ಪೊರೆದ ಊರನ್ನು ಬೈಯುತ್ತಾ ಊರು ಸೇರಿದವರ ಆತ್ಮವಿಮರ್ಶೆಗಾಗಿ ʼDon’t Blame Bengaluruʼ: ನಾಳೆ ಲೋಕಾರ್ಪಣೆ

ಕೋಟ್ಯಾಂತರ ಜನರನ್ನು ಪೊರೆಯುತ್ತಿರುವ ಮಹಾ ನಗರಿ ಬೆಂಗಳೂರು, ಕರೋನಾ ಬಳಿಕ ಬಿಕೋ ಎನ್ನುತ್ತಿದೆ. ಜನಸಂಖ್ಯೆಗೆ ತಕ್ಕಂತೆ ಆರೋಗ್ಯ ಮೂಲ ಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ, ಹಾಗೂ ಲಾಕ್‌ಡೌನ್‌ ದೆಸೆಯಲ್ಲಿ ಕೆಲಸ ಕಳೆದುಕೊಂಡು ಹಲವಾರು ಮಂದಿ ನಗರ ತೊರೆದು ಊರು ಸೇರಿಕೊಂಡಿದ್ದಾರೆ. ಹೀಗೆ ಊರು ಸೇರಿಕೊಂಡವರಲ್ಲಿ ದುಡಿಮೆಯಿಲ್ಲದೆ ಬೆಂಗಳೂರಲ್ಲಿ ಬದುಕು ಸಾಗಿಸಲಾದವರೇ ಹೆಚ್ಚು. ಆರೋಗ್ಯದ ಭಯದಲ್ಲಿ ನಗರ ತೊರೆದವರೂ ಇದ್ದಾರೆ. ರೋಗ ಬಂದರೆ ನೋಡಿಕೊಳ್ಳಲು ತಮ್ಮವರಾರಿಲ್ಲ ಎನ್ನುವ ಚಿಂತೆಯಿಂದಲೂ ಉದ್ಯೋಗ ಕೊಟ್ಟ ನಗರವನ್ನು ಬಿಡಬೇಕಾದ ಅನಿವಾರ್ಯತೆಗೆ ಬಿದ್ದವರು ಹಲವರು.

ಹೀಗೆ, ನಗರ ಬಿಟ್ಟು ತೊರೆದವರಲ್ಲಿ ಹಲವರು ಹತಾಶರಾಗಿಯೂ, ಕೃತಘ್ನರಾಗಿಯೂ ಬೆಂಗಳೂರು ನಗರವನ್ನು ದೂಷಿಸಿದ್ದು, ಇದು ವೈವಿಧ್ಯಮಯ ಬೆಂಗಳೂರನ್ನು ಪ್ರೀತಿಸುವವರ ಮನಸ್ಸಿಗೆ ಘಾಸಿಯಾಗಿದೆ. ಇಂತಹ ಕೃತಘ್ನ ಜನರು ಸ್ವಯಂ ಆತ್ಮವಿಮರ್ಶೆ ಮಾಡಬೇಕೆಂದು ಉತ್ಸಾಹೀ ತಂಡವೊಂದು ಹಾಡು ಕಟ್ಟಿದೆ. ಮಾತ್ರವಲ್ಲ, ಹಾಡಿನಲ್ಲಿ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವಂತೆ ಶ್ರಮಿಸಿದ್ದಾರೆ.

ತಿಮ್ಮೇಗೌಡ ಅವರ ಸಂಗೀತ ಮತ್ತು ಸಾಹಿತ್ಯ ಇರುವ ಹಾಡಿಗೆ ಗಾಯಕ ಅಶ್ವಿನ್‌ ಶರ್ಮಾ ದನಿಯಾಗಿದ್ದಾರೆ, ಪಂಕಜ್‌ ಲಾಲ್‌ಗೆ ನಿರ್ಮಿಸಿದ್ದಾರೆ. ಹಾಡಿನ ವಿಡಿಯೋದಲ್ಲಿ ನಟ ವಸಿಷ್ಠ ಸಿಂಹ, ಅನಿರುದ್ಧ್,  ನಟಿ ಪ್ರಣೀತಾ ಸುಭಾಷ್, ಸೋನುಗೌಡ, ಹರ್ಷಿಕಾ ಪೂಣಚ್ಚ, ರೂಪಿಕಾ, ಆರ್ ಜೆ ನೇತ್ರಾ, ಬಿಗ್ ಬಾಸ್ ಖ್ಯಾತಿಯ ಗೀತಾ ಭಟ್  ಗಾಯಕರಾದ ಅನುರಾಧಾ ಭಟ್, ಡಾ. ಶಮಿತಾ ಮಲ್ನಾಡ್, ಸಂತೋಷ್ ವೆಂಕಿ ಕಾಣಿಸಿಕೊಳ್ಳಲಿದ್ದಾರೆ.

ತಿಮ್ಮೇಗೌಡ MJ

Don’t Blame Bengaluru ಎಂಬ ಹಾಡು ಜೂನ್‌ 5 ಸಂಜೆ 6 ಗಂಟೆಗೆ RJ Sunil Prank call ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದ್ದೇವೆ. ನಮ್ಮ ಊರನ್ನು ದೂಷಿಸಬೇಡಿ ಎನ್ನುವುದೇ ಇವರ ಪರಿಶ್ರಮದ ಒಟ್ಟು ಸಾರ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...