ದಿನ ಬಳಕೆಯ ವಸ್ತುಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಸಮಯದಲ್ಲಿ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಟಿ ವಿ ಚಾನೆಲ್ ವೀಕ್ಷಣಾ ವೆಚ್ಚ ಶೇ 50 ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲೂ ಮನೋರಂಜನಾ ಚಾನೆಲ್ ಗಳ ಬೆಲೆ ಗರಿಷ್ಠ ಹೆಚ್ಚಳ ಕಾಣಲಿದೆ.
ಗಗನಕ್ಕೇರಿರುವಂತ ಬೆಲೆಗಳಿಂದ ಸರಿ ಸಮಾನವಾಗಿ ಟಿವಿ ಚಾನಲ್ ಬೆಲೆ ಹೆಚ್ಚಳ ಕುರಿತಂತೆ ಟ್ರಾಯ್ಡ್ ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಆಂಡ್ ಡಿಜಿಟಲ್ ಫೆಡರೇಷನ್ ಕೋರಿಕೆ ಸಲ್ಲಿಸಿತ್ತು. ಆದ್ರೇ ಇದಕ್ಕೆ ಟ್ರಾಯ್ಡ್ ಸಮ್ಮತಿಸಿರಲಿಲ್ಲ. ಇದೀಗ ಟಿವಿ ಚಾನಲ್ ಪ್ರಸಾರ ಕಂಪನಿಗಳು ಟ್ರಾಯ್ಡ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
ಸುಪ್ರೀಂ ಕೋರ್ಟ್ ನಲ್ಲಿ ಟಿವಿ ಚಾನಲ್ ದರಗಳನ್ನು ಶೇ.50ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿವೆ. ನವೆಂಬರ್ 1 ರಿಂದಲೇ 12ರೂ ಹೆಚ್ಚಳ ಮಾಡುವಂತೆ ಕೋರಿಕೊಂಡಿವೆ. ಈ ಪ್ರಸ್ತಾವನೆಯನ್ನ ಸುಪ್ರೀಂ ಕೋರ್ಟ್ ಅಂಗೀಕರಿಸಿದರೆ ಡಿಸೆಂಬರ್ ನಿಂದಲೇ ಕೇಬಲ್ ಟಿವಿ ಚೆಂದದಾರಿಕೆ ದಗಳು ಶೇ.50ರಷ್ಟು ಹೆಚ್ಚಳವಾಗಲಿವೆ. ಈ ಮೂಲಕ ಟಿವಿ ನೋಡುಗರಿಗೆ ಬಿಗ್ ಶಾಕ್ ನೀಡಲಿದೆ.