ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ ಎಂಬ ಗಾದೆ ಮಾತು ಈ ಮಕ್ಕಳಿಗೆ ಸೂಕ್ತವಾಗಿ ಅನ್ವಯಿಸುತ್ತದೆ. SSLC ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳನ್ನು ಶಿಕ್ಷಣ ಇಲಾಖೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಿತ್ತು. ಅದರೀಗ ಪೂರಕ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿಧ್ಯಾರ್ಥಿಗಳನ್ನೂ ಪಾಸ್ ಮಾಡುವಂತೆ ಒತ್ತಾಸೆ ಕೇಳಿ ಬರುತ್ತಿದೆ.
23 ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ SSLC ಪರೀಕ್ಷೆಗೆ ಕಾಯಬೇಕು ಇನ್ನೊಂದು ವರ್ಷ!
ಶಿಕ್ಷಣ ಇಲಾಖೆಯ ಹೇಳೊದೊಂದು ಮಾಡೊದು ಇನ್ನೊಂದು ಎನ್ನವಂತಾಗಿದೆ. ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ ಕಾರಣಕ್ಕೆ 2020-21ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಹೀಗಾಗಿ ಅನಿರ್ವಾಯವಾಗಿ ಪರೀಕ್ಷಾ ಮಂಡಳಿ ಸರಳವಾಗಿ ಎರಡು ದಿನಗಳ ಕಾಲ ಎಕ್ಸಾಂ ಮಾಡಿತ್ತು.. ಎಕ್ಸಾಂ ಬರೆದವರಿಗೆಲ್ಲ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಕೂಡಾ ಮಾಡಿದೆ. ಆದ್ರೆ ಕೊವಿಡ್ ಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಬಹಷ್ಟು ವಿದ್ಯಾರ್ಥಿಗಳು ಕೊರೊನಾ ಭೀತಿಗೆ ಹೆದರಿ ಮೊದಲ ಆಯೋಜನೆಯಲ್ಲಿ ಪರೀಕ್ಷೆಯನ್ನ ತೆಗೆದುಕೊಳ್ಳಲು ಹಿಂದೆಟ್ಟು ಹಾಕಿದ್ದರು.
ಇವರಿಗೆಲ್ಲ ಕಳೆದ ತಿಂಗಳ ಸೆಪ್ಟೆಂಬರ್ 27-29 ರಂದು ಎಕ್ಸಾಂ ಮಾಡಲಾಗಿದೆ. ಸುಮಾರು 53,155 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲಾಯ್ತು. ಈ ಹಿಂದೆ ಜುಲೈ ಸಮಯದಲ್ಲಿ ಪರೀಕ್ಷೆ ಬರೆದವರನ್ನ ಕೊರೊನಾ ಆತಂಕದ ಕಾರಣಕ್ಕೆ ಯಾವ ವಿದ್ಯಾರ್ಥಿಯನ್ನೂ ಫೇಲ್ ಮಾಡೋದಿಲ್ಲ. ಬದಲಿಗೆ ಕಡಿಮೆ ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಎಲ್ಲರನ್ನೂ ಪಾಸ್ ಮಾಡಲಾಗಿದೆ. ಆದರೆ ಈ ಸಲ ಪರೀಕ್ಷೆ ಬರೆದು ಫೇಲ್ ಆದವರಿಗೆ ಶಿಕ್ಷಣ ಇಲಾಖೆ ಗ್ರೇಸ್ ಮಾರ್ಕ್ಸ್ ನೀಡಿಲ್ಲ ಹೀಗಾಗಿ 23,655 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಇನ್ನು ವಿದ್ಯಾರ್ಥಿಗಳು, ಪೋಷಕರು ಶಿಕ್ಷಣ ಇಲಾಖೆ ಈ ನಡೆಗೆ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಹಿಂದೆ ಜುಲೈ ಸಮಯದಲ್ಲಿ ಪರೀಕ್ಷೆ ಬರೆದವರನ್ನ ಕೊರೊನಾ ಆತಂಕದ ಕಾರಣಕ್ಕೆ ಯಾವ ವಿದ್ಯಾರ್ಥಿಯನ್ನೂ ಫೇಲ್ ಮಾಡೋದಿಲ್ಲ ಎಂದು ಹೇಳಿ ಎಲ್ಲಾರನ್ನು ಪಾಸ್ ಮಾಡಿದ್ದರು. ಇದೀಗ ಪೂರಕ ಪರೀಕ್ಷೆ ಬರೆದ 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಫೇಲ್ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಶಿಕ್ಷಣ ಸಚಿವರನ್ನ ಪ್ರಶ್ನಿಸಿದ್ದಾರೆ. ಇತ್ತ SSLC ಬೋರ್ಡ್ ನಿರ್ದೇಶಕಿ ಸುಮಗಂಲ ಮಾತ್ರ ಇಲಾಖೆಯ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲ ಪರೀಕ್ಷೆ ಯಾರು ಬರೆದಿದ್ದವರಿಗೆ ಅಷ್ಟೇ ಪಾಸ್ ಆಗಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆ ಅವಕಾಶ ಉಪಯೋಗಿಸಿಕೊಳ್ಳುವುದು, ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಯಾರು ಅವಕಾಶ ಉಪಯೋಗಿಸಿಕೊಂಡಿಲ್ಲ, ಅವರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದ್ದೇವೆ ಹೊರತು, ಎಲ್ಲರನ್ನೂ ಪಾಸ್ ಮಾಡ್ತಿವಿ ಅಂತ ಹೇಳಿಲ್ಲ ಅಂತಿದ್ದಾರೆ. ಒಟ್ಟಾರೆಯಾಗಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಪಾಸ್ ಎಂದು ಕೊಂಡವರಿಗೆ ನಿರಾಸೆ ಜೊತೆಗೆ ಆತಂಕ ಎದುರಾಗಿದೆ. ಒಂದು ವರ್ಷದ ಶೈಕ್ಷಣಿಕ ವರ್ಷದ ಭವಿಷ್ಯ ಹಾಳಾಗುವ ಭಯ ಮಕ್ಕಳಲ್ಲಿ, ಪೋಷಕರಲ್ಲಿ ಕಾಡ್ತಿದೆ. ಹೀಗಾಗಿ ಶಿಕ್ಷಣ ಸಚಿವರ ಮನವಿಗೆ ಮುಂದಾಗಿದ್ದಾರೆ.