KSRTC ಬಸ್ಸಿನಲ್ಲಿ ಕೋಳಿ ಮರಿ ಒಂದಕ್ಕೆ ಹಾಫ್ ಟಿಕೆಟ್ ಚಾರ್ಜ್ ಮಾಡಲಾಗಿದೆ. ಈ ಸ್ವಾರಸ್ಯಕರ ಪ್ರಸಂಗ ಹೊಸಗರದಲ್ಲಿ ನಡೆದಿದೆ.
ಹೊಸನಗರದಿಂದ ಶಿರೂರಿಗೆ ಹೊರಟಿದ್ದ KSRTC ಬಸ್ಸಿನಲ್ಲಿ ಘಟನೆ ನಡೆದಿದ್ದು, ಈ ಬೆಳವಣಿಗೆ ಉಳಿದ ಪ್ರಯಾಣಿಕರನ್ನು ಅವಕ್ಕಾಗಿಸಿದೆ.
ಏನಿದು ಹಾಫ್ ಟಿಕೆಟ್ ಕೇಸ್?
ಅಲೆಮಾರಿ ಕುಟುಂಬವೊಂದು ಶಿರೂರಿಗೆ ತೆರಳುತ್ತಿತ್ತು. ಈ ಕುಟುಂಬ ಶಿರಸಿಯಲ್ಲಿ ಹತ್ತು ರುಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿತ್ತು. ಖಾಸಗಿ ಬಸ್ ನಲ್ಲಿ ಹೊಸನಗರಕ್ಕೆ ಬಂದು ಅಲ್ಲಿಂದ ಶಿರೂರಿಗೆ ತೆರಳುವ KSRTC ಬಸ್ ಹತ್ತಿದ್ದರು. ಈ ಸಂದರ್ಭ KSRTC ಬಸ್ ಕಂಡಕ್ಟರ್ ಕೋಳಿಗೂ ಟಿಕೆಟ್ ಮಾಡಿಸಬೇಕು ಎಂದು ಸೂಚಿಸಿ, ಹತ್ತು ರುಪಾಯಿಯ ಕೋಳಿ ಮರಿಗೆ KSRTC ಬಸ್ ಕಂಡಕ್ಟರ್ 52 ರೂ. ಟಿಕೆಟ್ ಚಾರ್ಜ್ ಮಾಡಿದ್ದಾರೆ.