ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಅನ್ನು ಮೊದಲು ಯೋಚಿಸಿದ್ದಕ್ಕಿಂತ 90 ದಿನಗಳ ಮೊದಲೇ ವಶಪಡಿಸಿಕೊಳ್ಳಬಹುದು ಎಂದು ಯುಎಸ್ ಗುಪ್ತಚರ ಇಲಾಖೆಯ ವರದಿಯನ್ನಾಧರಸಿ ರಾಯಿಟರ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ತಾಲಿಬಾನ್ ಶುಕ್ರವಾರದಂದು ಅಫ್ಘಾನಿಸ್ತಾನದಲ್ಲಿ ಒಂಬತ್ತು ಪ್ರಾಂತೀಯ ರಾಜಧಾನಿಗಳನ್ನು ಬಿರುಸಿನ ಮಿಲಿಟರಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದೆ. ತಾಲಿಬಾನ್ ಇನ್ನು 30 ದಿನಗಳಲ್ಲಿ ಕಾಬೂಲ್ ಅನ್ನು ವಶಪಡಿಸಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಸ್ಥಿತಿಯ ಬಗ್ಗೆ ಮಾತನಾಡಿದ ಯುಎಸ್ ಅಧಿಕಾರಿಯೊಬ್ಬರು ವಾಷಿಂಗ್ಟನ್ ಪೋಸ್ಟ್ಗೆ “ಎಲ್ಲವೂ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ” ಎಂದು ಹೇಳಿದ್ದಾರೆ.
ಈ ನಡುವೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಅಮೆರಿಕಾದ ಸೈನಿಕರನ್ನು ದೇಶದಿಂದ ಹೊರತೆಗೆಯುವ ನಿರ್ಧಾರಕ್ಕೆ ವಿಷಾದಿಸುವುದಿಲ್ಲ, ಅಫ್ಘಾನ್ ಪಡೆಗಳು ‘ತಮ್ಮ ರಾಷ್ಟ್ರಕ್ಕಾಗಿ ಹೋರಾಡಬೇಕು’ ಎಂದು ಒತ್ತಿ ಹೇಳಿದ್ದಾರೆ. “ನಾವು 20 ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಖರ್ಚು ಮಾಡಿದ್ದೇವೆ” ಎಂದು ಮಂಗಳವಾರ ಅವರು ಹೇಳಿದರು.
“ನಾವು 300,000 ಕ್ಕೂ ಹೆಚ್ಚು ಅಫಘಾನ್ ಪಡೆಗಳಿಗೆ ತರಬೇತಿ ಮತ್ತು ಆಧುನಿಕ ಉಪಕರಣಗಳನ್ನು ಒದಗಿಸಿದ್ದೇವೆ. ಸಾವು ಮತ್ತು ಗಾಯದಿಂದಾಗಿ ನಾವು ಸಾವಿರಾರು ಅಮೆರಿಕನ್ ಸಿಬ್ಬಂದಿಗಳನ್ನು ಕಳೆದುಕೊಂಡಿದ್ದೇವೆ. ಈಗ ಅಫ್ಘಾನ್ ನಾಯಕರು ಒಗ್ಗೂಡಬೇಕು” ಎಂದು ಅವರು ಹೇಳಿದ್ದಾರೆ.
ಕಾಬೂಲ್ನ್ನು ತಾಲಿಬಾನ್ ಯಾವಾಗ ವಶಪಡಿಸಿಕೊಳ್ಳಬಹುದುದು ಎಂದು ಆರಂಭದಲ್ಲಿ ಅಂದಾಜಿಸಿದ್ದಕ್ಕಿಂತ ಬೇಗನೆ ಕಾಬೂಲ್ನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಹಂತದಲ್ಲಿದೆ .
ಈ ವರ್ಷದ ಆರಂಭದಲ್ಲಿ, ಬಿಡೆನ್ ಅಫ್ಘಾನಿಸ್ತಾನದಲ್ಲಿನ ಯುಎಸ್ನ ಸುದೀರ್ಘ ಯುದ್ಧವನ್ನು ಅಂತ್ಯಗೊಳಿಸಿ ಆಗಸ್ಟ್ ಅಂತ್ಯದ ವೇಳೆಗೆ ಎಲ್ಲಾ ಯುಎಸ್ ಯುದ್ಧ ಪಡೆಗಳನ್ನು ದೇಶದಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದರು. ಅಂತರರಾಷ್ಟ್ರೀಯವಾಗಿ ಬಿಡೆನ್ ನಡೆಗೆ ಟೀಕೆಗಳು ವ್ಯಕ್ತವಾಗುತ್ತಿರುವಂತೆ ಮಂಗಳವಾರ, ಶ್ವೇತಭವನದ ವಕ್ತಾರ ಜೆನ್ ಸಾಕಿ ಅವರು ಅಮೆರಿಕನ್ ಜನರ ಪರವಾಗಿ ಬಿಡೆನ್ ‘ಕಷ್ಟಕರವಾದ ಆಯ್ಕೆಗಳನ್ನು’ ಮಾಡಬೇಕಾಯಿತು ಎಂದು ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
“ನಾವು ಸೆಪ್ಟೆಂಬರ್ 11 ರಂದು ನಮ್ಮ ಮೇಲೆ ದಾಳಿ ನಡೆಸಿದವರನ್ನು ಎದುರಿಸಿ ಅಮೆರಿಕಕ್ಕೆ ನ್ಯಾಯ ಒದಗಿಸಲು ಅಫ್ಘಾನಿಸ್ತಾನಕ್ಕೆ ಹೋದೆವು. ಅಫ್ಘಾನಿಸ್ತಾನವನ್ನು ಅಮೆರಿಕದ ಮೇಲೆ ದಾಳಿ ಮಾಡಲು ಸುರಕ್ಷಿತ ತಾಣವಾಗಿ ಬಳಸುವ ಭಯೋತ್ಪಾದಕರನ್ನು ಮಟ್ಟಹಾಕಬೇಕಿತ್ತು. ಕೆಲವು ವರ್ಷಗಳ ಹಿಂದೆಯೇ ಆ ಉದ್ದೇಶಗಳನ್ನು ನಾವು ಸಾಧಿಸಿದ್ದೇವೆ” ಎಂದು ಸಾಕಿ ಹೇಳಿದರು
ವಾಪಸಾತಿಯ ಹೊರತಾಗಿಯೂ, ವಾಷಿಂಗ್ಟನ್ ವಾಯು ಪಡೆಗಳು ಮತ್ತು ಲಾಜಿಸ್ಟಿಕ್ ಬೆಂಬಲದೊಂದಿಗೆ ಅಫ್ಗಾನ್ ಪಡೆಗಳನ್ನು ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಮಾತು ಕೊಟ್ಟಿತ್ತು. ಆದರೆ ತಾಲಿಬಾನ್ ಪ್ರಗತಿಯನ್ನು ವಿರೋಧಿಸುವ ಇತ್ತೀಚಿನ ಪ್ರಯತ್ನದಲ್ಲಿ ಯುಎಸ್ ಮಿಲಿಟರಿ ಎಷ್ಟು ತೊಡಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.
“ನಾವು ವಾಯು ಬೆಂಬಲವನ್ನು ಒದಗಿಸುವ ಬದ್ಧತೆಗಳನ್ನು ಉಳಿಸಿಕೊಳ್ಳುತ್ತೇವೆ, ಅವರ ವಾಯುಪಡೆ ಕಾರ್ಯನಿರ್ವಹಿಸಲು ಎಲ್ಲಾ ಅನುಕೂಲತೆಗಳನ್ನು ಒದಗಿಸಿಕೊಡುತ್ತೇವೆ, ಆದರೆ ಅವರ ಹೋರಾಟವನ್ನು ಅವರೇ ಮುನ್ನಡೆಸಬೇಕು” ಎಂದು ಬೈಡೆನ್ ಒತ್ತಿ ಹೇಳಿದ್ದಾರೆ.