• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಬಿಎಂಪಿ ಚುನಾವಣೆ: ವಲಸಿಗ ಸಚಿವರಿಗೆ ಕಾಡ್ತಿದ್ಯಾ ಟಿಕೆಟ್ ಹಂಚಿಕೆ ಆತಂಕ?

ನಚಿಕೇತು by ನಚಿಕೇತು
December 22, 2021
in ಕರ್ನಾಟಕ, ರಾಜಕೀಯ
0
ಬಿಬಿಎಂಪಿ ಚುನಾವಣೆ: ವಲಸಿಗ ಸಚಿವರಿಗೆ ಕಾಡ್ತಿದ್ಯಾ ಟಿಕೆಟ್ ಹಂಚಿಕೆ ಆತಂಕ?
Share on WhatsAppShare on FacebookShare on Telegram

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ. 2022ರ ಮಾರ್ಚ್ ತಿಂಗಳಿನಲ್ಲಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ADVERTISEMENT

ಅವಧಿ ಮುಗಿದ್ರೂ, ಇನ್ನೂ ಬಿಬಿಎಂಪಿ ಎಲೆಕ್ಷನ್ ಪ್ರಕಟವಾಗಿಲ್ಲ. ಕೆಲವೇ ದಿನಗಳಲ್ಲಿ ಬಿಬಿಎಂಪಿಗೆ ಚುನಾವಣೆ ಘೋಷಣೆಯಾಗಬಹುದು. ಹೀಗಿರುವಾಗಲೇ ಸಚಿವರುಗಳಿಗೆ ಬಿಬಿಎಂಪಿ ಚುನಾವಣೆಗೂ ಮುನ್ನವೇ ಟೆನ್ಷನ್ ಶುರುವಾಗಿದೆಯಂತೆ. ಹೌದು,  ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಮೂಲ ಮತ್ತು ವಲಸಿಗರ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ.  ನಾವಾ ನೀವಾ ಅನ್ನೋ ಪೈಪೋಟಿ ಆಗುತ್ತಲೇ ಇದೆ. ಸದ್ಯ ಈ  ಸಮರ ಬಿಬಿಎಂಪಿ ಚುನಾವಣಾ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿಗೆ ಚುನಾವಣೆ ಘೋಷಣೆಯಾಗಲಿದ್ದು, ಈಗ ವಲಸಿಗರು-ಮೂಲ ಬಿಜೆಪಿಗರ ಮಧ್ಯೆ ಟಿಕೆಟ್ ಕಿತ್ತಾಟ ಶುರುವಾಗಿದೆ ಎನ್ನಲಾಗಿದೆ.

ಬಿಬಿಎಂಪಿ ಎಲೆಕ್ಷನ್ ವಿಚಾರ ಸುಪ್ರಿಂಕೋರ್ಟ್ ಅಂಗಳದಲ್ಲಿದೆ. ಅವಧಿ ಮುಗಿದ್ರೂ, ಪಾಲಿಕೆ ಎಲೆಕ್ಷನ್ ಅಧಿಸೂಚನೆ ಪ್ರಕಟವಾಗಿಲ್ಲ. ವಾರ್ಡ್ ಮರು ವಿಂಗಡಣೆ ನೆಪದಲ್ಲಿ ಪಾಲಿಕೆ ಚುನಾವಣೆ ವಿಳಂಬವಾಗ್ತಿದೆ. ಸರ್ಕಾರ, ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ನೆಪ ಹೇಳ್ತಿದೆ. ಈಗ ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆ ವಿಚಾರವನ್ನ ಇತ್ಯರ್ಥ ಮಾಡೋ ಸಾಧ್ಯತೆ ಇದೆ. ಈ ಮಧ್ಯೆ ಬಿಬಿಎಂಪಿ ಚುನಾವಣೆಗೆ ವಲಸಿಗ ನಗರ ಸಚಿವರಲ್ಲಿ ಆತಂಕವಾಗ್ತಿದೆ. ಬೈರತಿ ಬಸವರಾಜು, ಗೋಪಾಲಯ್ಯ, ಸೋಮಶೇಖರ್, ಮುನಿರತ್ನಗೆ ತಲೆಬಿಸಿ ಶುರುವಾಗ್ತಿದೆ.


ಕಾಂಗ್ರೆಸ್ನಲ್ಲಿದ್ದ ಕೆಲ ನಗರ ಶಾಸಕರು ಈಗ ಬಿಜೆಪಿಯಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಬಗ್ಗೆ ಪೈಪೋಟಿ ಸಹಜವಾಗೇ ಇದೆ. ಮೂಲ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಟಿಕೆಟ್ ಸಿಗುವ ವಿಶ್ವಾಸವಿದೆ. ಆದ್ರೆ, ಮತ್ತೊಂದೆಡೆ ಮೂಲ ಹಾಗೂ ವಲಸಿಗ ಕಾರ್ಯಕರ್ತರಲ್ಲಿ ಟಿಕೆಟ್ಗೆ ಪೈಪೋಟಿ ಶುರುವಾಗಿದೆ. ಸದ್ಯಕ್ಕೆ ಬಿಬಿಎಂಪಿ ಚುನಾವಣೆ ಬೇಡವೇ ಬೇಡ ಎಂಬ ಒತ್ತಾಯವೂ ಕೇಳಿ ಬರ್ತಿದೆ. ಬಿಬಿಎಂಪಿ ಎಲೆಕ್ಷನ್ ಇನ್ನಷ್ಟು ವಿಳಂಬವಾಗಲಿ ಎಂಬ ಅಭಿಮತವೂ ಇದೆ.

ಬಿಬಿಎಂಪಿ ಚುನಾವಣೆಗೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮೂಲ ಬಿಜೆಪಿಗರು ಮತ್ತು ವಲಸಿಗ ಸಚಿವರು ಪೈಪೋಟಿ ಶುರುವಾಗಿರೋದಂತೂ ಸುಳ್ಳಲ್ಲ. ಆದ್ರೆ, ಸರ್ಕಾರ ಮೂಲ ಬಿಜೆಪಿ ನಾಯಕರ ಬೆಂಬಲಿಗರಿಗೆ ಮಣೆ ಹಾಕುತ್ತಾ? ಅಥವಾ ಸರ್ಕಾರ ರಚನೆಯಲ್ಲಿ ಬೆಂಬಲಕೊಟ್ಟವರ ಕೈ ಹಿಡಿಯುತ್ತಾ ಅನ್ನೋದನ್ನು ಕಾದು ನೋಡ್ಬೇಕು.

ಎಲೆಕ್ಷನ್ ಯಾಕೆ ವಿಳಂಬ?

ಈ ಹಿಂದೆಯೇ 2020ರ ಸೆಪ್ಟೆಂಬರ್‌ನಲ್ಲಿ ಪಾಲಿಕೆ ಕೌನ್ಸಿಲ್ ಅವಧಿ ಪೂರ್ಣಗೊಂಡಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತು. ಬಳಿಕ 198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ಚುನಾವಣೆ ವಿಳಂಬವಾಗಿದೆ.

ನಾಲ್ವರು ಅಧಿಕಾರಿಗಳ ನೇಮಕಬಿಬಿಎಂಪಿಗೆ ಹೊಸದಾಗಿ ಸೇರಬೇಕಾದ ವಾರ್ಡ್‌ಗಳ ಪುನರ್ ವಿಂಗಡನೆ ಆಗಬೇಕಿದೆ. ಇದಕ್ಕಾಗಿ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಾರ್ಡ್ ಪುನರ್ ವಿಂಗಡನಾ ಸಮಿತಿಯನ್ನು ರಚಿಸಿದೆ. ವಾರ್ಡ್‌ ಪುನರ್ ವಿಂಗಡನೆಗೆ 2022ರ ಜನವರಿ ತನಕ ಅವಕಾಶ ನೀಡಿ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದೆ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

`ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ’? : 2021 ರಲ್ಲಿ ಭಾರತೀಯರ ಅಗ್ರ ಗೂಗಲ್ ಹುಡುಕಾಟ

Next Post

ದೇಶದ್ರೋಹ ಆರೋಪದ ಮೇಲೆ 20 ಯೂಟ್ಯೂಬ್‌ ಚಾನೆಲ್ ಹಾಗೂ 2 ನ್ಯೂಸ್ ವೆಬ್ ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ದೇಶದ್ರೋಹ ಆರೋಪದ ಮೇಲೆ 20 ಯೂಟ್ಯೂಬ್‌ ಚಾನೆಲ್ ಹಾಗೂ 2 ನ್ಯೂಸ್ ವೆಬ್ ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

ದೇಶದ್ರೋಹ ಆರೋಪದ ಮೇಲೆ 20 ಯೂಟ್ಯೂಬ್‌ ಚಾನೆಲ್ ಹಾಗೂ 2 ನ್ಯೂಸ್ ವೆಬ್ ಸೈಟ್‌ ನಿಷೇಧಿಸಿದ ಕೇಂದ್ರ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada