• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಜಾರಿಗೆ ಬರಲಿವೆ ಈ ಎಲ್ಲಾ ನಿಯಮಗಳು!

Shivakumar by Shivakumar
November 1, 2026
in Top Story, ದೇಶ
0
Attention public: All these rules come into effect starting today!
Share on WhatsAppShare on FacebookShare on Telegram

ನವದೆಹಲಿ :  ಹೊಸ ತಿಂಗಳು ಆರಂಭವಾಗುತ್ತಿದ್ದಂತೆಯೇ ಜನರ ದೈನಂದಿನ ಜೀವನ ಹಾಗೂ ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿಯಮಗಳು (New Rules) ಜಾರಿಗೆ ಬಂದಿವೆ. ಇಂದಿನಿಂದ ವಾಣಿಜ್ಯ ಬಳಕೆಯ ಸಿಲಿಂಡರ್ (Cylinder) ದರ ಏರಿಕೆಯಾಗಿದ್ದು, ಜಿಎಸ್‌ಟಿ (GST), ಮ್ಯೂಚುವಲ್ ಫಂಡ್, ಪಿಂಚಣಿದಾರರ ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಹಾಗೂ ಬ್ಯಾಂಕ್ ಸೇವಾ ಶುಲ್ಕಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಈ ಎಲ್ಲಾ ಬದಲಾವಣೆಗಳು ಸಾರ್ವಜನಿಕರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ.

ADVERTISEMENT

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ಹಬ್ಬದ ಋತುವಿನಲ್ಲಿ ವ್ಯಾಪಾರಸ್ಥರಿಗೆ ಹೊರೆಯಾಗುವಂತೆ ಸರ್ಕಾರಿ ತೈಲ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 10 ರೂ. ಹೆಚ್ಚಿಸಿವೆ. ಈ ಹೊಸ ದರಗಳು ಇಂದಿನಿಂದಲೇ ದೇಶದ ಪ್ರಮುಖ ನಗರಗಳಲ್ಲಿ ಅನ್ವಯವಾಗಲಿವೆ. ಆದರೆ, ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಮ್ಯೂಚುವಲ್ ಫಂಡ್‌ನಲ್ಲಿ ಇನ್ನು ಮುಂದೆ ಡೈರೆಕ್ಟ್ ಪ್ಲಾನ್ ಡೀಫಾಲ್ಟ್

ಸೆಬಿಯ ಹೊಸ ಮಾರ್ಗಸೂಚಿಯ ಅನ್ವಯ, ಮ್ಯೂಚುವಲ್ ಫಂಡ್ ಕಂಪನಿಗಳ ಡಿಜಿಟಲ್ ವೇದಿಕೆಗಳಲ್ಲಿ ‘ಡೈರೆಕ್ಟ್ ಪ್ಲಾನ್’ ಆಯ್ಕೆಯೇ ಇನ್ನು ಮುಂದೆ ಡೀಫಾಲ್ಟ್ ಆಗಿರಲಿದೆ. ಹೂಡಿಕೆದಾರರು ಬ್ರೋಕರ್ ಕಮಿಷನ್ ಒಳಗೊಂಡ ‘ರೆಗ್ಯುಲರ್ ಪ್ಲಾನ್’ ಆಯ್ಕೆ ಮಾಡಿಕೊಂಡರೆ, ಆ ಪ್ಲಾನ್‌ನ ಹೆಚ್ಚಿನ ವೆಚ್ಚದ ಕುರಿತು ಅವರಿಗೆ ಮುನ್ಸೂಚನೆ ನೀಡಲಾಗುತ್ತದೆ. ಇದರಿಂದ ಹೂಡಿಕೆದಾರರು ಎರಡೂ ಪ್ಲಾನ್‌ಗಳ ವೆಚ್ಚವನ್ನು ಸುಲಭವಾಗಿ ಹೋಲಿಸಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ.

ಜಿಎಸ್‌ಟಿ ನಿಯಮಗಳಲ್ಲಿ ತಿದ್ದುಪಡಿ

ಮಾರಾಟದ ನಂತರ ಗ್ರಾಹಕರಿಗೆ ನೀಡಲಾಗುವ ರಿಯಾಯಿತಿ, ಕ್ರೆಡಿಟ್ ನೋಟ್ ಹಾಗೂ ಜಿಎಸ್‌ಟಿ ಮರುಪಾವತಿಗೆ ಸಂಬಂಧಿಸಿದ ನಿಯಮಗಳು ಇಂದಿನಿಂದ ಬದಲಾಗಿವೆ. ತೆರಿಗೆ ಮೌಲ್ಯದಿಂದ ಈ ರಿಯಾಯಿತಿ ಮೊತ್ತವನ್ನು ಕಳೆಯಲು, ಅದಕ್ಕೆ ಸಂಬಂಧಿಸಿದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಹಿಂಪಡೆಯುವುದು ಕಡ್ಡಾಯವಾಗಿದೆ. ಇದರ ಜೊತೆಗೆ, ಇನ್‌ವರ್ಟೆಡ್ ಡ್ಯೂಟಿ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಾಪಾರಿಗಳಿಗೆ ನಗದು ಹರಿವು ಸುಗಮಗೊಳಿಸಲು ಪ್ರಾವಿಷನಲ್ ರೀಫಂಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಪಿಂಚಣಿದಾರರು ನವೆಂಬರ್ 30ರೊಳಗೆ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ

80 ವರ್ಷದೊಳಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಪಿಂಚಣಿದಾರರು ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರವನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕಿದೆ. ಪಿಂಚಣಿದಾರರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಅಥವಾ ಜೀವನ್ ಪ್ರಮಾಣ್ ಮೂಲಕ ಮುಖ ಗುರುತಿಸುವಿಕೆ ಹಾಗೂ ಆಧಾರ್ ಆಧಾರಿತ ಡಿಜಿಟಲ್ ವ್ಯವಸ್ಥೆಯ ಮೂಲಕ ಮನೆಯಲ್ಲೇ ಕುಳಿತು ಪ್ರಮಾಣಪತ್ರ ಸಲ್ಲಿಸಬಹುದು. ಇನ್ನು ಯುಪಿಎಸ್ ಚಂದಾದಾರರಿಗಾಗಿ ಪಿಎಫ್‌ಆರ್‌ಡಿಎ ಸಂಸ್ಥೆಯು ‘ಯುಪಿಎಸ್ ಜೀವನ್ ಸೇತು’ ಡಿಜಿಟಲ್ ಸೌಲಭ್ಯವನ್ನು ಪ್ರೋಟೀನ್ ಇ-ಗವ್ ಆ್ಯಪ್ ಮೂಲಕ ಒದಗಿಸಿದೆ.

ಆಡಿಟ್ ವ್ಯಾಪ್ತಿಗೆ ಬರುವ ತೆರಿಗೆದಾರರಿಗೆ ಐಟಿಆರ್ ಗಡುವು ವಿಸ್ತರಣೆ

ಆಡಿಟ್‌ಗೆ ಒಳಪಡುವ ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ ರಿಲೀಫ್ ನೀಡಿದೆ. 2026-27ನೇ ಸಾಲಿನ ಐಟಿಆರ್ ಸಲ್ಲಿಕೆ ಕೊನೆಯ ದಿನಾಂಕವನ್ನು ಅಕ್ಟೋಬರ್ 31ರಿಂದ ನವೆಂಬರ್ 21ರವರೆಗೆ ವಿಸ್ತರಿಸಲಾಗಿದೆ. ಅಕ್ಟೋಬರ್ 21ರೊಳಗೆ ತಮ್ಮ ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸಿರುವ ಅರ್ಹ ತೆರಿಗೆದಾರರಿಗೆ ಮಾತ್ರ ಈ ವಿಸ್ತರಣೆಯ ಲಾಭ ಸಿಗಲಿದೆ.

ಪಿಎನ್‌ಬಿ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳ ಹೆಚ್ಚಳ

ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ವೀಸಾ ಮತ್ತು ರುಪೇ ಕ್ರೆಡಿಟ್ ಕಾರ್ಡ್‌ಗಳ ವಿವಿಧ ಶುಲ್ಕಗಳನ್ನು ಪರಿಷ್ಕರಿಸಿದೆ. ಪಿಎನ್‌ಬಿ ಎಟಿಎಂಗಳಿಂದ ನಗದು ವಿತ್‌ಡ್ರಾ ಮಾಡಿದರೆ ಶೇಕಡಾ 2.5 ಅಥವಾ ಕನಿಷ್ಠ 400 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇತರ ಬ್ಯಾಂಕ್ ಎಟಿಎಂಗಳ ಬಳಕೆಗೆ ಈ ಶುಲ್ಕ ಕನಿಷ್ಠ 500 ರೂಪಾಯಿ ಆಗಿರಲಿದೆ. ತಡವಾಗಿ ಬಿಲ್ ಪಾವತಿಸುವ ಶುಲ್ಕದಲ್ಲೂ ಬದಲಾವಣೆ ಮಾಡಲಾಗಿದ್ದು, 50,000 ರೂಪಾಯಿಗಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ ಗರಿಷ್ಠ 1,200 ರೂಪಾಯಿ ವಿಧಿಸಲಾಗುತ್ತದೆ. ಇದಲ್ಲದೆ ತಿಂಗಳಿಗೆ 50,000 ರೂಪಾಯಿಗಿಂತ ಹೆಚ್ಚಿನ ಯುಟಿಲಿಟಿ ಬಿಲ್ ಪಾವತಿಗಳಿಗೆ ಶೇಕಡಾ 1ರಷ್ಟು ಶುಲ್ಕ ಮತ್ತು ಇಸಿಎಸ್ ವೈಫಲ್ಯದ ಶುಲ್ಕಗಳನ್ನು ಹೆಚ್ಚಿಸಲಾಗಿದೆ.

ಇಂಡಸ್‌ಇಂಡ್ ಬ್ಯಾಂಕ್ ಗ್ರಾಹಕರಿಗೆ ವಿಫಲ ವಹಿವಾಟು ದಂಡ

ಇಂಡಸ್‌ಇಂಡ್ ಬ್ಯಾಂಕ್‌ನ ಆಯ್ದ ಉಳಿತಾಯ ಖಾತೆಗಳಿಗೆ ಹೊಸ ದಂಡ ಶುಲ್ಕಗಳು ಅನ್ವಯವಾಗಿವೆ. ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಪಿಒಎಸ್ ಯಂತ್ರಗಳಲ್ಲಿ ವಹಿವಾಟು ವಿಫಲವಾದರೆ ಅಥವಾ ಎಟಿಎಂ ವಹಿವಾಟು ರದ್ದಾದರೆ ಪ್ರತಿ ಬಾರಿಗೆ 25 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ತಾಂತ್ರಿಕೇತರ ಕಾರಣಗಳಿಂದ ಚೆಕ್ ಬೌನ್ಸ್ ಆದಲ್ಲಿ ಪ್ರತಿ ಚೆಕ್‌ಗೆ 50 ರೂಪಾಯಿ ಜೊತೆಗೆ ಪ್ರತ್ಯೇಕ ಜಿಎಸ್‌ಟಿ ಶುಲ್ಕ ಕಡಿತವಾಗಲಿದೆ.

2019ರ ತೀರ್ಪಿನಂತೆ ರಾಮಮಂದಿರ ನಿರ್ಮಾಣವಾಗಿದೆಯೇ?ಪರಿಶೀಲನೆಗೆ ಸುಪ್ರೀಂಕೋರ್ಟ್‌ಗೆ ಅರ್ಜಿ!

Tags: CylinderGSTNew Rules
Previous Post

2019ರ ತೀರ್ಪಿನಂತೆ ರಾಮಮಂದಿರ ನಿರ್ಮಾಣವಾಗಿದೆಯೇ?ಪರಿಶೀಲನೆಗೆ ಸುಪ್ರೀಂಕೋರ್ಟ್‌ಗೆ ಅರ್ಜಿ!

Next Post

ಕನ್ನಡದಲ್ಲೇ ನಾಡಿನ ಜನತೆಗೆ `ಕನ್ನಡ ರಾಜ್ಯೋತ್ಸವ’ಕ್ಕೆ ಪ್ರಧಾನಿ ಮೋದಿ ಶುಭಾಶಯ!

Related Posts

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 
ದೇಶ

ಥಾರ್, ಸ್ಕಾರ್ಪಿಯೋ, XUV700 ವಿನ್ಯಾಸದ ಹಿಂದಿರುವ ಮಹಿಳೆ ಯಾರು ಗೊತ್ತೇ? 

by Shivakumar
November 3, 2026
0

ರಸ್ತೆಗಳಲ್ಲಿ ಮಹೀಂದ್ರಾ ಥಾರ್, ಸ್ಕಾರ್ಪಿಯೋ, XUV500 ಮತ್ತು XUV700 ವಾಹನಗಳನ್ನು ನೋಡದವರೇ ಇಲ್ಲ. ವಿಭಿನ್ನ ವಿನ್ಯಾಸ, ಗಟ್ಟಿಮುಟ್ಟಾದ ನೋಟ ಹಾಗೂ ಆಕರ್ಷಕ ರೋಡ್ ಪ್ರೆಸೆನ್ಸ್‌ನಿಂದ ಈ ಎಸ್‌ಯುವಿಗಳು...

Read moreDetails
ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Sites to be allotted this year to 5 lakh poor people in the state who do not own a home: CM D.K. Shivakumar announces

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

November 3, 2026
Cyberattack on European Supermarkets: Food Spoiled, Losses Worth Crores of Rupees

ಯುರೋಪ್‌ನ ಸೂಪರ್‌ಮಾರ್ಕೆಟ್‌ಗಳ ಮೇಲೆ ಸೈಬರ್ ದಾಳಿ: ಕೆಟ್ಟುಹೋದ ಆಹಾರ, ಕೋಟ್ಯಂತರ ರೂಪಾಯಿ ನಷ್ಟ

November 3, 2026
Next Post
PM Modi wishes the people of the country on the 'Kannada Rajyotsava' in Kannada!

ಕನ್ನಡದಲ್ಲೇ ನಾಡಿನ ಜನತೆಗೆ `ಕನ್ನಡ ರಾಜ್ಯೋತ್ಸವ’ಕ್ಕೆ ಪ್ರಧಾನಿ ಮೋದಿ ಶುಭಾಶಯ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada