ಬಿ.ಎಸ್. ಯಡಿಯೂರಪ್ಪನವರೇ ಕರ್ನಾಟಕ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು. ಲಿಂಗಾಯತ ಸಮುದಾಯ ಯಡಿಯೂರಪ್ಪ ಪರ ಇದೆ. ಯಡಿಯೂರಪ್ಪ ಬದಲಿಸಿದರೆ ಬಿಜೆಪಿ ಇತಿಹಾಸ ಮುಗಿಯತ್ತೆ ಎಂದು ಮುಖ್ಯಮಂತ್ರಿ ಭೇಟಿ ಬಳಿಕ ಕಾಂಗ್ರೇಸ್ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ, ಎಂ.ಬಿ. ಪಾಟೀಲ್ ಬಳಿಕ ಈಗ ಶಾಮನೂರು ಶಿವಶಂಕರಪ್ಪ ಕೂಡ ಯಡಿಯೂರಪ್ಪ ಪರ ನಿಂತಂತಾಗಿದೆ.
ಮುಖ್ಯಮಂತ್ರಿ ಬದಲಾವಣೆ ಅನ್ನೊ ಮಾತು ಕೇಳಿ ಬರುತ್ತಿದೆ ಯಡಿಯೂರಪ್ಪನವರಿಗೆ ಸಮುದಾಯದಿಂದ ಯಾವ ನೈತಿಕ ಬೆಂಬಲ ಸೂಚಿಸುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ ಅವರು, ಸಿಎಂ ಬದಲಾವಣೆ ಯೋಚನೆ ಮಾಡೊ ಮೊದಲು ಈ ಹಿಂದೆ ಹೈಕಮಾಂಡ್ ನಿಜಲಿಂಗಪ್ಪನವರು, ಜೆ.ಎಸ್.ಪಾಟೀಲರು, ವಿರೇಂದ್ರ ಪಾಟೀಲರು. ಬೊಮ್ಮಾಯಿ ಸಾಹೇಬರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದಾಗ ಏನಾಯಿತು ಎಂಬ ಇತಿಹಾಸವನ್ನು ಮೊದಲು ಯೋಚನೆ ಮಾಡಿಕೊಳ್ಳಲಿ, ಸಿಎಂ ಬದಲಾವಣೆಗೆ ಕೈ ಹಾಕಿದರೆ ಇವರೆಲ್ಲ ನಿರ್ಣಾಮ ಆಗುತ್ತಾರೆ. ಎಲ್ಲಿಯವರೆಗೂ ಯಡಿಯೂರಪ್ಪ ಇರುತ್ತಾರೊ ಅಲ್ಲಿವರೆಗೂ ಬಿಜೆಪಿ ಇರುತ್ತೆ ಎಂದು ಹೇಳಿದ್ದಾರೆ.

ಯಡಿಯೂಪ್ಪನವರಿಗೆ ಯಾರಾದರು ತೊಂದರೆ ನೀಡಿದರೆ ಬಿಜೆಪಿ ಇತಿಹಾಸ ಮುಗಿಯತ್ತೆ. ವೀರಶೈವ ಲಿಂಗಾಯತ ಸಮುದಾಯ ಯಡಿಯೂರಪ್ಪನವರಿಗೆ ಸಂಪೂರ್ಣ ಬೆಂಬಲ ಇದೆ. ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕು ಎನ್ನುವುದು ಸಮುದಾಯದ ಇಚ್ಛೇ. ಆಗಿಯೂ ಬದಲಾವಣೆಯ ಮಾತು ಬಂದರೆ, ಆಗ ನಮ್ಮ ವೀರಶೈವ ಲಿಂಗಾಯತ ಸಮುದಾಯ ಏನು ಎಂಬುದನ್ನು ತೋರಿಸುತ್ತೇವೆ ಎಂದು ಬಿಜೆಪಿಗೆ ನೇರವಾಗಿ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪನವರನ್ನು ಬೇಟಿಯಾಗಿರುವ ಉದ್ದೇಶ ವಿಧಾನ ಸೌಧದ ಬಳಿ ಬಸವಣ್ಣನ ಪುತ್ತಳಿ ಅನಾವರಣ ಮಾಡೊ ನಿರ್ಧಾರ ಮಾಢಿರೋದಕ್ಕೆ ನಮ್ಮ ಮಹಾಸಭಾದಿಂದ ಅಭಿನಂದಿಸಲು ಬಂದಿದ್ದೆವು ಎಂದು ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪ ಯಡಿಯೂರಪ್ಪನವರನ್ನು ಭೇಟಿ ಮಾಡುವ ಮೊದಲು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆ ಅಪಾರ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದರು.

ಯಡಿಯೂರಪ್ಪ ಪರ 65ಜನ ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ಹೈಕಮಾಂಡ್ ಈವರೆಗೆ ಯಾವುದೇ ಸೂಚನೆ ನೀಡಿಲ್ಲ. ಕೂಸು ಹುಟ್ಟುವುದಕ್ಕೂ ಮೊದಲು ಕುಲಾಯಿ ಹೊಲಿಸುವುದೇಕೆ. ಹಿಂದುಳಿದ, ವೀರಶೈವ ಮಠಾಧೀಶರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಇವತ್ತಿನ ಬೇಟಿ ವಿಶೇಷವೇನಲ್ಲ, ಶ್ರೀಗಳ ಸಲಹೆ ಸ್ಚೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.





