ಕಳೆದ ವರ್ಷ ಜೂನ್ 5 ರಂದು ಹೊಸ ಮೂರು ವಿವಾದಾತ್ಮಕ ಕೃಷಿಕಾನೂನುಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ ದಿವಸ. ಇದೀಗ ಇಂದು ವರ್ಷವಾದ ಕಾರಣ ನಾಳೆ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಲಿದ್ದಾರೆ.
ಬಿಜೆಪಿ ಸಂಸದರು, ಸಚಿವರು, ಶಾಸಕರ ಮನೆ ಮುಂದೆ ಕೃಷಿ ಕಾನೂನು ಪ್ರತಿಗಳನ್ನು ಸುಟ್ಟು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಲಿದ್ದಾರೆಂದು ಭಾರತೀಯ ಕಿಸಾನ್ ಯೂನಿಯನ್ ತಿಳಿಸಿದೆ. ಬಿಜೆಪಿ ಸಂಸದರು, ಶಾಸಕರಿಲ್ಲದ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದೆ.
ವಿವಾದಾತ್ಮಕ ಕೃಷಿಕಾನೂನುಗಳನ್ನು ವಿರೋಧಿಸಿ ರೈತರು ಕಳೆದ ನವೆಂಬರ್ ನಿಂದ ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯ ಬೇಕು ಹಾಗು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ಸ್ವಂತ ಮನೆಗಳನ್ನು ತೊರೆದು ದೆಹಲಿಯ ಗಡಿಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ. ಕಾನೂನು ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂಬುವುದು ಪ್ರತಿಭಟನಾ ನಿರತ ರೈತರ ಮಾತಾಗಿದೆ. ಈಗಾಗಲೇ ಸರ್ಕಾರ ರೈತರ ಜೊತೆ ಸಭೆ ನಡೆಸಿ ಮನವೊಲಿಸಲು ಪ್ರಯತ್ನ ನಡೆಸಿದರು ಅದು ವಿಫಲವಾಗಿದೆ.