ಕರೋನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಭಾರತ ದೇಶಕ್ಕೆ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಈಗ ಕೇಂದ್ರ ಸರ್ಕಾರ ಅಬ್ರಾಡ್ (USA) ಯಿಂದ ಹತ್ತು ಸಾವಿರ ಆಕ್ಸಿಜನ್ ಸಾಂದ್ರಕ (ಆಕ್ಸಿಜನ್ ಉತ್ಪಾದಿಸುವ ಯಂತ್ರವನ್ನು) ಆಮದು ಮಾಡಿಕೊಳ್ಳುವುದಕ್ಕೆ ಅನುಮತಿಸಿದೆ.
ಹತ್ತು ಸಾವಿರ ಆಕ್ಸಿಜನ್ ಸಾಂದ್ರಕವನ್ನು ಈಗಾಗಲೇ ಆರ್ಡರ್ ಮಾಡಿದ್ದು ಮುಂದಿನ ವಾರ USA ಯಿಂದ ಆಮದು ಮಾಡಿಕೊಳ್ಳಲಾಗುವುದು ಎಂದು ಗೌರ್ಮೆಂಟ್ ಮೂಲಗಳು ತಿಳಿಸಿವೆ ಎಂದು ANI ವರದಿ ಮಾಡಿದೆ.
ಭಾರತದಲ್ಲಿ ಆಕ್ಸಿಜನ್ ಕೊರತೆಯ ಬೇಡಿಕೆಯನ್ನು ಪೂರೈಸಲು ಬೇರೆ ದೇಶದ ಖಾಸಗಿ ಕಂಪನಿಗಳೊಂದಿದೆ ಒಪ್ಪಂದ ಮಾಡಿಕೊಂಡಿದ್ದು ದೇಶದಲ್ಲಿ ಆಕ್ಸಿಜನ್ ಬೇಡಿಕೆಯನ್ನು ಹೆಚ್ಚಿಸಲು ಈ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಾಗುತ್ತಿದೆ ಎಂದು ವರದಿಯಾಗಿದೆ.
ಮುಂದಿನ ವಾರ ಸ್ಯಾನ್ ಪ್ರಾನ್ಸಿಸ್ಕೊದಿಂದ ಡೆಲ್ಲಿಗೆ ಹೊರಡುವ ಏರ್ ಇಂಡಿಯಾ ವಿಮಾನದಲ್ಲಿ ಆಕ್ಸಿಜನ್ ಸಾಂದ್ರಗಳನ್ನು ಬರುತ್ತವೆ ಹೆಚ್ಚಿನ ಸಾಂದ್ರಕಗಳು ದೆಹಲಿಗೆ ಬರುತ್ತವೆ ಎಂಬುದನ್ನು ಗೌರ್ಮೆಂಟ್ ಮೂಲಗಳು ತಿಳಿಸಿವೆ ಎಂದು ಎಎನ್ಐ ವರದಿ ಮಾಡಿದೆ.
ಅತಿ ಹೆಚ್ಚು ಆಕ್ಸಿಜನ್ ಸಮಸ್ಯೆಯನ್ನು ಕ್ಯಾಪಿಟಲ್ ಸಿಟಿ ದೆಹಲಿ ಎದುರಿಸುತ್ತಿದ್ದು, ಅನೇಕ ಆಸ್ಪತ್ರೆಗಳು ಆಕ್ಸಿಜನ್ಗಾಗಿ ಹೈಕೋರ್ಟ್ ಬಾಗಿಲು ತಟ್ಟಿದೆ.
ಆಕ್ಸಿಜನ್ ಕೊರತೆಯನ್ನು ನಿಭಾಯಿಸಲು ಅನೇಕರನ್ನು ಕೇಳಿಕೊಂಡರು ಪ್ರಯೋಜನವಾಗಿಲ್ಲ ಆಗಾಗಿ ಆಸ್ಪತ್ರೆಗಳಲ್ಲಿ ಇರುವ ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ, ಹೊಸ ರೋಗಿಗಳನ್ನು ಪ್ರವೇಶಿಸುತ್ತಿಲ್ಲ ಎಂದು ದೆಹಲಿ ಮೂಲದ ಖಾಸಗಿ ಆಸ್ಪತ್ರೆ ನೋಟಿಸ್ ತಿಳಿಸಿದೆ.
ಆಕ್ಸಿಜನ್ ಸಾಂದ್ರಕ ಆಮದು ಕುರಿತು ಫಿಲಿಪ್ಸ್ ಇಂಡಿಯಾ, ಖಾಸಗಿ ಉತ್ಪಾದನೆ ಸಂಸ್ಥೆಯನ್ನು ಕೇಳಿದಾಗ ಅವರು, “ಫಿಲಿಪ್ಸ್ ನಿರ್ಧಿಷ್ಟವಾಗಿ ಕರೋನಗಾಗಿಯೇ ವೆಂಟಿಲೇಟರ್ಗಳು ಒಳಗೊಂಡಂತೆ ಆಮ್ಲಜನಕ ಸಾಂದ್ರಕಗಳು, ಅಲ್ಟ್ರಾಸೌಂಡ್ಗಳು, ಮಾನಿಟರ್ಗಳು ಮತ್ತು ಪೋರ್ಟಬಲ್ ಐಸಿಯುಗಳನ್ನು ತಯಾರಿಸುತ್ತಿದೆ. ಆಮ್ಲಜನಕ ಸಾಂದ್ರತೆಯನ್ನು ಜಾಗತಿಕ ಮಟ್ಟದಲ್ಲಿ ಗಮನಾರ್ಹವಾಗಿ ಹೆಚ್ಚಿಸಿದ್ದೇವೆ ಮತ್ತು ಹೆಚ್ಚಿನ ಜೀವಗಳನ್ನು ಉಳಿಸಲು ಇದನ್ನು ಭಾರತದಲ್ಲಿ ಬೇಗನೆ ಲಭ್ಯವಾಗುವಂತೆ ಮಾಡುತ್ತಿದೆ” ಎಂದು ಫಿಲಿಪ್ಸ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ “ಡೇನಿಯಲ್” ಎಎನ್ಐಗೆ ತಿಳಿಸಿದ್ದಾರೆ.
“RT- PCR ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪಿಸೆಗೆ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ವಿನಂತಿಸಲಾಗಿದೆ, ಆಮ್ಲಜನಕ ಸಂಬಂಧಿತ ಸಾಮಾಗ್ರಿಗಳು ಮತ್ತು ವೈದ್ಯಕೀಯ ಉಪಕರಣಗಳು ಆಮದು ಮಾಡಿಕೊಳ್ಳಲು ವಿನಂತಿಸಲಾಗಿದೆ “ಎಂದು ಸರ್ಕಾರದ ಆದೇಶಗಳು ತಿಳಿಸಿವೆ.
ಭಾರತವು ಕಳೆದ 24 ಗಂಟೆಗಳಲ್ಲಿ 3.46 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 2,624 ಜನರು ಸಾವನ್ನಪ್ಪಿದ್ದಾರೆ. ಇದುಸತತ ಮೂರನೇ ದಿನ ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.ಸಾಂದ್ರಕಗಳು (concentration) ಎಂದರೆ ಆಮ್ಲಜನಕವನ್ನು ಉತ್ಪಾದಿಸುವ ಒಂದು ಯಂತ್ರ.