ಮಿನಿ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 7 ಜನ ಸಾವನ್ನಪ್ಪಿ, 25 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಹರಿಯಾಣದ ನುಹ್ ಪ್ರದೇಶದಲ್ಲಿ ಟೂರಿಸ್ಟ್ ಬಸ್ಗೆ ಬೆಂಕಿ ಹೊತ್ತಿಕೊಂಡ ಒಂಬತ್ತು ಜನರು ಸಜೀವ ದಹನವಾಗಿದ್ದರು ಮತ್ತು 15 ಮಂದಿ ಗಾಯಗೊಂಡಿದ್ದರು. ಇದು ಮಾಸುವ ಮುನ್ನವೇ ಮತ್ತೊಂದು ಭಯಾನಕ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಕುಂಡ್ಲಿ-ಮನೇಸರ್-ಪಲ್ವಾಲ್ (ಕೆಎಂಪಿ) ಎಕ್ಸ್ಪ್ರೆಸ್ವೇಯಲ್ಲಿ ಸುಮಾರು 2 ಮೀ ದೂರದಲ್ಲಿ ಈ ಘಟನೆ ನಡೆದಿದೆ. ಬಸ್ನಲ್ಲಿ ಸುಮಾರು 60 ಜನರು ಇದ್ದರು, ಎಲ್ಲರೂ ಪಂಜಾಬ್ನ ಹೋಶಿಯಾರ್ಪುರ ಮತ್ತು ಲುಧಿಯಾನ ನಿವಾಸಿಗಳು ಎನ್ನಲಾಗಿದೆ.
ವಾಹನದಲ್ಲಿದ್ದವರು ಮಥುರಾ ಮತ್ತು ವೃಂದಾವನದಿಂದ ಧಾರ್ಮಿಕ ತೀರ್ಥಯಾತ್ರೆಗಳನ್ನು ಮುಗಿಸಿ ಹಿಂತಿರುಗುತ್ತಿದ್ದರು. ಗಾಯಗೊಂಡವರೆಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಸದರ್ ತೌರು ಠಾಣಾಧಿಕಾರಿ, ಇನ್ಸ್ಪೆಕ್ಟರ್ ಜಿತೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.