ಗೃಹಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಹಿಂದಿರುಗಳಲ್ಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 200 ಬಿಜೆಪಿ ಗೆಲ್ಲುವ ಅಕಾಂಕ್ಷೆಯಿಟ್ಟುಕೊಂಡಿದ್ದು, ತೃಣ ಮೂಲ ಕಾಂಗ್ರೆಸ್ ನಾಯಕ ಸುವೆಂದು ಅಧಿಕಾರಿ ಬಿಜೆಪಿ ಸೇರ್ಪಡೆಗೆ ಲಾಭಿ ನಡೆಸಲಾಗುತ್ತಿದೆ.
ಇತ್ತ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೊಟ್ಟಮೊದಲ ಸಾರ್ವಜನಿಕ ಭಾಷಣದಲ್ಲಿ ಪಕ್ಷದ ಅನಿಷ್ಠಾವಂತ ನಾಯಕರನ್ನು ಉಚ್ಚಾಟನೆ ಮಾಡಿದ್ದು, ತೃಣಮೂಲ ಕಾಂಗ್ರೆಸ್ ನಾಯಕ ಸುವೆಂದು ಬಿಜೆಪಿ ಸೇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಲ್ಕತ್ತಾದಿಂದ 150 ಕಿ.ಮೀ ದೂರದ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಮೇದಿನಿಪುರದಲ್ಲಿ ಅಮಿತ್ ಷಾ ರವರು ರ್ಯಾಲಿ ನಡೆಸಲಿದ್ದು, ಈ ವೇಳೆ ಸುವೆಂದು ಬಿಜೆಪಿ ಸೇರ್ಪಡೆಯಾಗಲ್ಲಿದ್ದಾರೆಂಬ ಸುದ್ದಿ ಹರಡುತ್ತಿದೆ.
ಪಕ್ಷದ ಮುಖಂಡರು ಕಾರ್ಯಕರ್ತರು ರೈತರೊಂದಿಗೆ ಅವರು ಒಳಾಂಗಣದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಸ್ಥಳ ಬದಲಾಯಿಸಿ ವಿಶಾಲ ಮೈದಾನದಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪೂರ್ವ ಮಿಡ್ನಾಪುರ್ ಜಿಲ್ಲೆಯ ಹಲ್ಡಿಯಾದಲ್ಲಿ ನಡೆದ ರಾಜಕೀಯೇತರ ಸಭೆಯಲ್ಲಿ ಮಾತನಾಡಿದ ಸುವೆಂದು ಅವರು, ಸಂವಿಧಾನದ ಬದ್ಧ ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಂಡಿರುವುದಲ್ಲದೆ, ಜನ ಸಂಘಟನೆಯ ಮೂಲಕ ಪಕ್ಷ ಸಂಘಟನೆಗಾಗಿ ಮತ್ತೆ ಬಂಗಾಳಕ್ಕೆ ಹಿಂದಿರುವುದಾಗಿ ತಿಳಿಸಿದ್ದಾರೆ. ಆದರೆ, ಯಾವ ಪಕ್ಷವನ್ನು ಸಂಘಟಿಸುತ್ತಾರೆ ಎಂಬ ಕುರಿತು ಸ್ಪಷ್ಟತೆಯನ್ನು ನೀಡಿಲ್ಲ.
ನನ್ನ ಮೇಲೆ ಅನೇಕ ಊಹಾಪೋಹಗಳು ಕೇಳಿ ಬರುತ್ತಿವೆ. ದೊಡ್ಡ ದೊಡ್ಡ ಸ್ಥಾನದಲ್ಲಿರುವವರು ಟೀಕಿಸುತ್ತಿದ್ದಾರೆ. ಹಲ್ಲೆ ನಡೆಸಲು ಯತ್ನ ಕೂಡ ನಡೆಯುತ್ತಿದ್ದು, ಇವೆಲ್ಲವುದಕ್ಕೂ ಚುನಾವಣೆಯಲ್ಲಿ ಬಂದ ಫಲಿತಾಂಶವೇ ಉತ್ತರ. ಲಕ್ಷಣ್ ಸೇಠ್, ಅನಿಲ್ ಬೋಸ್, ಬೊಲೆನಾಯ್, ಕೊನಾರ್ ಮೂವರು ಮಾರ್ಕ್ಸ್ವಾದಿ ನಾಯಕರನ್ನು ಉಲ್ಲೇಖಿಸಿ ಹಿಂದಿನ ಚುನಾವಣೆಯ ಸೋಲು ಗೆಲುವನ್ನು ನೆನೆದಿದ್ದಾರೆ.
ಈ ಬಗ್ಗೆ ಜಲ್ಪೈಗುರಿಯಲ್ಲಿ ನಡೆದ ಸಮಾವೇಶಲ್ಲಿ ಸಿಎಂ ಬ್ಯಾನರ್ಜಿ ಮಾತನಾಡಿ, ವಿರೋಧಿಗಳು ತೃಣಮೂಲ ಕ್ರಾಂಗ್ರೆಸ್ನಿಂದ ಮತ್ತು ಸರ್ಕಾರದಿಂದ ಲಾಭಗಳಿಸುತ್ತಿದ್ದಾರೆ. ಇದೀಗ ಇತರೆ ಅನ್ಯಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂತವರನ್ನು ಪಕ್ಷ ಒಪ್ಪಿಕೊಳ್ಳುವುದಿಲ್ಲವೆಂದು ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಪಕ್ಷ 10 ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಮತ್ತೆ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಜನರೊಂದಿಗೆ ಬೆರೆತು ಸಮಸ್ಯೆಗಳನ್ನ ಪರಿಗಣಿಸಿ ಅವುಗಳನ್ನು ಈಡೇರಿಸುವ ಭರವಸೆ ನೀಡಲಾಗುವುದು. ಪಕ್ಷದಲ್ಲಿ ಲಾಭಗಳಿಸುವಂತಹ, ಅಧಿಕಾರ ದುರುಪಯೋಗ, ಪಕ್ಷಾಂತರ ಮಾಡುವ ನಾಯಕರನ್ನು ಸಹಿಸುವುದಿಲ್ಲವೆಂದಿದ್ದಾರೆ.
ಮತ್ತೊಂದೆಡೆ ಸುವೆಂದು ಪಕ್ಷದಿಂದ ಹೊರ ನಡೆಯುತ್ತಾರೆಂಬುವುದು ಕೇಳಿ ಅಸಮಾಧಾನ ಉಂಟಾಗಿದೆ. ಅದೀಗಾ ಬರೀ ಊಹಾಪೋಹವಷ್ಟೆ ತೃಣಮೂಲ ಕಾಂಗ್ರೆಸ್ನಿಂದ ಹೊರ ನಡೆಯುವುದಿಲ್ಲವೆಂಬುವುದು ಕೆಲವು ಪ್ರಮುಖ ನಾಯಕರ ಅಭಿಪ್ರಾಯ ಮಾಜಿ ಮೇಯರ್ ಜಿತೇಂದ್ರ ತಿವಾರಿ, ಅರಣ್ಯ ಸಚಿವ ರಾಜೀವ್ ಬ್ಯಾನರ್ಜಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಎಸ್ ಬ್ಯಾನರ್ಜಿ, ಪಾರ್ಥ ಚಟರ್ಜಿ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಚಿವ ಫಿರ್ಹಾದ್ ಹಕೀಮ್ ಕಿಶೋರ್ ಕೊಲ್ಕತ್ತಾ ಸಭೆಗೆ ಹಾಜರಾಗದ ಕಾರಣ ಡಿಸೆಂಬರ್ 18 ರಂದು ಬ್ಯಾನರ್ಜಿಯೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.