ರಾಜಧಾನಿಯ ಹದಗೆಟ್ಟ ರಸ್ತೆಗಳಿಂದ ಹೆಚ್ಚುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವುದಕ್ಕೆ ಪಾಲಿಕೆ ನಿರ್ಧರಿಸಿದೆ. ಯಾರೇ ರಸ್ತೆ ಅಗೆದು ಗುಂಡಿ ಮಾಡಿದರೂ ಬಿಬಿಎಂಪಿಯನ್ನೇ ಹೊಣೆ ಮಾಡಲಾಗುತ್ತಿದೆ. ಆದರೆ ಪಾಲಿಕೆಗಿಂತ ಹೆಚ್ಚಾಗಿ ರಸ್ತೆ ಅಗೆಯುತ್ತಿರುವುದು ಬೆಸ್ಕಾಂ ಹಾಗೂ ಜಲ ಮಂಡಳಿ. ಇದರಿಂದ ಬಿಬಿಎಂಪಿ ಬೇಕಾಬಿಟ್ಟಿ ಗುಂಡಿ ತೆಗೆಯುತ್ತಿರುವ ಬೆಸ್ಕಾಂ, ಜಲಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ರಸ್ತೆ ಸಮಸ್ಯೆಯ ವರದಿ ಸಂಗ್ರಹಿಸಿ ದೂರು ದಾಖಲಿಸಲು ಎಲ್ಲಾ ಇಂಜಿನಿಯರ್ ಗಳಿಗೆ ಖಡಕ್ ಆದೇಶ ಹೊರಡಿಸಿದೆ.
ನಿರ್ಲಕ್ಷ್ಯವಹಿಸಿದರೆ ಜಲಮಂಡಳಿ ಹಾಗೂ ಬೆಸ್ಕಾಂ ವಿರುದ್ಧ ದೂರು ದಾಖಲಿಸಲು ಸೂಚನೆ!
ಬೆಂಗಳೂರಿನ ರಸ್ತೆ ಬಗ್ಗೆ ಹೇಳುವುದೇ ಬೇಡ, ಅಷ್ಟು ಅದ್ವಾನವಾಗಿವೆ. ರಸ್ತೆ ಗುಂಡಿಗಳು ಎಂದರೆ ಸಿಲಿಕಾನ್ ಸಿಟಿಯ ಮೃತ್ಯುಕೂಪಗಳು ಎಂಬಂತಾಗಿವೆ. ಇಷ್ಟು ದಿನ ಈ ಸಮಸ್ಯೆಗೆ ಪಾಲಿಕೆಯೇ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದರು. ಆದರೆ ನಿನ್ನೆ ಬಿಬಿಎಂಪಿ ಚೀಫ್ ಇಂಜಿನಿಯರ್ ಅಸಲಿ ಸತ್ಯವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ಮೇಲೆ ಸತ್ಯ ಜಗಜ್ಜಾಹಿರಾಗಿದೆ. ಗುಂಡಿ ಸಮಸ್ಯೆಗೆ ಕಾರಣರಾದ ಜಲಮಂಡಳಿ ಹಾಗೂ ಬೆಸ್ಕಾಂ ವಿರುದ್ಧ ಪಾಲಿಕೆ ಸಿಡಿದೆದ್ದಿದ್ದು ತಪ್ಪಿತಸ್ಥರ ವಿರುದ್ದ ಕಾನೂನು ಸಮರ ಸಾರಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಗೆ ಲಿಖಿತ ದೂರು ದಾಖಲಿಸಲಾಗುತ್ತಿದೆ.
ಕಂಡಕಂಡಲ್ಲಿ ರಸ್ತೆ ತೋಡುವ ಜಲಮಂಡಳಿಗೆ ಖಡಕ್ ವಾರ್ನಿಂಗ್!
110 ಹಳ್ಳಿಗಳಿಗೆ ನೀರನ್ನು ಪೂರೈಕೆ ಮಾಡುವ ಸಲುವಾಗಿ ಜಲಮಂಡಳಿ ಆರ್.ಆರ್ ನಗರ, ಮಾಗಡಿ ರಸ್ತೆ, ಬ್ಯಾಡರಹಳ್ಳಿ ಸುತ್ತಮುತ್ತ ಬೇಕಾ ಬಿಟ್ಟಿಯಾಗಿ ರಸ್ತೆಯನ್ನು ಅಗೆದು ಬೃಹದ್ದಾಕಾರದ ಗುಂಡಿಗಳನ್ನ ಮಾಡಿದೆ. ಮಾಗಡಿ ರಸ್ತೆಯಲ್ಲಿ ಮೊನ್ನೆ ಗುಂಡಿ ತಪ್ಪಿಸಲು ಹೋಗಿ ಮಹಿಳೆ ಬಲಿಯಾಗಿದ್ದರು. ಇದರಿಂದ ಎಚ್ಚೆತ್ತ ಪಾಲಿಕೆ ಅಲ್ಲಿನ ಇಂಜಿನಿಯರ್ ಅನ್ನು ಸಸ್ಪೆಂಡ್ ಮಾಡಿದೆ. ಈ ಗುಂಡಿಗಳ ಅವ್ಯವಸ್ಥೆಗೆ ಕಾರಣರಾದ ಜಲಮಂಡಳಿ ಅಧಿಕಾರಿಗಳ ವಿರುದ್ದ ದೂರು ನೀಡಿ FIR ದಾಖಲಿಸಲು ಎಲ್ಲಾ ತಯಾರಿ ನಡೆಸಿದ್ದು ಈ ಬಗ್ಗೆ ಎಲ್ಲಾ ಇಂಜಿನಿಯರ್ ಗಳಿಗೆ ಆದೇಶ ಹೊರಡಿಸಲಾಗಿದೆ.
ಅನುಮತಿ ಇಲ್ಲದೆ ರಸ್ತೆ ತೋಡಿದರೆ ಬೆಸ್ಕಾಂ ಮೇಲೆ FIR!
ಇನ್ನು ಈ ರಸ್ತೆ ಗುಂಡಿಗೆ ಕಾರಣವಾದ ಮತ್ತೊಂದು ಸಂಸ್ಥೆ ಬೆಸ್ಕಾಂ ನಗರದಾದ್ಯಂತ ಅಂಡರ್ ಕೇಬಲ್ ಗಳನ್ನ ಅಳವಡಿಸಲು ಬೇಕಾಬಿಟ್ಟಿಯಾಗಿ ಮುಖ್ಯರಸ್ತೆಗಳನ್ನ ಅಗೆದಿದೆ. ಪಾಲಿಕೆಯ ಎಲ್ಲಾ ನಿರ್ದೇಶನಗಳನ್ನು ಗಾಳಿಗೆ ತೂರಿ ಗುಂಡಿ ತೆಗೆದು ಬಿಡಲಾಗಿದೆ. ಗುಂಡಿಗಳಿಗೆ ಮಣ್ಣು ಹಾಕಿ ಬೇಕಾಬಿಟ್ಟಿ ತೇಪೆ ಹಚ್ಚುತ್ತಿದೆ. ಇದೀಗ ಕಾನೂನು ಸಮರಕ್ಕೆ ಮುಂದಾಗಿರುವ ಪಾಲಿಕೆ ಮೊದಲು ಬೆಸ್ಕಾಂ ವಿರುದ್ದವೇ ದೂರು ದಾಖಲಿಸಲು ಸಜ್ಜಾಗಿದೆ.
ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಜಲಮಂಡಳಿ, ಬೆಸ್ಕಾಂ ಅಧಿಕಾರಿಕಗಳಿಗೆ ಬುದ್ದಿ ಬರುವುದರೂ ಯಾವಾಗ ಎಂಬುವುದೇ ಸದ್ಯಕ್ಕಿರುವ ಪ್ರಶ್ನೆ. ಆದಷ್ಟು ಬೇಗ ಈ ಎಲ್ಲಾ ಗೊಂದಲಗಳನ್ನು ಸರಿದೂಗಿಸಿ, ಬೇಗನೆ ರಸ್ತೆ ಗುಂಡಿ ಮುಕ್ತ ರಾಜಧಾನಿಯನ್ನು ನಿರ್ಮಿಸಬೇಕಿದೆ. ಈ ಮೂಲಕ ಮತ್ತೊಂದು ಬಡ ಜೀವ ಬೀದಿಯಲ್ಲಿ ಕೊನೆಯುಸಿರೆಳಯದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆ ಮೇಲಿದೆ.
ಈ ಕುರಿತು ಮಾತನಾಡಿರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾರಿಂದ ಖಡಕ್, ಜಲಮಂಡಳಿ, ಬೆಸ್ಕಾಂ ಇನ್ಮುಂದೆ ಪಾಲಿಕೆ ಅನುಮತಿ ಇಲ್ಲದೆ ರಸ್ತೆ ಗುಂಡಿ ಅಗೆಯುವಂತಿಲ್ಲ. ಅನುಮತಿ ಇಲ್ಲದೆ ರಸ್ತೆ ಗುಂಡಿ ಅಗೆದರೆ ಕೇಸ್ ದಾಖಲು ಮಾಡುತ್ತೇವೆ. ಈಗಾಗಲೇ ವಾರ್ಡ್ ಇಂಜಿನಿಯರ್ಸ್ ಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.