• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮೀಕ್ಷೆಗೆ ಡ್ರೋನ್ ಕಡ್ಡಾಯ – NHAI

Any Mind by Any Mind
June 16, 2021
in ದೇಶ
0
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮೀಕ್ಷೆಗೆ ಡ್ರೋನ್ ಕಡ್ಡಾಯ – NHAI
Share on WhatsAppShare on FacebookShare on Telegram

ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಡ್ರೋನ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿದಿನ 40 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸುವ ಭಾರತದ ಯೋಜನೆಯ ಹಿನ್ನೆಲೆಯಲ್ಲಿ NHAI ನ ಈ ನಿರ್ಧಾರ ಹೊರಬಂದಿದೆ.  

ADVERTISEMENT

“ಪಾರದರ್ಶಕತೆ, ಏಕರೂಪತೆ ಮತ್ತು ಗುಣಮಟ್ಟದ ಖಾತರಿಗಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಹಂತಗಳ ಮಾಸಿಕ ವಿಡಿಯೋ ರೆಕಾರ್ಡಿಂಗ್‌ಗಾಗಿ ಡ್ರೋನ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ” ಎಂದು NHAI ಬುಧವಾರದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಈ ವೀಡಿಯೊಗಳನ್ನು” ಡಾಟಾ ಲೇಕ್ ”  (Data Lake) ನಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದು. ಹೀಗೆ ಸಂಗ್ರಹಿಸಲಾಗುವ ವೀಡಿಯೊಗಳನ್ನು ಆರ್ಬಿಟಲ್ ಟ್ರಿಬ್ಯೂನಲ್ ಮತ್ತು ನ್ಯಾಯಾಲಯಗಳ ಮುಂದೆ ವಿವಾದ ಪರಿಹಾರದ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಬಳಸಬಹುದು” ಎಂದು NHAI ಹೇಳಿದೆ.

 “ಗುತ್ತಿಗೆದಾರರು ಮೇಲ್ವಿಚಾರಣಾ ಸಲಹೆಗಾರರ ​​ ಸಮ್ಮುಖದಲ್ಲಿ ಡ್ರೋನ್ ವಿಡಿಯೋ ರೆಕಾರ್ಡಿಂಗ್ ಮಾಡಿ, ಪ್ರಸ್ತುತ ಮತ್ತು ಹಿಂದಿನ ತಿಂಗಳ ತುಲನಾತ್ಮಕ ಪ್ರಾಜೆಕ್ಟ್ ವೀಡಿಯೊಗಳನ್ನು NHAI ನ ಪೋರ್ಟಲ್‘ ಡಾಟಾ ಲೇಕ್ ’ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅಲ್ಲದೆ, ವಿವಿಧ ಯೋಜನೆ ಸಂಬಂಧಿತ ಬೆಳವಣಿಗೆಗಳನ್ನು ಡ್ರೋಣ್‌ ಮೂಲಕ ಸೆರೆಹಿಡಿಯಲಿದ್ದು, ಮೇಲ್ವಿಚಾರಣಾ ಸಲಹೆಗಾರರು ಈ ವೀಡಿಯೊಗಳನ್ನು ವಿಶ್ಲೇಷಿಸಿ ಯೋಜನೆಯ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡ ಡಿಜಿಟಲ್ ಮಾಸಿಕ ಪ್ರಗತಿ ವರದಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ ”ಎಂದು NHAI ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಸ್ತೆ ನಿರ್ಮಾಣದ ವೇಗವನ್ನು ಹೆಚ್ಚಿಸಲು NHAI ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. NHAI ಪ್ರಕಾರ, ತನ್ನ ಯೋಜನಾ ನಿರ್ದೇಶಕರು ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ ಸೈಟ್ನಲ್ಲಿ ಯೋಜನೆಯ ನಿರ್ಮಾಣ ಪ್ರಾರಂಭವಾಗುವವರೆಗೆ ಮತ್ತು ಯೋಜನೆಯ ಪೂರ್ಣಗೊಳ್ಳುವವರೆಗೆ ಮಾಸಿಕ ಡ್ರೋನ್ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ.

Network Survey Vehicle (NSV)

ಈ ಹಿಂದೆ, ನಿರ್ಮಾಣ ಗುಣಮಟ್ಟವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸ್ಥಿತಿಯ ಸಮೀಕ್ಷೆಗಳನ್ನು ನಡೆಸಲು ನೆಟ್‌ವರ್ಕ್ ಸರ್ವೆ ವಾಹನದ (Network Survey Vehicle (NSV)  ನಿಯೋಜನೆಯನ್ನು ಕೂಡಾ ಕಡ್ಡಾಯಗೊಳಿಸಲಾಗಿತ್ತು.

ಆ ಮೂಲಕ, ಯೋಜನೆಗಳ ನಿರ್ಮಾಣದ ಸಮಯದಲ್ಲಿ ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಎನ್‌ಎಚ್‌ಎಐ ಬದ್ಧವಾಗಿದೆ ಎಂದು NHAI  ಹೇಳಿದೆ.

Previous Post

ಪ್ರಧಾನಿ ಮೋದಿ ತಿಗಣೆ ರೀತಿಯಲ್ಲಿ ಜನರ ರಕ್ತ ಹೀರುತ್ತಿದ್ದಾರೆ: ಸಿದ್ದರಾಮಯ್ಯ ಆಕ್ರೋಶ

Next Post

ಕೋವಿಡ್‌ 2ನೇ ಅಲೆ: ದೇಶಾದ್ಯಂತ 730 ವೈದ್ಯರು ಸೋಂಕಿಗೆ ಬಲಿ- ಐಎಂಎ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಕೋವಿಡ್‌ 2ನೇ ಅಲೆ: ದೇಶಾದ್ಯಂತ 730 ವೈದ್ಯರು ಸೋಂಕಿಗೆ ಬಲಿ- ಐಎಂಎ

ಕೋವಿಡ್‌ 2ನೇ ಅಲೆ: ದೇಶಾದ್ಯಂತ 730 ವೈದ್ಯರು ಸೋಂಕಿಗೆ ಬಲಿ- ಐಎಂಎ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada