• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಟ್ರಂಪ್‌ ಪಾಲಿಗೆ ಕರೋನಾ ʼಚೀನಿ ವೈರಸ್‌ʼ; ದೊಡ್ಡಣ್ಣನ ಹೇಳಿಕೆ ವಿರುದ್ಧ ಗಮನಸೆಳೆದ WHO 

by
May 2, 2020
in ದೇಶ
0
ಟ್ರಂಪ್‌ ಪಾಲಿಗೆ ಕರೋನಾ ʼಚೀನಿ ವೈರಸ್‌ʼ; ದೊಡ್ಡಣ್ಣನ ಹೇಳಿಕೆ ವಿರುದ್ಧ ಗಮನಸೆಳೆದ  WHO 
Share on WhatsAppShare on FacebookShare on Telegram

2019 ರ ಡಿಸೆಂಬರ್‌ ತಿಂಗಳ ಆರಂಭಕ್ಕೆ ಶುರುವಾದ ಕರೋನಾ ಸೋಂಕು ಚೀನಾ ಬಳಿಕ ಅಮೆರಿಕಾ, ಇಟೆಲಿ, ಸ್ಪೇಯ್ನ್‌, ಇರಾನ್‌ ಮುಂತಾದ ದೇಶಗಳಲ್ಲಿ ವ್ಯಾಪಕ ರೀತಿಯಲ್ಲಿ ಮಾರಣ ಹೋಮವೇ ನಡೆಸಿದೆ. ಆದರೆ ವಿವಿಧ ದೇಶಗಳು ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ಆ ದೇಶದ ಉಳಿವಿಗೆ ಕಾರಣವಾಗುತ್ತಿದೆ. ಭಾರತವೂ ಆರಂಭಿಕ ಹಂತದಲ್ಲಿ ಕೊಂಚ ನಿರ್ಲಕ್ಷ್ಯ ವಹಿಸಿದರೂ ನಂತರದ ಲಾಕ್‌ ಡೌನ್‌ ನಿಂದ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ದೇಶದಲ್ಲಿ ಕರೋನಾ ಸೋಂಕಿಗೆ ಕೋಮು ಬಣ್ಣ ಬಳಿದ ಮಾಧ್ಯಮಗಳಿಂದಾಗಿ ಹೆಚ್ಚು ಪ್ರಯಾಸ ಪಡಬೇಕಾಯಿತು.

ADVERTISEMENT

ಆದರೆ ಅತ್ತ ಅಮೆರಿಕಾ ʼಚೀನಿ ವೈರಸ್‌ʼ ಎಂದು ಕರೆಯುವ ಮೂಲಕ ನಿರ್ಲಕ್ಷ್ಯ ವಹಿಸಿದ್ದು ನಂತರದ ಕೆಲವೇ ಕೆಲವು ದಿನಗಳಲ್ಲಿ ಅಮೆರಿಕಾ ಅನ್ನೋದು ಸೋಂಕು ಭಾದಿತರ ದೇಶವಾಗಿ ಬದಲಾಗಿತ್ತು. ಆದರೂ ತನ್ನ ಒರಟುತನ ಬಿಡದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗಲೂ “ಕರೋನಾ ವೈರಸ್‌ ಚೀನಾದ ವುಹಾನ್‌ ನಿಂದ ಮಾನವ ಸೃಷ್ಟಿ ವೈರಾಣು” ಅಂತಾಲೇ ಹೇಳುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ಸದ್ಯ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ.

“ಮಾರಕ ಕರೋನಾ ವೈರಸ್‌ ನೈಸರ್ಗಿಕವಾಗಿಯೇ ಹುಟ್ಟಿಕೊಂಡಿದ್ದೇ ಹೊರತು, ಯಾವುದೇ ಲ್ಯಾಬ್‌ನಿಂದ ಸೃಷ್ಟಿಯಾಗಿದ್ದಲ್ಲ” ಎಂದು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚರಿಸಿದೆ. ಕಳೆದ ಗುರುವಾರವಷ್ಟೇ (ಎಪ್ರಿಲ್‌ 30) ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ “ಕರೋನಾ ಸಾಂಕ್ರಾಮಿಕ ಪಿಡುಗಿನ ಮೂಲವೇ ಚೀನಾದ ವುಹಾನ್‌ ವೈರಾಲಜಿ ಇನ್ಸ್ಟಿಟ್ಯೂಶನ್”‌ ಎಂದು ದೂರಿದ್ದರು. ಶ್ವೇತ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿಯೇ ಈ ರೀತಿಯ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸುದ್ದಿಗೋಷ್ಟಿ ಕರೆದು ಉತ್ತರಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಡೊನಾಲ್ಡ್‌ ಟ್ರಂಪ್‌ ಹೇಳಿಕೆಗೆ ತದ್ವಿರುದ್ಧ ಹೇಳಿಕೆಯನ್ನ ವ್ಯಕ್ತಪಡಿಸಿದೆ. ಕಾರಣ, ಡೊನಾಲ್ಡ್‌ ಟ್ರಂಪ್‌ ʼಕರೋನಾʼದಲ್ಲೂ ರಾಜಕೀಯ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. “ಕರೋನಾ ಚೀನಾದ ವುಹಾನ್‌ ವೈರಾಲಜಿ ಸಂಶೋಧನಾ ಸಂಸ್ಥೆಯಲ್ಲಿಯೇ ಸೃಷ್ಟಿಯಾಗಿದೆ ಅನ್ನೋದಕ್ಕೆ ನನ್ನಲ್ಲಿ ದಾಖಲೆಯಿದೆ” ಎಂದು ಹೇಳುವ ಮೂಲಕ ಟ್ರಂಪ್‌ ಗೊಂದಲ ಹುಟ್ಟುಹಾಕುವ ಪ್ರಯತ್ನಪಟ್ಟಿದ್ದರು.

ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸುದ್ದಿಗೋಷ್ಟಿ ಅಂತಹ ಯಾವುದೇ ವಿಚಾರವವನ್ನ ಪ್ರಸ್ತಾಪಿಸಿಲ್ಲ. ಬದಲಾಗಿ ಚೀನಾ ದೇಶದಲ್ಲಿ ಮಾಂಸಕ್ಕಾಗಿ ಬಳಸುವ ಪ್ರಾಣಿಗಳ ದೇಹದಿಂದಲೇ ಮಾನವನ ದೇಹಕ್ಕೆ ವೈರಾಣು ಪ್ರವೇಶ ಮಾಡಿದೆ ಎಂದು WHO ಅಭಿಪ್ರಾಯಪಟ್ಟಿದೆ. ಆದ್ದರಿಂದ ವುಹಾನ್‌ ವೈರಾಲಜಿ ಸಂಶೋಧನಾ ಕೇಂದ್ರದಿಂದ ವೈರಾಣು ಹರಡಿತು ಅನ್ನೋದಕ್ಕಿಂತಲೂ ವುಹಾನ್‌ನ ಮಾಂಸ ಮಾರಾಟದ ಮಾರಕಟ್ಟೆಯಿಂದ ಹರಡಿದೆ ಅನ್ನೋ ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಮೈಕಲ್‌ ರ್ಯಾನ್‌ “ಕರೋನಾ ವೈರಾಣು ನೈಸರ್ಗಿಕವಾಗಿ ಹುಟ್ಟಿಕೊಂಡಿಲ್ಲ ಅನ್ನೋದರ ಬಗ್ಗೆ ನಮಗೆ ಭರವಸೆಯಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಕುರಿತ ಅಧ್ಯಯನಕ್ಕೆಂದೇ ವುಹಾನ್‌ ಸಂಶೋಧನಾ ಸಂಸ್ಥೆಗೆ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ಅಲ್ಲದೇ ತನಿಖಾ ಸಂಸ್ಥೆಗಳು ಕೂಡಾ ಇದು ಮಾನವ ಸೃಷ್ಟಿ ವೈರಾಣು ಅಲ್ಲ. ಆದರೆ ಲ್ಯಾಬ್‌ ನಿಂದ ಸೃಷ್ಟಿಯಾದ ವೈರಾಣುವೇ ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ ಎಂದಿದೆ. ಆದರೆ ಡೊನಾಲ್ಡ್‌ ಟ್ರಂಪ್‌ ತಾನು ಮಾಡಿರುವ ಆರೋಪಕ್ಕೆ ತನ್ನಲ್ಲಿ ಸಾಕ್ಷ್ಯವಿದ್ದು, ಅದನ್ನ ಬಹಿರಂಗಪಡಿಸಲಾಗುವುದಿಲ್ಲ ಎಂದಿದ್ದಾರೆ.

ಪ್ರಮುಖವಾಗಿ ಇದು ಬಾವಲಿಯಂತಹ ಸಸ್ತನಿಗಳಿಂದ ಮನುಷ್ಯ ಜೀವಕ್ಕೆ ಆಕ್ರಮಣ ಮಾಡಿವೆ ಅನ್ನೋ ಕುರಿತ ಸಂಶಯವಿದ್ದು, ಆ ನಿಟ್ಟಿನಲ್ಲಿ ವುಹಾನ್‌ ವಿಜ್ಞಾನಿಗಳು ಸಂಶೋಧನೆ ಮುಂದುವರೆಸಿದ್ದಾರೆ. ಈ ಮಧ್ಯೆ ಡೊನಾಲ್ಡ್‌ ಟ್ರಂಪ್‌ ಏಕಪ್ರಕಾರವಾಗಿ ಚೀನಾ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರೆ. ಅಲ್ಲದೇ ʼಚೀನಿ ವೈರಸ್‌ʼ ಎಂದು ಕರೆಯುವ ಮೂಲಕ ಪ್ರಾಂತೀಯ ಭಾವನೆ ಕೆರಳಿಸುವ ಪ್ರಯತ್ನಪಟ್ಟಿದ್ದರು. ಅಲ್ಲದೇ ವರ್ಷಾಂತ್ಯಕ್ಕೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೂ ಇದನ್ನೇ ಬಳಸಿಕೊಳ್ಳುತ್ತಿರುವ ಅಸಮಾಧಾನವೂ ಟ್ರಂಪ್‌ ವಿರುದ್ಧ ಕೇಳಿಬರತೊಡಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಜನವರಿ 30 ರಂದೇ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅದಾಗ ಚೀನಾ ಹೊರತು ಇನ್ನಿತರೆಡೆ ಕೇವಲ 80 ಪ್ರಕರಣಗಳು ಪತ್ತೆಯಾಗಿ, ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಚೀನಾದಲ್ಲಿ ಹರಡಿದ ರೀತಿಯನ್ನ ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರಕ್ಕೆ ಬಂದಿತ್ತು. ಈ ಕುರಿತು ಇದೀಗ ಮತ್ತೆ ಪ್ರತಿಕ್ರಿಯಿಸಿದ ಮೈಕಲ್‌ ರ್ಯಾನ್‌, “ನಾವು ಯಾವ ಹಂತದಲ್ಲೂ ಸಮಯ ವ್ಯರ್ಥಗೊಳಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ʼದೊಡ್ಡಣ್ಣʼ ಅಮೆರಿಕಾ ಅಧ್ಯಕ್ಷರಿಗೆ ತಿರುಗೇಟು ನೀಡಿದೆ. ಸಮಾಜದಲ್ಲಿ ಅವರು ಬಿತ್ತುತ್ತಿರುವ ಅವೈಜ್ಞಾನಿಕ, ಕಪೋಲಕಲ್ಪಿತ ಮಾಹಿತಿಗಳನ್ನ ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಮುಂದಿಡುತ್ತಿದೆ. ಆರೋಗ್ಯ ಸಂಸ್ಥೆಯ ಜವಾಬ್ದಾರಿಯುತ ಹಾಗೂ ವೈಜ್ಞಾನಿಕ ನಡೆ ಹೆಚ್ಚಿನ ಭರವಸೆ ಮೂಡಿಸಿದೆ. ಭಾರತದಲ್ಲೂ ಕರೋನಾ ಸೋಂಕಿಗೆ ʼಕೋಮುʼ ಬಣ್ಣ ಬಳಿದಾಗ ಇಲ್ಲಿನ ಆಡಳಿತ ಪಕ್ಷಗಳು ಸುಮ್ಮನಿದ್ದದ್ದೇ ಹಲವು ಅವಾಂತರಗಳಿಗೆ ಕಾರಣವಾಗಿತ್ತು ಅನ್ನೋದು ಇಲ್ಲಿ ಗಮನಾರ್ಹ.

Tags: AmericaChinaChina virusCovid 19Donald TrumpWHOwuhanಅಮೆರಿಕಾಚೀನಾಚೀನಾ ವೈರಸ್ವಿಶ್ವ ಆರೋಗ್ಯ ಸಂಸ್ಥೆವುಹಾನ್
Previous Post

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ರಾಜಿನಾಮೆ ಅಂಗೀಕಾರ

Next Post

ಕರ್ನಾಟಕದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ 601ಕ್ಕೆ ಏರಿಕೆ

Related Posts

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
0

ಮಕ್ಕಳ ಯೋಗ ಕ್ಷೇಮ ವಿಚಾರಿಸಿದ ಸಚಿವರು ಬೀದರ್ ಪ್ರವಾಸದಲ್ಲಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಇಂದು ದಿಢೀರ್ ಅಂಗನವಾಡಿ ಹಾಗೂ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ, ಪರಿಶೀಲನೆ...

Read moreDetails

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025
Next Post
ಕರ್ನಾಟಕದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ 601ಕ್ಕೆ ಏರಿಕೆ

ಕರ್ನಾಟಕದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ 601ಕ್ಕೆ ಏರಿಕೆ

Please login to join discussion

Recent News

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada