• Home
  • About Us
  • ಕರ್ನಾಟಕ
Wednesday, January 14, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಆಲೂಗೆಡ್ಡೆ ಬೆಳೆದು ಕೊಟ್ಟ ರೈತರ ಮೇಲಯೇ ಮೊಕದ್ದಮೆ ಹೂಡಿದ್ದ ಪೆಪ್ಸಿ-LAYS ಗೆ ಕಪಾಳಮೋಕ್ಷ: ಪೇಟೆಂಟ್ ಹಕ್ಕನ್ನು ಕಿತ್ತೊಗೆದ ಭಾರತ

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 5, 2021
in ವಿದೇಶ
0
ಆಲೂಗೆಡ್ಡೆ ಬೆಳೆದು ಕೊಟ್ಟ ರೈತರ ಮೇಲಯೇ ಮೊಕದ್ದಮೆ ಹೂಡಿದ್ದ ಪೆಪ್ಸಿ-LAYS ಗೆ ಕಪಾಳಮೋಕ್ಷ: ಪೇಟೆಂಟ್ ಹಕ್ಕನ್ನು ಕಿತ್ತೊಗೆದ ಭಾರತ
Share on WhatsAppShare on FacebookShare on Telegram

ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ರಕ್ಷಣೆ (ಪಿಪಿವಿಎಫ್‌ಆರ್) ಪ್ರಾಧಿಕಾರವು ಶುಕ್ರವಾರ ಹೊರಡಿಸಿದ ಆದೇಶದ ಪ್ರಕಾರ, ಪೆಪ್ಸಿಕೋ ಕಂಪನಿಯ ಜನಪ್ರಿಯ LAYs ಆಲೂಗೆಡ್ಡೆ ಚಿಪ್ಸ್‌ಗಳಿಗಾಗಿ ಪ್ರತ್ಯೇಕವಾಗಿ ಬೆಳೆದ ಆಲೂಗಡ್ಡೆ ತಳಿಯ ಪೇಟೆಂಟ್ ಅನ್ನು ಭಾರತ ರದ್ದುಗೊಳಿಸಿದೆ.

ADVERTISEMENT

ಇದರಿಂದ ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೊಗೆ ಕಪಾಳಮೋಕ್ಷವಾಗಿದೆ. ಆಲೂಗೆಡ್ಡೆ ಬೆಳೆದು ಕೊಟ್ಟ ರೈತರ ಮೇಲೆಯೇ ಈ ರಾಕ್ಷಸ ಕಂಪನಿ ಮೊಕದ್ದಮೆ ಹೂಡುವ ಮೂಲಕ ಅಧಿಕಪ್ರಸಂಗತನ ಮೆರೆದಿತ್ತು.

ತಾನು ಕೊಟ್ಟ ಬೀಜಗಳನ್ನು ತನಗಾಗಿ ಮಾತ್ರ ಬೆಳೆಯಬೇಕು ಎಂದು ಸರ್ವಾಧಿಕಾರಿ ಧೋರಣೆ ತೋರಿತ್ತು. ಪೆಪ್ಸಿಕೊ ಒಪ್ಪಂದದಿಂದ  ಆಚೆ ಬಂದ ರೈತರು ಎಫ್‌ಸಿ-5 ತಳಿಯನ್ನು ಬೆಳೆಯಕೂಡದು ಎಂದು ಅದು ಕೆಲವು ರೈತರ ಮೇಲೆ ಮೊಕದ್ದಮೆ ಹೂಡಿತ್ತು.

2019 ರಲ್ಲಿ, ಪೆಪ್ಸಿಕೋ ಗುಜರಾತ್ ಮೂಲದ ಕೆಲವು ರೈತರ ಮೇಲೆ FC5 ಆಲೂಗೆಡ್ಡೆ ತಳಿಯ ಕುರಿತಾಗಿ ಮೊಕದ್ದಮೆ ಹೂಡಿತ್ತು. ಈ ತಳಿಯು ಆಲೂಗಡ್ಡೆ ಚಿಪ್ಸ್‌ನಂತಹ ತಿಂಡಿಗಳನ್ನು ತಯಾರಿಸಲು ಅಗತ್ಯವಾದ ಕಡಿಮೆ ತೇವಾಂಶವನ್ನು ಹೊಂದಿದೆ.

ಅದೇ ವರ್ಷ ಮೊಕದ್ದಮೆಗಳನ್ನು ಹಿಂತೆಗೆದುಕೊಂಡ ನ್ಯೂಯಾರ್ಕ್ ಮೂಲದ ಪೆಪ್ಸಿಕೋ ಕಂಪನಿಯು ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಬಯಸಿದ್ದೇವೆ ಎಂದು ಹೇಳಿತ್ತು.

ನಂತರ, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ, ಪೆಪ್ಸಿಕೋದ ಎಫ್‌ಸಿ 5 ಆಲೂಗೆಡ್ಡೆ ಪ್ರಭೇದಕ್ಕೆ ನೀಡಲಾದ ಬೌದ್ಧಿಕ  ಹಕ್ಕು (ಪೇಟೆಂಟ್‌ ರೈಟ್‌) ರಕ್ಷಣೆಯನ್ನು ಹಿಂಪಡೆಯಲು ʼಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರಕ್ಕೆ (ಪಿಪಿವಿಎಫ್ಆರ್ ) ಅರ್ಜಿ ಸಲ್ಲಿಸಿದರು, ಭಾರತದ ನಿಯಮಗಳು ಬೀಜ ಪ್ರಭೇದಗಳ ಮೇಲೆ ಪೇಟೆಂಟ್ ಅನ್ನು ಅನುಮತಿಸುವುದಿಲ್ಲ ಎಂದು ಕವಿತಾ ವಾದ ಮಾಡಿದರು.

ಬೀಜ ವೈವಿಧ್ಯದ ಮೇಲೆ ಪೆಪ್ಸಿ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕುರುಗಂಟಿಯವರ ವಾದವನ್ನು PPVFR ಪ್ರಾಧಿಕಾರವು ಒಪ್ಪಿಕೊಂಡಿತು.

“ನೋಂದಣಿ ಪ್ರಮಾಣಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ” ಎಂದು ಪಿಪಿವಿಎಫ್ಆರ್ ಪ್ರಾಧಿಕಾರದ ಅಧ್ಯಕ್ಷ ಕೆ ವಿ ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ.

ಪೆಪ್ಸಿಕೊ ಇಂಡಿಯಾ ವಕ್ತಾರರು, “PPVFR ಪ್ರಾಧಿಕಾರವು ಜಾರಿಗೊಳಿಸಿದ ಆದೇಶದ ಬಗ್ಗೆ ನಮಗೆ ತಿಳಿದಿದೆ ಮತ್ತು ಅದನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಹೇಳಿದ್ದಾರೆ.

ಪೆಪ್ಸಿಕೋ ತಾನು FC5 ವಿಧದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದ್ದು, 2016 ರಲ್ಲಿ ಗುಣಲಕ್ಷಣವನ್ನು ನೋಂದಾಯಿಸಿದೆ ಎಂದು ಸಮರ್ಥಿಸಿಕೊಂಡಿತ್ತು..

1989 ರಲ್ಲಿ ಭಾರತದಲ್ಲಿ ತನ್ನ ಮೊದಲ ಆಲೂಗೆಡ್ಡೆ ಚಿಪ್ಸ್ ಸ್ಥಾವರವನ್ನು ಸ್ಥಾಪಿಸಿದ ಕಂಪನಿಯು FC5 ಬೀಜದ ವಿಧವನ್ನು ರೈತರ ಗುಂಪಿಗೆ ಪೂರೈಸುತ್ತದೆ, ಅವರು ತಮ್ಮ ಉತ್ಪನ್ನಗಳನ್ನು ಕಂಪನಿಗೆ ನಿಗದಿತ ಬೆಲೆಗೆ ಮಾರಾಟ ಮಾಡುತ್ತಾರೆ.

PPVFR ಪ್ರಾಧಿಕಾರದ ತೀರ್ಪನ್ನು ಶ್ಲಾಘಿಸಿದ ಗುಜರಾತ್‌ನ ಆಲೂಗಡ್ಡೆ ರೈತರು, ಇದು ಬೆಳೆಗಾರರ ವಿಜಯ ಎಂದು ಹೇಳಿದ್ದಾರೆ.

“ಈ ಆದೇಶವು ಭಾರತದ ರೈತರಿಗೆ ದೊಡ್ಡ ವಿಜಯವಾಗಿದೆ ಮತ್ತು ಯಾವುದೇ ಬೆಳೆಗಳನ್ನು ಬೆಳೆಯುವ ಅವರ ಹಕ್ಕನ್ನು ಪುನರುಚ್ಚರಿಸುತ್ತದೆ” ಎಂದು 2019 ರಲ್ಲಿ ಪೆಪ್ಸಿಯಿಂದ ಮೊಕದ್ದಮೆ ಹೂಡಲ್ಪಟ್ಟಿದ್ದ ಗುಜರಾತ್ ಮೂಲದ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ಹೇಳಿದ್ದಾರೆ.

Previous Post

8000 ಕೋಟಿ ವಿಮಾನ ಖರೀದಿಸುವ ಮೋದಿಗೆ 4000 ಕೋಟಿ ರೂ. ಕಬ್ಬಿನ ಬಾಕಿ ನೀಡೊಕೆ ಆಗ್ತಿಲ್ಲ – ಪ್ರಿಯಾಂಕಾ ಗಾಂಧಿ

Next Post

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಮೇಲೆ ಯುಪಿ ಪೊಲೀಸರಿಂದ ಲಾಠಿ ಚಾರ್ಜ್ : ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಆಕ್ರೋಶ

Related Posts

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ
Top Story

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ವಿವಿ ಕ್ಯಾಂಪಸ್ ಆರಂಭ: ಎಂ.ಬಿ.ಪಾಟೀಲ

by ಪ್ರತಿಧ್ವನಿ
January 12, 2026
0

ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿವಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ತನ್ನ ಕ್ಯಾಂಪಸ್ ಆರಂಭಿಸಲಿದೆ. ಈ...

Read moreDetails
US Airstrikes Syria: ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್

US Airstrikes Syria: ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಭೀಕರ ಏರ್‌ಸ್ಟ್ರೈಕ್

January 11, 2026
ಜಾಗತಿಕ ಮಟ್ಟದಲ್ಲಿ ಅಪಾಯ: “ಕೋಡಿ” ಸ್ಫೋಟಕ ಭವಿಷ್ಯ

ಜಾಗತಿಕ ಮಟ್ಟದಲ್ಲಿ ಅಪಾಯ: “ಕೋಡಿ” ಸ್ಫೋಟಕ ಭವಿಷ್ಯ

January 10, 2026
ವಿನಾಶಕಾರಿ ಯುದ್ಧಪರಂಪರೆ-ಸಾಮ್ರಾಜ್ಯಶಾಹಿ ದಾಹ

ವಿನಾಶಕಾರಿ ಯುದ್ಧಪರಂಪರೆ-ಸಾಮ್ರಾಜ್ಯಶಾಹಿ ದಾಹ

January 7, 2026

ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು: ಸಚಿವ ಎನ್.ಎಸ್. ಭೋಸರಾಜು

January 6, 2026
Next Post
ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಮೇಲೆ ಯುಪಿ ಪೊಲೀಸರಿಂದ ಲಾಠಿ ಚಾರ್ಜ್ : ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಆಕ್ರೋಶ

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಮೇಲೆ ಯುಪಿ ಪೊಲೀಸರಿಂದ ಲಾಠಿ ಚಾರ್ಜ್ : ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಆಕ್ರೋಶ

Please login to join discussion

Recent News

Top Story

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

by ಪ್ರತಿಧ್ವನಿ
January 13, 2026
Top Story

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

by ಪ್ರತಿಧ್ವನಿ
January 13, 2026
ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿದ್ದು, ಬಿಎಸ್ವೈ ಅವರಂತೆ ಕೆಲಸಮಾಡಿ ಜನಪ್ರಿಯ ನಾಯಕಿಯಾಗೋ ಹುಚ್ಚಿದೆ : ಲಕ್ಷ್ಮಿ ಹೆಬ್ಬಾಳ್ಕರ್ ಭಾವನಾತ್ಮಕ ಮಾತು..

January 13, 2026

ಇತಿಹಾಸ ಸೃಷ್ಟಿಸಿದ ಕುಣಿಗಲ್ ಉತ್ಸವ ! 35 ಸಾವಿರ ಜನ ಜನರ ಉಪಸ್ಥಿತಿಯಲ್ಲಿ ನಡೆದ ಬೃಹತ್ ತಾರಾಮೇಳ !

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada