ಭಾರತವು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಉತ್ತುಂಗದಲ್ಲಿದೆಯೇ? ಗುರುವಾರದ ಅಂಕಿಅಂಶಗಳು ಅಂತಹ ಅನುಮಾನಗಳನ್ನು ಹುಟ್ಟುಹಾಕಿವೆ. ದೇಶವು ಮತ್ತೊಂದು ಉಲ್ಬಣವನ್ನು ಎದುರಿಸಲು ಸಜ್ಜಾಗಬೇಕು ಎಂಬ ಸುಳಿವು ನೀಡಿವೆ. 47,092 ಹೊಸ ಸೋಂಕುಗಳು ವರದಿಯಾಗಿರುವುದರಿಂದ ಭಾರತದ ದೈನಂದಿನ ಕೋವಿಡ್ ಸಂಖ್ಯೆಗಳು 12 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ಕಳೆದ ಎರಡು ತಿಂಗಳಲ್ಲಿ ದಿನದ ಮಟ್ಟಿಗೆ ಕಂಡುಬಂದ ಅತಿದೊಡ್ಡ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 509 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೇರಳ ರಾಜ್ಯವೊಂದರಲ್ಲೇ ನಿನ್ನೆ (ಸೆಪ್ಟೆಂಬರ್ 1) 32,803 ಪ್ರಕರಣಗಳು ಪತ್ತೆಯಾಗಿವೆ.
ಇದರರ್ಥ ಭಾರತವು ಶೀಘ್ರದಲ್ಲೇ ಹೊಸ ಅಲೆಯನ್ನು ಎದುರಿಸಲು ಸಾಧ್ಯವೇ? ಶಾಲೆಗಳು ಮತ್ತೆ ಆರಂಭ ಆಗುತ್ತಿದ್ದಂತೆ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಈ ಹೊಸ ಉಲ್ಬಣವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ನಿರೀಕ್ಷೆಯಿದೆ. ಮೂರನೇ ಅಲೆ ದೇಶಾದ್ಯಂತ ಯಾವ ರೀತಿಯ ದುಷ್ಪರಿಣಾಮ ಬೀರುತ್ತಿದೆ? ಭಾರತವು ಈ ಭಯಾನಕ ಪರಿಸ್ಥಿತಿಯನ್ನು ನಿಭಾಯಿಸಲು ಹೇಗೆ ಸಜ್ಜಾಗಿದೆ ಎಂಬ ವಿಷಯದ ಮೇಲೆ ಇಲ್ಲಿ ಬೆಳಕುಚೆಲ್ಲುವ ಪ್ರಯತ್ನ ಮಾಡಲಾಗಿದೆ.
ನಿಜವಾಗಿಯೂ 3ನೇ ಅಲೆ ಯಾವಾಗ ಬರುತ್ತದೆ?
ಭಾರತದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ವಿಶೇಷವಾಗಿ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಕಂಡುಹಿಡಿಯಲು ವಯಸ್ಕರಿಗೆ ಲಸಿಕೆ ಹಾಕಿಸುವ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಹಿಂದೆ ಪ್ರಕರಣಗಳು ಗಗನಮುಖಿಯಾಗಿದ್ದಾಗ,ಸಾವುಗಳ ಸಂಖ್ಯೆ ಹೆಚ್ಚಾದಾಗ ಮತ್ತು ವೈದ್ಯಕೀಯ ಮೂಲಸೌಕರ್ಯವು ಹೆಚ್ಚು ಹೊರೆಯಾದಾಗ ಎರಡನೇ ಅಲೆ ಸೃಷ್ಟಿಸಿದ ಪರಿಸ್ಥಿತಿಯನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ತಜ್ಞರು ಅಕ್ಟೋಬರ್ನಲ್ಲಿ ಮೂರನೇ ಅಲೆ ಸಂಭವಿಸುತ್ತದೆ ಎಂದು ಹೇಳಿದ್ದಾರೆ. ನವೆಂಬರ್ನಲ್ಲಿ ಉತ್ತುಂಗ ತಲುಪಬಹುದು ಎಂಬ ಊಹೆಯನ್ನೂ ಮಾಡಿದ್ದಾರೆ. ಆದರೆ ಇದು ವೈರಸ್ನ ಹೆಚ್ಚು ತೀವ್ರವಾದ ಸ್ಟ್ರೈನ್ ಹೊರಹೊಮ್ಮಿದೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಕೊರೋನಾ ವೈರಸ್ನ ಇತರ ತಳಿಗಳಿಗಿಂತ ಡೆಲ್ಟಾ ರೂಪಾಂತರವು ಮಾರಕ ಮತ್ತು ಹೆಚ್ಚು ಸಾಂಕ್ರಾಮಿಕ ಎಂದು ಪತ್ತೆಯಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಇತರ ರಾಷ್ಟ್ರಗಳು – ಇಸ್ರೇಲ್, ಯುಎಸ್ – ಡೆಲ್ಟಾ ಹರಡುವಿಕೆಯನ್ನು ಎದುರಿಸಲು ಹೆಣಗಾಡಬೇಕಾಯಿತು. ಹೀಗಾಗಿ, ವೈರಸ್ನ ಹೆಚ್ಚು ಸಾಂಕ್ರಾಮಿಕ ರೂಪಾಂತರವು ಮೂರನೇ ಅಲೆಯನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ.
ಐಐಟಿ-ಕಾನ್ಪುರ ವಿಜ್ಞಾನಿ ಮನಿಂದ್ರ ಅಗರವಾಲ್ ನೇತೃತ್ವದ ಮೂವರು ತಜ್ಞರ ತಂಡವು ಸೋಂಕು ಯಾವುದೇ ಸಂದರ್ಭದಲ್ಲಿ ಏರಿಕೆ ಆಗಬಹುದು. ಅಕ್ಟೋಬರ್ ಮತ್ತು ನವೆಂಬರ್ ನಡುವೆ ಭಾರತವು ಕೋವಿಡ್ -19ರ ಮೂರನೇ ಅಲೆಯನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ಸದ್ಯ ಅಸ್ತಿತ್ವದಲ್ಲಿ ಇಲ್ಲದ ಹೊಸ ರೂಪಾಂತರಿ ತಳಿಗಳು ಸೆಪ್ಟೆಂಬರ್ ವೇಳೆಗೆ ಹೊರಹೊಮ್ಮುತ್ತವೆ. ಆದರೆ ಅದರ ತೀವ್ರತೆಯು ಎರಡನೇ ಅಲೆಗಿಂತ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಹೊಸ ವೈರಂಟ್ ಹೊರಹೊಮ್ಮದಿದ್ದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿಲ್ಲ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಕೇರಳದ ಪರಿಸ್ಥಿತಿ ಹೇಗಿದ?
ವರದಿಗಳ ಪ್ರಕಾರ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿನ ಆತಂಕಕಾರಿ ಏರಿಕೆಯು ಆರೋಗ್ಯ ತಜ್ಞರಲ್ಲಿ ಕಳವಳ ಉಂಟುಮಾಡಿದೆ. ಈ ಹೆಚ್ಚಳವನ್ನು ಭಾರತದಲ್ಲಿ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಆರಂಭ ಎಂದು ಅಂದಾಜು ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೇರಳದಲ್ಲಿ ಮೂರನೇ ತರಂಗಕ್ಕೆ ಏರಿಕೆಯನ್ನು ಅಧಿಕೃತವಾಗಿ ಹೇಳಿಲ್ಲವಾದರೂ ಈ ವಾರ ಕೇರಳದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಪ್ರಕರಣಗಳಲ್ಲಿ ಶೇಕಡಾ 72ರಷ್ಟು ವರದಿಯಾಗಿದೆ. ಈ ಉಲ್ಬಣವು ಮೂರನೇ ಅಲೆಯ ಆರಂಭವಾಗಿರಬಹುದು ಎಂದು ಸೂಚಿಸುತ್ತದೆ ಮತ್ತು ನಾವು ಈಗ ಜಾಗರೂಕರಾಗಿರಬೇಕು. ನಾವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದೇವೆ ಮತ್ತು ಹೊಸ ಕೋವಿಡ್ ಅಲೆಗಳನ್ನು ಎದುರಿಸಲು ಸರ್ಕಾರವು ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ ಎಂದು ಕೆಲವರು ಹೇಳುತ್ತಾರೆ.
ಮಹಾರಾಷ್ಟ್ರ ಹಿಂದುಳಿದಿಲ್ಲ
ಮಹಾರಾಷ್ಟ್ರವು ಕೊರೋನಾ ವೈರಸ್ನ ಮೂರನೇ ಅಲೆಯನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಎದುರಿಸಲಿದೆ. ಏಕೆಂದರೆ ಮುಂದೆ ಹಬ್ಬದ ದಿನಗಳು ಎದುರಾಗಲಿವೆ. ಆ ಸಂದರ್ಭದಲ್ಲಿ ಕನಿಷ್ಠ 60 ಲಕ್ಷ ಜನರು ಕೋವಿಡ್ -19 ನಿಂದ ಸೋಂಕಿಗೆ ಒಳಗಾಗಬಹುದು ಎಂದು ಮಹಾರಾಷ್ಡ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ ಹೇಳಿದ್ದಾರೆ. ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಅಮಿತ್ ದೇಶಮುಖ್ ಮುಂಬರುವ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಕೋವಿಡ್ -19 ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಆತಂಕಕಾರಿ. ಜನರು ಕಟ್ಟುನಿಟ್ಟಾಗಿ ನಡವಳಿಕೆಯನ್ನು ಅನುಸರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.