ರೆಮ್ಡಿಸಿವಿರ್ ಉತ್ಪಾದನೆಗೆ ಬಳಸುವ ಔಷಧೀಯ ಪದಾರ್ಥಗಳ ಮೇಲಿನ ಆಮದು ಸುಂಕವನ್ನೂ ರದ್ದುಪಡಿಸಲಾಗಿದೆ. ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ನಮ್ಮ ದೇಶದಲ್ಲಿ ರೆಮ್ಡೆಸಿವಿರ್ ಲಸಿಕೆಯ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿರುವುದರಿಂದ ಪೂರೈಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ರೆಮ್ಡೆಸಿವಿರ್ ಔಷಧಿ ಎಪಿಐ (Ramdesiv active pharmaceutical ingredients), ರೆಮ್ಡೆಸಿವಿರ್ ಇಂಜೆಕ್ಷನ್ ಮತ್ತು ಬೀಟಾ ಸೈಕ್ಲೋಡೆಕ್ಸ್ಟ್ರಿನ್ (ರೆಮ್ಡೆಸಿವಿರ್ ಲಸಿಕೆ ತಯಾರಿಸಲು ಬಳಸಲಾಗುವ ಕಚ್ಚಾಸಾಮಗ್ರಿಗಳ) ಆಮದು ಸುಂಕವನ್ನು ರದ್ದುಗೊಳಿಸಿದೆ. ಈ ಸುಂಕ ರಿಯಾಯಿತಿಯನ್ನು ಅಕ್ಟೋಬರ್ 31 ರವರೆಗೆ ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
“ದೇಶದ ಅನೇಕ ಸ್ಥಳಗಳಲ್ಲಿ ರೆಮ್ಡಿಸವಿರ್ ಕಪ್ಪು ಮಾರುಕಟ್ಟೆ ಜಾಲ ಮತ್ತು ನಕಲಿ ಔಷಧಿ ಜಾಲ.”
ಮಂಗಳವಾರ ಮಹಾರಾಷ್ಟ್ರದ ಮುಂಬೈನ ಎರಡು ಸ್ಥಳಗಳಲ್ಲಿ ಪೊಲೀಸರು ಮತ್ತು ಎಫ್ಡಿಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ರಫ್ತುದಾರರು ಸಂಗ್ರಹಿಸಿದ್ದ 2,200 ರೆಮ್ಡಿಸಿವಿರ್ ಔಷಧಿ ಸೀಸೆಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳವಾರ ಮೈಸೂರಿನಲ್ಲಿ ನಕಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಯಿಂದ 34 ಬಾಟಲ್ ನಕಲಿ ರೆಮ್ಡಿಸಿವಿರ್ ಔಷಧ ಮತ್ತು 2.82 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ವಿನಯ್ ಶಂಕರ್ ಎಂಬಾತನಿಂದ 400ಕ್ಕೂ ಹೆಚ್ಚು ನಕಲಿ ರೆಮ್ಡಿಸಿವಿರ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಕಲಿ ಔಷಧಿ ವಶಕ್ಕೆ ಪಡೆದಿದ್ದಾರೆ. ಈತ ತ್ರಿಪಾಠಿ ಇಂದೋರ್ನ ರಾಣಿ ಭಾಗ್ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಇಂದೋರ್ ನಲ್ಲಿ ನಡೆದಿದೆ.
ಇನ್ನೂ ಕೆಲ ಔಷಧಿ ಮಳಿಗೆಗಳು ರೆಮ್ಸಿವಿಸಿರ್ ಔಷದಿಗೆ ಆರು ಪಟ್ಟು ಹೆಚ್ಚು ಹಣ ಸ್ವೀಕರಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ರಾಯ್ಪುರದಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಇಂತಹ ಇನ್ನೂ ಹತ್ತು ಹಲವು ಪ್ರಕರಣಗಳು ವರದಿಯಾಗಿವೆ.
ರಮ್ಡಿಸಿವಿರ್ ಔಷದ ಕಚ್ಚಾಸಾಮಗ್ರಿಗಳ ಆಮದು ಸುಂಕ ಕಡಿಮೆ ಮಾಡಿರುವುದು ಕಪ್ಪು ಮಾರುಕಟ್ಟೆ ಜಾಲಕ್ಕೆ ಉಪಯುಕ್ತವಾಗದಂತೆ ನೋಡಿಕೊಳ್ಳುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗುವುದಂತು ಸತ್ಯ. ಈ ನಿಟ್ಟಿನಲ್ಲಿ ಇದನ್ನು ಹೇಗೆ ಬೇದಿಸಬಹುದು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯದ ಸರ್ಕಾರಗಳಿಗೆ ಸಲಹೆ ನೀಡಬೇಕು ಇಲ್ಲವಾದರೆ ಪ್ರತಿ ರಾಜ್ಯದಲ್ಲೂ ಇದೊಂದು ದಂಧೆಯಾಗಿ ಮಾರ್ಪಾಡಾಗುವುದರಲ್ಲಿ ಎರಡು ಮಾತಿಲ್ಲ.
“ರೆಮ್ಡಿಸಿವಿರ್ ಅಲ್ಲದೆ ಇನ್ನಿತರೆ ಸಾಮಾಗ್ರಿಗಳ ಮೇಲಿನ ತೆರಿಗೆ ರಿಯಾಯಿತಿ ನೀಡುವಂತೆ ಒತ್ತಾಯ.”
ಕರೋನಾ ವೈರಸ್ನ ಎರಡನೇ ಅಲೆಯೊಂದಿಗೆ ದೇಶ ಹೆಣಗಾಡುತ್ತಿದೆ. ಪ್ರತಿದಿನ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶಾದ್ಯಂತ ಆಮ್ಲಜನಕ ಮತ್ತು ರೆಮ್ಡಿಸಿವಿರ್ ನಂತಹ ಔಷಧಿಗಳ ಕೊರತೆಯ ದೂರುಗಳು ಸಹ ಇದೆ. ಕೋವಿಡ್ ಔಷಧಿಗಳು, ವೈದ್ಯಕೀಯ ಸಲಕರಣೆಗಳು, ಆಕ್ಸಿಜನ್ ಮತ್ತು ರೆಮೆಡಿಸ್ವಿರ್ ನಂತಹ ಸಂಬಂಧಿತ ಉಪಕರಣಗಳ ಮೇಲಿನ ಜಿಎಸ್ಟಿ ದರವನ್ನು ಕಡಿಮೆ ಮಾಡಲು ಅನೇಕ ರಾಜ್ಯ ಒತ್ತಾಯಿಸುತ್ತಿತ್ತು. ಇದರ ಪರಿಣಾಮ ಈಗ ರೆಮ್ಡಿಸಿವಿರ್ ಔಷದ ಮತ್ತು ಲಸಿಕಾ ಕಚ್ಚಾ ವಸ್ತುಗಳ ಆಮದು ಸುಂಕವನ್ನು ಮಾತ್ರ ಭಾರತ ಸರ್ಕಾರ ರದ್ದು ಪಡಿಸಿದೆ. ಇವುಗಳಲ್ಲಿ ಶೇ 12 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
“ಮೊದಲನೇ ಕರೋನಾ ಅಲೆಯಲ್ಲಿ ಸರ್ಕಾರದ ಯಾವುದೇ ಪೂರ್ವ ಸಿದ್ದತೆ ಇರಲಿಲ್ಲ ಹಾಗಾಗಿ ಕೊರತೆಯನ್ನು ನಿಭಾಯಿಸಲು ಸಮಸ್ಯೆ ಆಯ್ತು ಆದರೆ ಎರಡನೇ ಅಲೆಯಲ್ಲೂ ಕೊರತೆ ಅಂದರೆ ಅರ್ಥ ಏನು?”
ಉಸಿರಾಟದ ಸಮಸ್ಯೆಯಿಂದ ನರಳುತ್ತಿರುವ ರೋಗಿಗಳಿಗೆ ರೆಮ್ಡಿಸಿವಿರ್ ಬಳಸಲು ಆರಂಭವಾಗಿ ಬಹಳ ದಿನಗಳೇ ಆದವು. ಆದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದವು. ಈಗ ರೆಮ್ಡಿಸಿವಿರ್ ಗಾಗಿ ಹಾಹಾಕಾರ ಏರ್ಪಟ್ಟಿದೆ. 2020ರಲ್ಲಿ ಕೋವಿಡ್ ಅಪ್ಪಳಿಸಿದಾಗ ಅದು ಅನಿರೀಕ್ಷಿತವಾಗಿತ್ತು, ಹೀಗಾಗಿ ರೆಮ್ಡಿಸಿವಿರ್ ತಯಾರಿಗಳು ಆಗಿರಲಿಲ್ಲ ಎಂಬ ಎಕ್ಸ್ಯೂಸ್ ಇತ್ತು. ಆದರೆ ಈಗ ಎರಡನೇ ಅಲೆ ದಾಳಿ ಮಾಡಿದೆ. ಸರ್ಕಾರದ ಬಳಿ ಆಕ್ಸಿಜನ್ ಸಿಲಿಂಡರ್ ಇಲ್ಲ, ಬೆಡ್ ಗಳು, ವೆಂಟಿಲೇಟರುಗಳು ಇಲ್ಲ, ಐಸಿಯು ಖಾಲಿ ಇಲ್ಲ. ಜೊತೆಗೆ ರೆಮ್ಡಿಸಿವಿರ್ ಅಂತ ಮುಖ್ಯ ಔಷಧಿ ರೋಗಿಗಳಿಗೆ ದಕ್ಕುತ್ತಿಲ್ಲ. ಈಗ ಹೇಳಲು ಯಾವ ಕಾರಣ ಇದೆ ಸರ್ಕಾರದ ಬಳಿ? ಅನುಮಾನವೇ ಬೇಡ. ಕರೋನಾ ಎರಡನೆ ಅಲೆಯಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿರುವ ಸಾವುಗಳೆಲ್ಲ ಸರ್ಕಾರವೇ ನಡೆಸಿದ ದಾರುಣ ಕೊಲೆಗಳು ಅನ್ನಬಹುದೇ?
ಕಳೆದ ಮೂರು ತಿಂಗಳಲ್ಲಿ ಆಕ್ಸಿಜನ್ ಸಿಲಿಂಡರ್ 9300 ಮೆಟ್ರಿಕ್ ಟನ್ ಅಷ್ಟು ವಿದೇಶಕ್ಕೆ ರಫ್ತಾದರೆ, 6 ಕೋಟಿಯಷ್ಟು ಕರೋನ ಲಸಿಕೆ ಮತ್ತು ರೆಮ್ಡಿಸಿವಿರ್ ಔಷದ ವಿದೇಶಕ್ಕೆ ರಫ್ತಾಗಿದೆ. ಈಗ ಇಲ್ಲಿ ಅದೆರಡು ಕೊರತೆ ಆಗಿದ್ದು ಕಾಳಸಂತೆಯಲ್ಲಿ ಹೆಗ್ಗಿಲ್ಲದೆ ಮಾರಾಟವಾಗುತ್ತಿದೆ. ಇನ್ನೂ ಮುಂದೆಯೂ ಇದೆ ತರ ಆದರೆ ನಿಜಕ್ಕೂ ಸಾವಿನ ಸಂಖ್ಯೆ ಸೊಂಕಿತರ ಕಾಲುಭಾಗದಷ್ಟಾಗುತ್ತದೆ. ಇದನ್ನು ಸರ್ಕಾರ ಪೂರ್ವ ಸಿದ್ದತೆಯಿಂದ ಎದುರಿಸಬೇಕಿದೆ.
“ರೆಮ್ಡೆಸಿವಿರ್ ಎಂದರೇನು?”
ರೆಮಾಡೆಸಿವಿರ್ ಒಂದು ಆಂಟಿವೈರಲ್ ಔಷಧವಾಗಿದ್ದು, ಇದನ್ನು ಅಮೆರಿಕದ ದೈತ್ಯ ಔಷಧ ಕಂಪನಿ ಗಿಲ್ಯಾಡ್ ಸೈನ್ಸಸ್ ತಯಾರಿಸುತ್ತದೆ. ಹೆಪಟೈಟಿಸ್ ಸಿ ಮತ್ತು ಉಸಿರಾಟದ ತೊಂದರೆ, ವೈರಸ್ (ಆರ್ಎಸ್ವಿ) ಚಿಕಿತ್ಸೆ ನೀಡಲು ಬಳಸುತ್ತಿದ್ದರು.