಮರಕ್ಕೆ ನೇಣು ಹಾಕಲಾಗಿದೆ ಎನ್ನಲಾಗಿದೆ.

ಮೂರು ವರ್ಷದ ಹಳೆಯ ಜೋಡಿ ಕೊಲೆ ಪ್ರಕರಣ

ಮೂರು ವರ್ಷಗಳ ಹಿಂದೆ ಬಾವಿ ವಿವಾದಕ್ಕೆ ಸಂಬಂಧಿಸಿದಂತೆ ದಾದಾಸೋ ಅವರ ಮಗ ಹಾಗೂ ಸಹೋದರರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸುಮಾರು 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೃತ ದಾದಾಸೋ ಪ್ರಮುಖ ಸಾಕ್ಷಿದಾರರಾಗಿದ್ದರು. ಆರೋಪಿಗಳಲ್ಲಿ ಮೂವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಜೋಡಿ ಕೊಲೆ ಪ್ರಕರಣವನ್ನು ದಾದಾಸೋ ಇಮಗರ ಕಣ್ಣಾರೆ ಕಂಡಿದ್ದರಿಂದ ಅವರ ಸಾಕ್ಷಿಗೆ ಮಹತ್ವ ಇತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ ಹತ್ಯೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಸಂಚಲನ ತಂದಿದೆ.

ಘಟನಾ ಸ್ಥಳಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಹರಣ, ಹತ್ಯೆ ಮತ್ತು ವೈಷಮ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Tags: #athani#BorderCrime#CourtWitness#DoubleMurderCase#JusticeForVictim#karnataka#KidnapAndMurder#PoliceInvestigationbreakingnewscrimenewsMaharashtramurdercase
Previous Post

ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

Next Post

ರಾಜಕೀಯ ಅಲ್ಲೋಲ – ಕಲ್ಲೋಲ: DMK-AIADMK ಸರ್ಕಾರ ರಚಿಸಿದರೆ 107 TVK ಶಾಸಕರ ರಾಜೀನಾಮೆಯ ಎಚ್ಚರಿಕೆ..

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

“ಮನಮೋಹನ್ ಸಿಂಗ್ ಪ್ರಬುದ್ಧತೆ, ಆತ್ಮವಿಶ್ವಾಸದಿಂದ ಆರ್ಥಿಕತೆ ನೋಡಿಕೊಂಡಿದ್ದರು, ಮೋದಿ ವಿಫಲರಾಗಿದ್ದಾರೆ”

May 12, 2026
Next Post
ರಾಜಕೀಯ ಅಲ್ಲೋಲ – ಕಲ್ಲೋಲ: DMK-AIADMK ಸರ್ಕಾರ ರಚಿಸಿದರೆ 107 TVK  ಶಾಸಕರ ರಾಜೀನಾಮೆಯ ಎಚ್ಚರಿಕೆ..

ರಾಜಕೀಯ ಅಲ್ಲೋಲ - ಕಲ್ಲೋಲ: DMK-AIADMK ಸರ್ಕಾರ ರಚಿಸಿದರೆ 107 TVK ಶಾಸಕರ ರಾಜೀನಾಮೆಯ ಎಚ್ಚರಿಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!