• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!

ತಮ್ಮೇಶ್ ಗೌಡ ನೇತೃತ್ವದಲ್ಲಿ‌ ಕಳೆಗಟ್ಟಿದ ಬ್ಯಾಟರಾಯನಪುರ ದಸರಾ ಸಂಭ್ರಮ : ಘಟಾನುಘಟಿ ಬಿಜೆಪಿ ನಾಯಕರಿಂದ ಯುವ ನಾಯಕನ ಗುಣಗಾನ..!

ಪ್ರತಿಧ್ವನಿ by ಪ್ರತಿಧ್ವನಿ
October 26, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!
Share on WhatsAppShare on FacebookShare on Telegram

ಬೆಂಗಳೂರು : ಶರನ್ನವರಾತ್ರಿ ಮುಗಿದ್ರೂ ಬೆಂಗಳೂರು ನಗರದಲ್ಲಿ ಇಂದಿಗೂ ಹಬ್ಬದ ವಾತಾವರಣ ಕಳೆಗುಂದಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ನಡೆದ ದಸರಾ ಉತ್ಸವ. ಹೌದು ಬ್ಯಾಟರಾಯನಪುರ ಕ್ಷೇತ್ರದ ವಿದ್ಯಾರಣ್ಯಪುರದಲ್ಲಿರೋ ಎನ್‌ಟಿಐ ಗ್ರೌಂಡ್‌ನಲ್ಲಿ ಕೇಸರಿ ಫೌಂಡೇಶನ್‌ ಅಧ್ಯಕ್ಷ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್‌ ಗೌಡ ನೇತೃತ್ವದಲ್ಲಿ ದಸರಾ ಉತ್ಸವ ಆಯೋಜಿಸಿದ್ರು. ಉತ್ಸವದಲ್ಲಿ ಸುಮಾರು ಸಾವಿರಾರು ಮಹಿಳೆಯರು ತಾಯಿ ದುರ್ಗಾಪರಮೇಶ್ವರಿಗೆ ಪೂಜೆ ಸಲ್ಲಿಸಿದ್ರು. 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಈ ಗ್ರೌಂಡ್‌ನಲ್ಲಿ ಒಂದರಪಕ್ಕದಲ್ಲೊಂದು ನಿಂತಿದ್ರೆ ನೋಡಲು 2 ಕಣ್ಣುಗಳ ಸಾಲದಾಗಿತ್ತು. ಜೊತೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಪಲ್ಲಕ್ಕಿ ಜೊತೆ ಕ್ಷೇತ್ರದಲ್ಲಿ 7 ಕಿ.ಮೀ ಹೆಜ್ಜೆ ಹಾಕಿದ್ರು.

ADVERTISEMENT
Narasimha Nayak (Raju Gowda) : ನಾವೆಲ್ಲ ಭಾರತೀಯರು ಅನ್ನೋದನ್ನು ತಮ್ಮೇಶ್‌ ಗೌಡ ಎತ್ತಿ ಹಿಡಿದಿದ್ದಾರೆ.#bjpnews

ಸತತವಾಗಿ ಒಂದಿಲ್ಲ ಒಂದು ರೀತಿಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ತಮ್ಮೇಶ್‌ ಗೌಡ, ನಗರದ ಬ್ಯಾಟರಾಯನಪುರದಲ್ಲಿ ಸತತ 5ನೇ ವರ್ಷವೂ ಅತ್ಯಂತ ಸಡಗರ ಸಂಭ್ರಮದಿಂದ ಆಯೋಜಿಸುತ್ತಾ ಬರುತ್ತಿದ್ದಾರೆ. ಈ ವರ್ಷವೂ ಕಳೆದ ವರ್ಷಕ್ಕಿಂತ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿರುವ ದಸರಾ ಉತ್ಸವ ಆಚರಿಸುತ್ತಿದ್ದಾರೆ. ಮೈಸೂರು ದಸರಾ ಮಾದರಿಯಲ್ಲಿ ನಡೆದ ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ, ಸನ್ಮಾನ ಮತ್ತು ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಜನರಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮದ ಉದ್ದೇಶವಾಗಿದೆ.

May be an image of one or more people

ಮೊದಲ ದಿನದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ್‌, ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎರಡನೇ ದಿನ ಮಾಜಿ ಸಚಿವ ಬಿ.ಶ್ರೀರಾಮುಲು, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಮೂರನೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸೇರಿದಂತೆ ಹಲವು ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು.

May be an image of text

ಯುವ, ಮಹಿಳಾ ದಸರಾ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಜೊತೆಗೆಯೇ ಹಿರಿಯ ಸಾಧಕರು ಮತ್ತು ಪಕ್ಷದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಭಜನಾ ಸ್ಪರ್ಧೆ ಹಾಗೂ ಸಾವಿರಾರು ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಯುವ ನಾಯಕ ತಮ್ಮೇಶ್‌ ಗೌಡ ಸ್ತ್ರೀಶಕ್ತಿಗೆ ಬಲ ತುಂಬಿದರು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳಲ್ಲಿ ನೆರೆದಿದ್ದ ಜನರು ಭಾವ ಪರವಶವಾಗಿರುವ ಸನ್ನಿವೇಶ ಕಂಡುಬಂತು. ಮುಂದಿನ ವರ್ಷ ಇನ್ನೂ ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜನೆ ಮಾಡುತ್ತೇನೆ. ಇದು ಯಾವುದೇ ಭಾಷೆಗೆ ಸೀಮಿತವಾಗಿಲ್ಲ, ಬ್ಯಾಟರಾಯನಪುರದ ಅಸ್ಮಿತೆಯ ಉಳಿವಿಗಾಗಿ ಈ ಉತ್ಸವ ಮಾಡುತ್ತಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ ಎಂದು ತಮ್ಮೇಶ್‌ ಗೌಡ ಕಾರ್ಯಕ್ರಮದಲ್ಲಿ ಮಾತನಾಡಿದರು.

May be an image of one or more people, wedding and text

ವೇದಿಕೆಯಲ್ಲಿ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ, ವಿವಿಧ ದೇವರ ಮೂರ್ತಿಗಳಿಗೆ ಮಹಾ ಆರತಿ ನೆರವೇರಿಸುವ ಮೂಲಕ ಬೃಹತ್‌ ಶೋಭಾ ಯಾತ್ರೆಯೂ ನಡೆಯಿತು. ಪ್ರಮುಖವಾಗಿ ನಂಜಪ್ಪ ವೃತ್ತ, ತಿಂಡ್ಲು, ಕೊಡಿಗೇಹಳ್ಳಿ ಹಾಗೂ ಸಹಕಾರನಗರದ ಮೂಲಕ ಬ್ಯಾಟರಾಯನಪುರದ ಕೋದಂಡಸ್ವಾಮಿ ದೇವಾಲಯದವರೆಗೆ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ವೀರಗಾಸೆ, ಕೀಲು ಕುದುರೆ, ಚಂಡೆವಾದ್ಯ, ತಮಟೆವಾದ್ಯ, ಜನಪದ ಕಲಾ ತಂಡಗಳ ಪ್ರದರ್ಶನಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು.

Byatarayanapura Dasara Utsava : ಸಾವಿರಾರು ಮಹಿಳೆಯರಿಗೆ ಬಾಗಿನ ಅರ್ಪಿಸಿ ವಿಶೇಷ ದಸರಾ ಆಚರಿಸಿದ ತಮ್ಮೇಶ್ ಗೌಡ..

ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳ ನೂರಕ್ಕು ಹೆಚ್ಚು ದೇವರ ಮೂರ್ತಿಗಳನ್ನು ಕೂರಿಸಿದ್ದ ಪಲ್ಲಕ್ಕಿಗಳನ್ನು ಮೈದಾನಕ್ಕೆ ಕರೆತರಲಾಯಿತು. ನೂರಾರು ಮಹಿಳೆಯರು ಲಲಿತ ಸಹಸ್ರನಾಮ ಪಾರಾಯಣ ಓದುವ ಮೂಲಕ ಉತ್ಸವವನ್ನು ಇನ್ನಷ್ಟು ಧಾರ್ಮಿಕತೆಗೆ ಕೊಂಡೊಯ್ದರು.

May be an image of one or more people and crowd

ಇನ್ನೂ ಅಕ್ಟೋಬರ್ 22ರಿಂದ 25ರವರೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರಾಜಕೀಯ ನಾಯಕರನ್ನು ಹೊರತುಪಡಿಸಿ ಸಿನಿಮಾ ತಾರೆಯರು ಉತ್ಸವದಲ್ಲಿ ಭಾಗವಹಿಸಿದ್ದರು. ಖ್ಯಾತ ಮ್ಯೂಸಿಕ್‌ ಮಾಂತ್ರಿಕ ಅರ್ಜುನ್‌ ಜನ್ಯ ಸಂಗೀತ ಸಂಜೆ ಹಾಗೂ ಖ್ಯಾತ ಭೋಜಪುರಿ ಗಾಯಕಿ ಶಿಲ್ಪಿ ರಾಜ್‌ ಅವರ ಗೀತೆಗಳ ಸದ್ದಿನಿಂದ ಉತ್ಸವದಲ್ಲಿ ಸಂಭ್ರಮ ಮನೆಮಾಡಿತ್ತು. ಒಟ್ಟಾರೆಯಾಗಿ ಬ್ಯಾಟರಾಯನಪುರ ದಸರಾ ಉತ್ಸವ ಸ್ಥಳೀಯ ಜನರಿಗೆ ಹೆಮ್ಮೆಯ ವಿಷಯವಾಗಿದ್ದಲ್ಲದೆ ಬೆಂಗಳೂರಿನಲ್ಲಿ ದಸರಾ ಸಂಭ್ರಮವನ್ನು ಹಂಚುವ ವಿಭಿನ್ನ ಕಾರ್ಯವಾಗಿದೆ ಎಂದರೆ ತಪ್ಪಾಗಲಾರದು.

Tags: #EntertainmentArjun Janya live ConcertPratidhvaņi BJP New̧s Thammesh Gowḑa BJP Secretaŗy Byatarayanapura Dasaŗa B Y Vijayendŗ̧a Congress Karnataķa BJP Karnataka̧ Devotiona̧l Festiva̧l One Nation One CelebrationSilpi raj Musical Night
Previous Post

BREAKING NEWS : ಅಮಿತ್ ಶಾ ವಿರುದ್ಧದ ಮಾನನಷ್ಟ ಮೊಕದ್ದಮೆ ಕೇಸ್ :  ರಾಹುಲ್ ಗಾಂಧಿ ಖುಲಾಸೆ

Next Post

ಗ್ರಾಹಕರೇ ಗಮನಿಸಿ : ನವೆಂಬರ್ 1ರಿಂದ  ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮ ಜಾರಿ

Related Posts

We need the Buddha! Why—how—for whom?
Top Story

ಬುದ್ಧ ಬೇಕು ! ಏಕೆ-ಹೇಗೆ-ಯಾರಿಗೆ ?

by ಪ್ರತಿಧ್ವನಿ
October 27, 2026
0

ಅಷ್ಟಾಂಗ ಮಾರ್ಗ-ಪಂಚಶೀಲ ತತ್ವಗಳನ್ನು ಒಪ್ಪಿಕೊಂಡು, 22 ಪ್ರತಿಜ್ಞಾ ವಿಧಿಗಳನ್ನು ಸ್ವೀಕರಿಸಿದರೆ ವ್ಯಕ್ತಿಯ ಧಾರ್ಮಿಕ-ಸಾಮಾಜಿಕ ಅಸ್ಮಿತೆ ಬದಲಾಗುತ್ತದೆ. ಆದರೆ ವ್ಯಕ್ತಿಯೊಳಗೆ ಹುಟ್ಟಿದ ದಿನದಿಂದಲೂ ಪ್ರಯೋಗಿಸಲ್ಪಡುವ ಆಚರಣೆಗಳು, ವಿಧಿ ವಿಧಾನಗಳು,...

Read moreDetails
ಕರ್ನಾಟಕದಲ್ಲಿ ಚಳಿಯ ಅಬ್ಬರ ಶುರು! ಮುಂದಿನ 7 ದಿನಗಳ ಹವಾಮಾನ ಹೇಗಿರಲಿದೆ?ಹವಾಮಾನ ತಜ್ಞರು ಹೇಳಿದ್ದೇನು?

ಕರ್ನಾಟಕದಲ್ಲಿ ಚಳಿಯ ಅಬ್ಬರ ಶುರು! ಮುಂದಿನ 7 ದಿನಗಳ ಹವಾಮಾನ ಹೇಗಿರಲಿದೆ?ಹವಾಮಾನ ತಜ್ಞರು ಹೇಳಿದ್ದೇನು?

October 27, 2026
ರಚಿತಾ ರಾಮ್‌ ಭೇಟಿಗೆ ಅಡ್ಡಿಯಾಗಿದ್ದರೇ ವಿಜಯಲಕ್ಷ್ಮೀ? ಅಸಲಿ ಸಂಗತಿ ಏನು?

ರಚಿತಾ ರಾಮ್‌ ಭೇಟಿಗೆ ಅಡ್ಡಿಯಾಗಿದ್ದರೇ ವಿಜಯಲಕ್ಷ್ಮೀ? ಅಸಲಿ ಸಂಗತಿ ಏನು?

October 26, 2026
ಕಬ್ಬಿನ ಬೆಲೆ ಮಾತುಕತೆಗೆ ಆಹ್ವಾನಿಸಿ ರೈತರಿಗೆ ಮಾತಿನ ಅವಕಾಶ ನಿರಾಕರಣೆ! ಸಭೆಯಲ್ಲೇ ರೈತರ ಕಿತ್ತಾಟ

ಕಬ್ಬಿನ ಬೆಲೆ ಮಾತುಕತೆಗೆ ಆಹ್ವಾನಿಸಿ ರೈತರಿಗೆ ಮಾತಿನ ಅವಕಾಶ ನಿರಾಕರಣೆ! ಸಭೆಯಲ್ಲೇ ರೈತರ ಕಿತ್ತಾಟ

October 26, 2026
ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆರೋಪ; ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ ಹೇರಿದ್ದೇಕೆ?

ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆರೋಪ; ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ ಹೇರಿದ್ದೇಕೆ?

October 26, 2026
Next Post
Attention customers: New rules for LPG cylinders to come into effect from November 1st

ಗ್ರಾಹಕರೇ ಗಮನಿಸಿ : ನವೆಂಬರ್ 1ರಿಂದ  ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮ ಜಾರಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada