• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ರಂಗಭೂಮಿ-ಸಮಾಜದ ಸೂಕ್ಷ್ಮ ಸಂಬಂಧಗಳನ್ನು ಅರಿತವರೇ ರಂಗಕರ್ಮಿಯಾಗಲು ಸಾಧ್ಯ!

ನಾ ದಿವಾಕರ by ನಾ ದಿವಾಕರ
December 27, 2021
in ಕರ್ನಾಟಕ
0
ರಂಗಭೂಮಿ-ಸಮಾಜದ ಸೂಕ್ಷ್ಮ ಸಂಬಂಧಗಳನ್ನು ಅರಿತವರೇ ರಂಗಕರ್ಮಿಯಾಗಲು ಸಾಧ್ಯ!
Share on WhatsAppShare on FacebookShare on Telegram

ಮೈಸೂರಿನ ರಂಗಾಯಣದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಲೋಕದ ಹೆಮ್ಮೆಯ ಕೂಸು ರಂಗಾಯಣ. 32 ವರ್ಷಗಳ ಹಿಂದೆ ಬಿ ವಿ ಕಾರಂತರು ಸೃಷ್ಟಿಸಿದ ಈ ಕಲಾಕೃತಿ ಅನೇಕ ತಿರುವುಗಳನ್ನು ಪಡೆದುಕೊಂಡು, ಹಲವಾರು ಸವಾಲುಗಳನ್ನೆದುರಿಸಿ, ಹತ್ತಾರು ಕಲಾರಾಧಕರ ಸಾರಥ್ಯದಲ್ಲಿ ನಡೆದು ಬಂದಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಬಿಂಬಿಸುವುದಷ್ಟೇ ಅಲ್ಲದೆ, ಕ್ರಮೇಣ ಶಿಥಿಲವಾಗುತ್ತಿರುವಂತೆ ಕಾಣುತ್ತಿರುವ ಬಹುಸಂಸ್ಕೃತಿಯ ನೆಲೆಗಳನ್ನು ಸಂರಕ್ಷಿಸುವ ಸಾಂಸ್ಕೃತಿಕ ಮಾರ್ಗಗಳನ್ನು ಶೋಧಿಸುತ್ತಲೇ ಇದೆ. ರಂಗಭೂಮಿಯ ಮೇಲಿನ ನವನವೀನ ಪ್ರಯೋಗಗಳ ಮೂಲಕ ಸಮಾಜದ ಅಂತರಂಗದ ಹುಳುಕುಗಳಿಗೆ, ಬಾಹ್ಯ ಜಗತ್ತಿನ ಕೊರತೆಗಳಿಗೆ ಮುಖಾಮುಖಿಯಾಗುತ್ತಾ, ಭೂತ ವಾಸ್ತವದೊಡನೆ ಅನುಸಂಧಾನ ನಡೆಸುತ್ತಾ ಸಮಾಜದ ಓರೆಕೋರೆಗಳನ್ನು ತಿದ್ದುವ ನಿಟ್ಟಿನಲ್ಲಿ ರಂಗಾಯಣ ಬಹುದೂರ ಸಾಗಿದೆ.

ADVERTISEMENT

ಈ ಹಾದಿಯಲ್ಲಿನ ಹೆಜ್ಜೆ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಜಾತಿ, ಮತ, ಧರ್ಮ, ಭಾಷೆ, ಸಮುದಾಯ ಮತ್ತು ಜನಾಂಗೀಯ ಅಸ್ಮಿತೆಗಳನ್ನು ದಾಟಿ ರಂಗಭೂಮಿಯ ಕಲಾಭಿವ್ಯಕ್ತಿಯ ಮೂಲಕ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸುವುದನ್ನೂ ಗುರುತಿಸಬಹುದು. ಸಾಹಿತ್ಯದಿಂದಾಗಲೀ, ರಂಗಭೂಮಿಯಿಂದಾಗಲೇ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದು ವಾದಿಸುವವರು ಇತಿಹಾಸಕ್ಕೆ ವಿಮುಖರಾಗಿಯೇ ಮಾತನಾಡುತ್ತಾರೆ. ಆಧುನಿಕ ಮಾನವ ಸಮಾಜದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಲು ರಂಗಭೂಮಿ ಮತ್ತು ಸಾಹಿತ್ಯಾಭಿವ್ಯಕ್ತಿಯ ಕೊಡುಗೆ ಹೇರಳವಾಗಿರುವುದು ಚಾರಿತ್ರಿಕ ಸತ್ಯ. ಏಕೆಂದರೆ ಈ ಎರಡೂ ಅಭಿವ್ಯಕ್ತಿ ಸಾಧನಗಳು ಜನರ ನಡುವಿನಿಂದಲೇ ಹುಟ್ಟಿಕೊಳ್ಳುತ್ತವೆ , ಜನಸಾಮಾನ್ಯರ ಬದುಕಿನೊಂದಿಗೇ ಬೆಸೆದುಕೊಂಡು, ವ್ಯಕ್ತಿ ಮತ್ತು ಸಮಾಜದ ಹೆಜ್ಜೆಗಳನ್ನು ನಿಷ್ಕರ್ಷೆಗೊಳಪಡಿಸುತ್ತವೆ.

ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ಆರಂಭದಿಂದಲೂ ತನ್ನ ಸ್ವಂತಿಕೆ ಮತ್ತು ಜಾತ್ಯತೀತ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ. ಈ ಬಾರಿಯ ಬಹುರೂಪಿ ನಾಟಕೋತ್ಸವದ ಸಮಾರೋಪಕ್ಕೆ ರಂಗಭೂಮಿ, ಸಾಹಿತ್ಯ ಮತ್ತು ಭಾರತದ ಬಹುತ್ವ ಸಂಸ್ಕೃತಿಯ ಪರಿವೆಯೇ ಇಲ್ಲದ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಬಹುರೂಪಿ ನಾಟಕೋತ್ಸವ ಮೂಲತಃ ರಂಗಭೂಮಿಯ ನೂತನ ಪ್ರಯೋಗಗಳ ವೈವಿಧ್ಯತೆಯನ್ನು ಬಿಂಬಿಸುವ ಒಂದು ರಾಷ್ಟ್ರೀಯ ಹಬ್ಬ. ಈ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವ ಸಾಂಸ್ಕೃತಿಕ ತಂಡಗಳು, ನಾಟಕಗಳು ಮತ್ತು ಉಪನ್ಯಾಸಕರು ಭಾರತದ ಬಹುತ್ವದ ನೆಲೆಗಳನ್ನು ಶೋಧಿಸಿ ವಿಭಿನ್ನ ಭಾಷಿಕ, ಮತೀಯ, ಧಾರ್ಮಿಕ, ಪ್ರಾದೇಶಿಕ ಮತ್ತು ಪ್ರಾಂತೀಯ ಸಾಂಸ್ಕೃತಿಕ ಸೌಂದರ್ಯವನ್ನು ಬಿಂಬಿಸಲು ಪ್ರಯತ್ನಿಸುವುದು ಈವರೆಗೂ ನಡೆದುಬಂದಿರುವ ಚರಿತ್ರೆ.

ಪಂಥ ರಾಜಕಾರಣದ ನಡುವೆ

ಯಾವುದೇ ಒಂದು ಕೋಮು, ಪಂಥ, ಜಾತಿ ಮತ್ತು ಮತಗಳ ಸ್ಪರ್ಶ ಇಲ್ಲದೆಯೇ ಇಷ್ಟು ವರ್ಷಗಳ ಕಾಲ ನಡೆದುಬಂದಿರುವ ಬಹುರೂಪಿ ಮತ್ತು ರಂಗಾಯಣದ ಹೆಜ್ಜೆಗಳ ನಡುವೆ ಎಡ-ಬಲ-ನಡು ಪಂಥೀಯ ಭಾವನೆಗಳನ್ನು ಉತ್ಖನನ ಮಾಡುವ ಪ್ರಯತ್ನಗಳನ್ನು ಈಗ ಮಾಡಲಾಗುತ್ತಿದೆ. ರಂಗಾಯಣದ ಮಾಜಿ ನಿರ್ದೇಶಕರಾದ ಬಿ ವಿ ರಾಜಾರಾಂ ಅವರೂ ಸಹ ತಮ್ಮ ಪ್ರಜಾವಾಣಿಯ ಲೇಖನವೊಂದರಲ್ಲಿ ಎಡಪಂಥೀಯ-ಬಲಪಂಥೀಯ ಹೆಜ್ಜೆ ಗುರುತುಗಳನ್ನು ಶೋಧಿಸಲು ಯತ್ನಿಸಿದ್ದಾರೆ. ಇದೊಂದು ಬಾಲಿಶ ಪ್ರಯತ್ನವಷ್ಟೇ ಅಲ್ಲ , ಅಪ್ರಬುದ್ಧ ವ್ಯಾಖ್ಯಾನವೂ ಹೌದು. ಏಕೆಂದರೆ ರಂಗಭೂಮಿ ಮತ್ತು ಯಾವುದೇ ಕಲಾಭಿವ್ಯಕ್ತಿಯ ಸಾಧನಗಳಲ್ಲಿ ಪಂಥೀಯ ಧೋರಣೆಗಳನ್ನು ಹೆಕ್ಕಿ ತೆಗೆಯಲಾಗುವುದಿಲ್ಲ. ವ್ಯಕ್ತಿಗತವಾಗಿ ರೂಢಿಸಿಕೊಂಡು ಬಂದಿರುವ ನಂಬಿಕೆ, ವಿಶ್ವಾಸ ಮತ್ತು ಧೋರಣೆಗಳನ್ನು ಮೀರಿ ಪಾತ್ರಗಳಲ್ಲಿ ಲೀನವಾಗುವ ಕಲಾವಿದರಷ್ಟೇ ರಂಗಭೂಮಿಯನ್ನು ಪ್ರತಿನಿಧಿಸಲು ಸಾಧ್ಯ ಎನ್ನುವ ಸರಳ ಸತ್ಯ ಈ ಮಹನೀಯರಿಗೆ ಇರಬೇಕಿತ್ತಲ್ಲವೇ ?

“ರಂಗಭೂಮಿಯ ಕರ್ತವ್ಯ ಕೇವಲ ಸಮಾಜವನ್ನು ಬಿಂಬಿಸುವುದಷ್ಟೇ ಅಲ್ಲ, ಪರಿವರ್ತಿಸುವುದೂ ಹೌದು ” ಎಂದು ಖ್ಯಾತ ನಾಟಕಕಾರ ಬ್ರೆಕ್ಟ್ ಹೇಳುತ್ತಾರೆ. ಕಲಾಭಿವ್ಯಕ್ತಿಯ ಯಾವುದೇ ಮಾಧ್ಯಮಗಳಿಗೆ ಇದು ಅನ್ವಯಿಸುವಂತಹುದು. ನಮ್ಮ ಸುತ್ತಲಿನ ಸಮಾಜದಲ್ಲಿ ಬೇರೂರಿರಬಹುದಾದ ಅನಿಷ್ಠಗಳನ್ನು, ಹುಳುಕುಗಳನ್ನು, ಅಪಸವ್ಯಗಳನ್ನು ಮತ್ತು ಮಾನವ ವಿರೋಧಿ ಧೋರಣೆಗಳನ್ನು ಹೊರೆಗೆಳೆಯುತ್ತಲೇ ಇದರೊಟ್ಟಿಗೇ ಜೀವಂತಿಕೆಯೊಂದಿಗೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರಬಹುದಾದ ಮಾನವೀಯ ಮೌಲ್ಯಗಳನ್ನೂ ಪ್ರೇಕ್ಷಕರ ಮುಂದಿಡುವ ಮೂಲಕ ರಂಗಭೂಮಿ ಸತ್ಯಾಸತ್ಯತೆಯ ನಿಷ್ಕರ್ಷೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ. ಬದಲಾಗಿ ಒಂದು ನಾಟಕವನ್ನು ನೋಡುವ ಪ್ರೇಕ್ಷಕರಿಗೆ ನಿಷ್ಕರ್ಷೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ಇದಮಿತ್ತಂ ಎನ್ನುವ ರೀತಿಯ ಯಾವುದೇ ಸೈದ್ಧಾಂತಿಕ ನೆಲೆಗಳ ಅಭಿವ್ಯಕ್ತಿಯೂ ಸಹ ಬಾಹ್ಯ ಸಮಾಜದ ನಿಷ್ಕರ್ಷೆಗೊಳಗಾಗುತ್ತದೆ.

ಹಾಗಾಗಿಯೇ ರಂಗಭೂಮಿಯ ವಿನೂತನ ಪ್ರಯೋಗಗಳಲ್ಲಿ ಇತಿಹಾಸದೊಡನೆ ಅನುಸಂಧಾನ ಕಾಣುವಷ್ಟೇ ಪರಿಣಾಮಕಾರಿಯಾಗಿ, ಚರಿತ್ರೆಯ ವಿಭಿನ್ನ ಹೆಜ್ಜೆಗಳ ಮುಖಾಮುಖಿಯಾಗುವುದನ್ನೂ ಕಾಣುತ್ತೇವೆ. ಒಂದೆರಡು ಗಂಟೆಗಳ ಕಾಲ ರಂಗಮಂಚದ ಮೇಲೆ ಪಾತ್ರಧಾರಿಗಳು ವ್ಯಕ್ತಪಡಿಸುವ ಬೌದ್ಧಿಕ ಚಿಂತನೆಗಳು ಮತ್ತು ಸಾಂಸ್ಕೃತಿಕ ಆಲೋಚನೆಗಳು ಯಾವುದೇ ಸೈದ್ಧಾಂತಿಕ ಹೊದಿಕೆ ಹೊಂದಿರಲು ಸಾಧ್ಯವಿಲ್ಲ. ಆದರೆ ಸೈದ್ಧಾಂತಿಕ ಚಿಂತನೆಗಳ ಅನುಸಂಧಾನದೊಡನೆ, ಸಮಾಜದಲ್ಲಿ ಎದುರಾಗುವ ಸವಾಲುಗಳಿಗೆ ಮುಖಾಮುಖಿಯಾಗುವ ರೀತಿಯಲ್ಲಿ ನಾಟಕಗಳು ರೂಪುಗೊಳ್ಳುತ್ತವೆ. ನಾಟಕದ ಕರ್ತೃವಾಗಲೀ, ನಿರ್ದೇಶಕರಾಗಲೀ ಅಥವಾ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ನಟರಾಗಲೀ ತಮ್ಮ ವ್ಯಕ್ತಿಗತ ಆಲೋಚನಾ ನೆಲೆಗಳನ್ನು ಬದಿಗಿಟ್ಟು ತಮ್ಮ ಕಲಾಭಿವ್ಯಕ್ತಿಯನ್ನು ಜನರ ಮುಂದಿಡುತ್ತಾರೆ.

ಮುಂದುವರೆಯಲಿದೆ…..

Tags: ಅಡ್ಡಂಡ ಕಾರ್ಯಪ್ಪಬಹುರೂಪಿ ನಾಟಕೋತ್ಸವಮೈಸೂರುರಂಗಾಯಣವಿವಾದ
Previous Post

ಸಾಮಾಜಿಕ ಬದ್ಧತೆಯನ್ನೇ ಬದುಕಿದ ಪತ್ರಕರ್ತ ಮಲ್ಲನಗೌಡರಿಗೆ ವಿದಾಯ

Next Post

ಸಿಎಂ ಬದಲಾವಣೆ: ಅಮಿತ್ ಶಾ ಸಂದೇಶ ಹೊತ್ತೇ ಕೋರ್ ಕಮಿಟಿಗೆ ಬರುತ್ತಿದ್ದಾರಾ ಜೆ ಪಿ ನಡ್ಡಾ?

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಸಿಎಂ ಬದಲಾವಣೆ: ಅಮಿತ್ ಶಾ ಸಂದೇಶ ಹೊತ್ತೇ ಕೋರ್ ಕಮಿಟಿಗೆ ಬರುತ್ತಿದ್ದಾರಾ ಜೆ ಪಿ ನಡ್ಡಾ?

ಸಿಎಂ ಬದಲಾವಣೆ: ಅಮಿತ್ ಶಾ ಸಂದೇಶ ಹೊತ್ತೇ ಕೋರ್ ಕಮಿಟಿಗೆ ಬರುತ್ತಿದ್ದಾರಾ ಜೆ ಪಿ ನಡ್ಡಾ?

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada