ದಲಿತರು ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಅವರು ಪರಿಶಿಷ್ಟ ಜಾತಿಯವರಿಗೆ ಮೀಸಲಿಟ್ಟ ವಿಧಾನಸಭಾ ಅಥವಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಗೆ ಸ್ಪರ್ಧೆ ಮಾಡುವುದು ಮಾತ್ರವಲ್ಲದೇ ಇತರೆ ಮೀಸಲಾತಿಗೆ ಸಂಬಂಧಪಟ್ಟಂತಹ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ರಾಜ್ಯಸಭಾ ಸದಸ್ಯ ಜಿ ವಿ ಎಲ್ ನರಸಿಂಹರಾವ್ ಅವರು ಕೇಳಿದ ಪ್ರಶ್ನೆಗೆ ಗುರುವಾರ ರಾಜ್ಯಸಭೆಯಲ್ಲಿ ಉತ್ತರಿಸಿದ ರವಿ ಶಂಕರ್ ಪ್ರಸಾದ್ ಅವರು, ಒಂದು ವೇಳೆ ದಲಿತರು ಹಿಂದು, ಸಿಖ್ಖ್ ಮತ್ತು ಬೌದ್ದ ಧರ್ಮವನ್ನು ಆರಿಸಿಕೊಂಡರೆ ಅವರ ಮೀಸಲಾತಿಯ ಸೌಲಭ್ಯಗಳು ಯಥಾಸ್ಥಿತಿಯಲ್ಲಿ ಮುಂದುವರೆಯುವುದು ಸ್ಪಷ್ಟನೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಸಂವಿಧಾನದ ಮೂರನೇ ಪ್ಯಾರ (ಪರಿಶಿಷ್ಟ ಜಾತಿ)ಯ ಪ್ರಕಾರ, ಹಿಂದು, ಸಿಖ್ಖ್ ಅಥವಾ ಬೌಧ ಧರ್ಮದ ಹೊರತಾಗಿ ಬೇರೆ ಧರ್ಮದ ಯಾವುದೇ ವ್ಯಕ್ತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿದವರೆಂದು ಪರಿಗಣಿಸಬಾರದು ಎಂದು ಹೇಳುತ್ತದೆ,” ಎಂದಿದ್ದಾರೆ.
ಕೃಪೆ: TOI