ರಾಜ್ಯದ ವಿವಿಧೆಡೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುತೇಕ ಕಡೆ ಕಮಲ ಮುದುಡಿ, ಕೈ ಜಯ ಬೇರಿ ಸಾಧಿಸಿದೆ. ಒಟ್ಟು 10 ಜಿಲ್ಲೆಗಳಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗು ಎರಡು ಜಿಲ್ಲೆಗಳಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ಏಪ್ರಿಲ್ 27 ರಂದು ನಡೆದಿತ್ತು, ಇಂದು ಫಲಿತಾಂಶ ಪ್ರಕಟವಾಗಿದೆ. 7 ಕಡೆ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ, ತೀರ್ಥಹಳ್ಳಿ ಪಟ್ಟ ಪಂಚಾಯತ್ನಲ್ಲಿ ಬಿಜೆಪಿ ಆಡಳಿತ ಅಂತ್ಯಗೊಂಡಿದೆ.
ತೀರ್ಥಹಳ್ಳಿಯಲ್ಲಿ 15 ವಾರ್ಡ್ಗಳ ಪೈಕಿ, 6 ವಾರ್ಡ್ಗಳಲ್ಲಿ ಬಿಜೆಪಿ ಗೆದ್ದರೆ 9 ವಾರ್ಡ್ಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಪರ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ ಮಂಜುನಾಥ್, ಜಿಲ್ಲಾಧ್ಯಕ್ಷ ಹೆಚ್, ಎಸ್ ಸುಂದರೇಶ್ ಭರ್ಜರಿ ಪ್ರಚಾರ ನಡೆಸಿದರೆ, ಬಿಜೆಪಿ ಈ ಬಾರಿಯೂ ಅಧಿಕಾರದ ಗದ್ದುಗೆ ಏರಲು ಸಚಿವ ಕೆಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಪ್ರಚಾರ ನಡೆಸಿದ್ದರು.
ಭದ್ರಾವತಿಯಲ್ಲಿಯೂ ಕಾಂಗ್ರೆಸ್ಗೆ ಜಯ
ಭದ್ರಾವತಿ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಸಾಧಿಸಿದ್ದು, 38 ವಾರ್ಡ್ಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್-11 ಬಿಜೆಪಿ 4, ಪಕ್ಷೇತರ 1 ಸ್ಥಾನಗಳಿಸಿದೆ. ಕಳೆದ ಬಾರಿ 23 ಸ್ಥಾನಗಳನ್ನು ಗೆದ್ದ ಜಿಡಿಎಸ್, ಅಪ್ಪಾಜಿ ಗೌಡರ ನಿಧನದಿಂದ ನಾಯಕತ್ವದ ಕೊರತೆಯಿಂದ ಈ ಬಾರಿ 11 ಗಳನ್ನು ಗೆದ್ದುಕೊಂಡಿದೆ. ಇಲ್ಲಿಯೂ ಕಾಂಗ್ರೆಸ್ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ರಾಮನಗರದಲ್ಲಿ ಕಾಂಗ್ರೆಸ್ ಮೃತ ಅಭ್ಯರ್ಥಿಗೆ ಭಾರಿ ಅಂತರದ ಗೆಲುವು
ಏಪ್ರಿಲ್ 29 ರಂದು ಕೋವಿಡ್ನಿಂದ ಮೃತಪಟ್ಟಿರುವ 4ನೇ ವಾರ್ಡ್ ಅಭ್ಯರ್ಥಿಗೆ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದ ರಾಜು ಅವರು ರಾಮನಗರ ನಗರಸಭೆ ಚುನಾವಣೆ ಒಟ್ಟು 917 ಮತ ಪಡೆಯುವುದರ ಮೂಲಕ ಬಾರಿ ಅಂತರದ ಗೆಲುವು ಸಾಧಿಸಿದ್ದಾರೆ.
ಗುಡಿಬಂಡೆಯಲ್ಲಿ ಬಿಜೆಪಿ ಗೆ ಒಂದೂ ಸ್ಥಾನ ದಕ್ಕಿಲ್ಲ
ಚಿಕ್ಕಬಳ್ಳಾಪು ಜಿಲ್ಲೆಯ ಗುಡಿಬಂಡೆ ಪಟ್ಟಣಪಂಚಾಯ್ ಚುನಾವಣೆಯಲ್ಲಿ ಬಿಜೆಪಿ ಗೆ ಖಾತೆ ತೆರೆಯುವುದರಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಜಯ ಸಾಧಿಸಿದೆ. 11 ವಾರ್ಡ್ಗಳ ಚುನಾವಣೆಯಲ್ಲಿ ಕಾಂಗ್ರೆಸ್-6, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು- 3, ಜೆಡಿಎಸ್-2 ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮಡಿಕೇರಿ ನಗರ ಸಭೆಯಲ್ಲಿ ಬಿಜೆಪಿ ಗೆ ಭರ್ಜರಿ ಗೆಲುವು
ಇಲ್ಲಿಯ ನಗರ ಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 16 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ 1 ಸ್ಥಾನ ಗೆದ್ದುಕೊಂಡಿವೆ. ಎಸ್ಡಿಪಿಐ 5 ವಾರ್ಡ್ಗಳಲ್ಲಿ ಗೆಲುವು ಸಾಧಿಸಿ, 26 ಮಂದಿ ಪಕ್ಷೇತರರು ಸ್ಪರ್ಧಿಸಿದ್ದು, ಒಬ್ಬರು ಗೆಲವು ಸಾಧಿಸಿಲ್ಲ.
ರಾಮನಗರದ ನಗರಸಭೆ ಚುನಾವಣೆ- ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ
ಒಟ್ಟು 31 ವಾರ್ಡ್ ಗಳ ಪೈಕಿ ಕಾಂಗ್ರೆಸ್19 ಸ್ಥಾನ, ಜೆಡಿಎಸ್ 11 ಸ್ಥಾನ, ಎಸ್ಡಿಪಿಐ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದಾರೆ. ಬಿಜೆಪಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.
ಬೀದರ್ನಲ್ಲಿ ಕಾಂಗ್ರೆಸ್ಗೆ ಬಹುಮತ
ಒಟ್ಟು 32 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ- 8 ಜೆಡಿಎಸ್-7 ಎಐಎಂಐಎಂ-2 ಹಾಗು ಆಮ್ ಆದ್ಮಿ ಪಕ್ಷ 1 ಸ್ಥಾನಗಳಲ್ಲಿ ಗೆದ್ದುಕೊಂಡಿದೆ.