ದೆಹಲಿಯಲ್ಲಿ ಕೃಷಿಕಾಯ್ದೆಗಳನ್ನು ವಿರೋಧಿಸಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 26 ಗಣರಾಜ್ಯೋತ್ಸವದಂದು ರೈತರು ಬೃಹತ್ ಟ್ರ್ಯಾಕ್ಟರ್ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಹಿಂಸಾಚಾರ ನಡೆದಿದ್ದು, ಪ್ರತಿಭಟನಾ ನಿರತ ರೈತರ ಮೇಲೆ ಸುಳ್ಳು ಆಪಾದನೆ ಹೊರೆಸಿ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಕುಮ್ಮಕ್ಕು ನಡೆಸಿದೆ ಎಂದು ರೈತಮುಖಂಡರು ಆರೋಪಿಸಿದ್ದರು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದರ ಬೆನ್ನಲೆ ದೆಹಲಿಯ ಗಡಿಭಾಗಗಳಿಗೆ ಅಧಿಕ ಸಂಖ್ಯೆಯಲ್ಲಿ ರೈತರ ದಂಡು ಹಿರಿದು ಬರುತ್ತಿದೆ.
ದೆಹಲಿ: ರೈತ ಆಂದೋಲನದ ವಿರುದ್ಧ ಇಷ್ಟೊಂದು ಸುಳ್ಳು ಸುದ್ದಿಗಳು ಹುಟ್ಟಿಕೊಂಡಿದ್ದೇಕೆ?
ಪ್ರತಿಭಟನಾ ನಿರತ ರೈತರು ದೆಹಲಿಯ ಗಡಿಭಾಗಗಳಿಗೆ ಬರುವುದನ್ನು ತಡೆಯಲು ಪೊಲೀಸ್ ಇಲಾಖೆ ಬಿಗಿಭದ್ರತೆಯನ್ನು ಕಲ್ಪಿಸಿದೆ. ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರಿಕೇಡ್ಗಳನ್ನು ಮತ್ತು ಕಾಂಕ್ರೀಟ್ ಹಾಕಿ ಚೂಪಾದ ರಾಡು, ಮೊಳೆಗಳನ್ನು ನೆಡಲಾಗಿದೆ.
ದೆಹಲಿಯ ಮತ್ತು ಉತ್ತರಪ್ರದೇಶದ ಗಡಿಭಾಗ ಗಾಝೀಪುರ, ಟಿಕ್ರಿ ಭಾಗಗಳಲ್ಲಿ ಪೊಲೀಸ್ ಸರ್ಪಗಾವಲಿನ ಜೊತೆಗೆ ವಾಹನ ಮತ್ತು ಜನಸಂಪರ್ಕವನ್ನು ತಡೆಯಲು ಜೆಲ್ಲಿ, ಕಲ್ಲು, ರಾಡುಗಳಿಂದ ರಸ್ತೆ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಆದರೂ ಪ್ರತಿಭಟನಾ ನಿರತ ರೈತರು ಹೋರಾಟವನ್ನು ನಿಲ್ಲಿಸದೆ, ಸಹಸ್ರಾರು ಸಂಖ್ಯೆಯಲ್ಲಿ ರೈತರು ದೆಹಲಿಯ ಗಡಿಭಾಗಗಳಿಗೆ ಧಾವಿಸುತ್ತಿದ್ದಾರೆ.
ಈ ನಡುವೆ, ದೆಹಲಿಗೆ ಪ್ರತಿಭಟನಾ ನಿರತ ರೈತರನ್ನು ಮತ್ತು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಎರಡು ರೈಲುಗಳು ಧಿಡೀರನೆ ಮಾರ್ಗಬದಲಾಯಿಸಿವೆ. ಇದು ರೈತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮಾಡಿದ ತಂತ್ರವೆಂದು ರೈತ ಸಂಘಟನೆಗಳು ಆರೋಪಿಸಿವೆ.