ರೈತರಿಗೆ ಕನಿಷ್ಟ ಬೆಂಬಲ ಬೆಲೆ ಸಿಗದಿದ್ದಲ್ಲಿ ರಾಜುನಾಮೆ ನೀಡಲೂ ಸಿದ್ದನಿದ್ದೇನೆ ಎಂದು ಹರ್ಯಾಣದ ಉಪ ಮುಖ್ಯಮಂತ್ರಿ, ಜೆಜೆಪಿ ಮುಖಂಡ ದುಷ್ಯಂತ್ ಚೌಟಾಲಾ ಹೇಳಿದ್ದಾರೆ. ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿಗಳ ವಿರುದ್ದ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ದುಷ್ಯಂತ ಅವರು ತಾಳಿದ್ದಾರೆ.
ಬಿಜೆಪಿಯ ಮೈತ್ರಿಕೂಟವಾಗಿರುವ ಜೆಜೆಪಿ ಪಕ್ಷವು ಹರ್ಯಾಣದಲ್ಲಿ ಮೈತ್ರಿ ಸರ್ಕಾರವನ್ನು ರಚಿಸಿದೆ. ಈಗ ಹರ್ಯಾಣ ಮತ್ತು ಪಂಜಾಬ್ನ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಎಂಎಸ್ಪಿ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದಾರೆ. ಕೇಂದ್ರ ಸರ್ಕಾರವು ರೈತರಿಗೆ ನೀಡಿದ್ದ ಲಿಖಿತ ಭರವಸೆಯಲ್ಲಿ ಕನಿಷ್ಟ ಬೆಂಬಲ ಬೆಲೆಯ ಭರವಸೆಯೂ ಇತ್ತು. ನಾನು ಅಧಿಕಾರದಲ್ಲಿ ಇರುವವರೆಗೂ, ರೈತರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ. ನನ್ನ ಭರವಸೆ ಈಡೇರಿಸಲಾಗದ ದಿನ ರಾಜಿನಾಮೆ ನೀಡುತ್ತೇನೆ,” ಎಂದು ದುಷ್ಯಂತ್ ಅವರು ಹೇಳಿದ್ದಾರೆ.
“ನಾನು ಕೇಂದ್ರ ಮಂತ್ರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಟೆಲೆಫೋನ್ ಮುಖಾಂತರ ನನ್ನ ವಿಚಾರವನ್ನು ಅವರಿಗೆ ತಿಳಿಸಿದ್ದೇನೆ. ರೈತರ ನಿಲುವುಗಳನ್ನು ಕೂಡಾ ಅವರ ಬಳಿ ಚರ್ಚಿಸಿದ್ದೇನೆ,” ಎಂದು ಅವರು ಹೇಳಿದ್ದಾರೆ.