ಕರ್ನಾಟಕ ವಿಧಾನ ಪರಿಷತ್ ಸಭಾಧ್ಯಕ್ಷರಾಗಿರುವ ಪ್ರತಾಪ್ಚಂದ್ರ ಶೆಟ್ಟಿಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪ್ರತಾಪ್ಚಂದ್ರ ಶೆಟ್ಟಿ ಅವರ ವಿರುದ್ದ ಅವಿಶ್ವಾಸ ನಿರ್ಣಯನ್ನು ಮಂಡಿಸುವ ಮುನ್ನವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರವನ್ನು ಅವರು ತಾಳಿದ್ದಾರೆ.
ಈ ಬಾರಿಯ ಪರಿಷತ್ ಕಲಾಪ ಮುಗಿದ ಬಳಿಕ, ಉಪ ಸಭಾಧ್ಯಕ್ಷರಿಗೆ ರಾಜಿನಾಮೆಯನ್ನು ಸಲ್ಲಿಸಲಾಗುತ್ತದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಪರಿಷತ್ನಲ್ಲಿ ಕೋಲಾಹಲವೇ ನಡೆದು ಹೋಗಿತ್ತು. ಇದರಿಂದಾಗಿ ಪರಿಷತ್ನ ಮಾನ ದೊಡ್ಡ ಮಟ್ಟದಲ್ಲಿ ಹರಾಜಾಗಿತ್ತು. ಆ ನಂತರ ಮನನೊಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಪ್ರತಾಪ್ಚಂದ್ರ ಶೆಟ್ಟಿ ಅವರು ತೀರ್ಮಾನಿಸಿದ್ದರು.