
ಮಧ್ಯಪ್ರದೇಶದ ಇಂದೋರ್ನಲ್ಲಿ ಆದಿತ್ಯ ತಿವಾರಿ ಎಂಬ 10 ವರ್ಷದ ಬಾಲಕ ತಾನೇ ಹಾಡು ಸಂಯೋಜನೆ ಮಾಡಿ ಆ ಹಾಡುಗಳನ್ನು ಹಾಡುವ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾನೆ.ಟ್ರಾಫಿಕ್ ಸಿಗ್ನಲ್ನಲ್ಲಿಯೇ ನಿಂತು ಸಂಚಾರ ಪೊಲೀಸರಂತೆ ಓಡಾಡಿಕೊಂಡು, ಹಾಡುತ್ತಾ, ನಿಯಮ ಉಲ್ಲಂಘಿಸುವವರಿಗೆ ಬುದ್ದಿ ಹೇಳುತ್ತಾ ಜನರಿಗೆ ಸಂಚಾರ ನಿಯಮಗಳ ಬಗ್ಗೆ ಬಾಲಕ ಜಾಗೃತಿ ಮೂಡಿಸುತ್ತಿದ್ದಾನೆ.
#WATCH | Indore, Madhya Pradesh: A 10-year-old boy named Aditya Tiwari spreads awareness about the traffic rules by singing self-composed songs. pic.twitter.com/K444jXZOe5
— ANI (@ANI) August 18, 2024
ಸಿನಿಮಾ ಹಾಡುಗಳಿಗೆ ಸಂಚಾರ ನಿಯಮಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಸೇರಿಸಿ ಈ ಬಾಲಕ ಹಾಡುತ್ತಾನೆ. ಹಾಗೆಯೇ ಹೆಲ್ಮೆಟ್ ಧರಿಸದೆ ಸಂಚರಿಸುವವರ ಬಳಿ ಹೋಗಿ ಸಂಚಾರಿ ನಿಯಮ ಪಾಲಿಸುವಂತೆ ಮನವಿ ಮಾಡುವ ಚೀಟಿಯೊಂದನ್ನು ನೀಡುತ್ತಾನೆ. ಜೊತೆಗೆ ಚಾಕೊಲೇಟ್ ನೀಡಿ ನಿಯಮ ಪಾಲಿಸುವಂತೆ ಮನವಿ ಮಾಡುತ್ತಾನೆ ಈ ಬಾಲಕ.
#WATCH | Indore, Madhya Pradesh: A 10-year-old boy named Aditya Tiwari spreads awareness about the traffic rules by singing self-composed songs. pic.twitter.com/K444jXZOe5
— ANI (@ANI) August 18, 2024
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಆದಿತ್ಯ ತಿವಾರಿ, “ನಾನು ಕಳೆದ ಮೂರು ವರ್ಷಗಳಿಂದ ಟ್ರಾಫಿಕ್ ಅನ್ನು ನಿರ್ವಹಿಸುತ್ತಿದ್ದೇನೆ. ನನ್ನ ಸಹೋದರಿ ‘ನೋ ಸ್ಮೋಕಿಂಗ್’ ಅಭಿಯಾನವನ್ನು ನಡೆಸುತ್ತಿದ್ದಳು. ಅವಳನ್ನು ನೋಡಿ ನನಗೂ ದೇಶ ಸೇವೆ ಮಾಡುವ ಮನೋಭಾವ ಬಂದಿದೆ. ಅದರಿಂದಾಗಿ ನಾನು ರಸ್ತೆಗಳಿದು ಸಂಚಾರ ನಿಯಮ ಹೇಳುತ್ತಿದ್ದೇನೆ” ಎಂದು ತಿಳಿಸಿದ್ದಾನೆ.
#WATCH | Indore, Madhya Pradesh: Aditya Tiwari says, "I have been managing traffic for the past three years. My sister runs a 'No Smoking' campaign, seeing her I also thought of serving the country, and I came on the road. I spread awareness regarding the traffic rules by singing… pic.twitter.com/AmjLzJNbGN
— ANI (@ANI) August 18, 2024
“ನಾನು ರಚಿಸಿದ ಹಾಡುಗಳನ್ನು ಹಾಡುವ ಮೂಲಕ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇನೆ. ಸ್ವಚ್ಛತೆಯಲ್ಲಿ ಇಂದೋರ್ ಮೊದಲ ಸ್ಥಾನದಲ್ಲಿದ್ದಂತೆ ಸಂಚಾರ ನಿಯಮಗಳ ಅನುಸರಣೆಯಲ್ಲಿ ಇಂದೋರ್ ಮೊದಲ ಸ್ಥಾನದಲ್ಲಿರಬೇಕೆಂದು ನಾನು ಬಯಸುತ್ತೇನೆ. ನಾನು ದೊಡ್ಡವನಾದಾಗ ಅಂತಹ ಸೈನಿಕನಾಗಲು ಬಯಸುತ್ತೇನೆ” ಎಂದು ಆದಿತ್ಯ ತಿವಾರಿ ಹೇಳಿದ್ದಾನೆ.
