• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕರ್ನಾಟಕದಲ್ಲಿ ಚಳಿಯ ಅಬ್ಬರ ಶುರು! ಮುಂದಿನ 7 ದಿನಗಳ ಹವಾಮಾನ ಹೇಗಿರಲಿದೆ?ಹವಾಮಾನ ತಜ್ಞರು ಹೇಳಿದ್ದೇನು?

ಪ್ರತಿಧ್ವನಿ by ಪ್ರತಿಧ್ವನಿ
October 27, 2026
in ಕರ್ನಾಟಕ
0
ಕರ್ನಾಟಕದಲ್ಲಿ ಚಳಿಯ ಅಬ್ಬರ ಶುರು! ಮುಂದಿನ 7 ದಿನಗಳ ಹವಾಮಾನ ಹೇಗಿರಲಿದೆ?ಹವಾಮಾನ ತಜ್ಞರು ಹೇಳಿದ್ದೇನು?
Share on WhatsAppShare on FacebookShare on Telegram

ರಾಜ್ಯದಲ್ಲಿ ಚಳಿಗಾಲದ ವಾತಾವರಣ ನಿಧಾನವಾಗಿ ಆರಂಭವಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಬೆಳಗಿನ ಜಾವ ಚಳಿ ಮತ್ತು ಮಂಜು ಆವರಿಸುತ್ತಿದೆ. ರಾಜಧಾನಿ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಂಪಿನ ಅನುಭವ ಹೆಚ್ಚಾಗಿದೆ. ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 4.7 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ.

ADVERTISEMENT

 

ಸೋಮವಾರ ರಾಜ್ಯದ 15 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ ಕಡಿಮೆಯಾಗಿ ದಾಖಲಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಸಾಮಾನ್ಯಕ್ಕಿಂತ 4.7 ಡಿಗ್ರಿ ಕಡಿಮೆಯಾಗಿದೆ. ಗದಗದಲ್ಲಿ ಕನಿಷ್ಠ 15.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ವಾಡಿಕೆಗಿಂತ 4.1 ಡಿಗ್ರಿ ಕಡಿಮೆಯಾಗಿದೆ.

ಇನ್ನು ಧಾರವಾಡದಲ್ಲಿ 15.4 ಡಿಗ್ರಿ, ಬೆಳಗಾವಿಯಲ್ಲಿ 15.6 ಡಿಗ್ರಿ, ಬಾಗಲಕೋಟೆಯಲ್ಲಿ 16.5 ಡಿಗ್ರಿ ಹಾಗೂ ರಾಯಚೂರಿನಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಳಗಿನ ಜಾವ ಚಳಿ ಹೆಚ್ಚಾಗುತ್ತಿರುವುದರಿಂದ ಜನರು ಬೆಚ್ಚಗಿನ ಉಡುಪುಗಳ ಮೊರೆ ಹೋಗುತ್ತಿದ್ದಾರೆ.

Farmers Fighting Belagavi : ರೈತರ ಸಭೆಯಲ್ಲಿ ಸರ್ಕಾರದ ಅಸಹಾಯಕತೆ ತೋಡಿಕೊಂಡ ಸಿಎಂ ಡಿಕೆಶಿ.. #pratidhvani

ಮುಂದಿನ ಏಳು ದಿನಗಳ ಹವಾಮಾನ ಹೇಗಿರಲಿದೆ?

ಮುಂದಿನ ಏಳು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬೆಳಗಿನ ವೇಳೆಯಲ್ಲಿ ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಹಗಲಿನಲ್ಲಿ ಸಾಮಾನ್ಯವಾಗಿ ಬಿಸಿಲಿನ ವಾತಾವರಣ ಇರಲಿದೆ. ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆ ತಿಳಿಸಿದೆ.

 

ಈ ವರ್ಷದ ಚಳಿಗಾಲದಲ್ಲಿ ಚಳಿಯ ತೀವ್ರತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಇರಬಹುದು ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಎಲ್‌ನಿನೊ ಪರಿಣಾಮದಿಂದ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ವೇಳೆ ಚಳಿಗಾಲದಲ್ಲಿಯೂ ತೀವ್ರ ಚಳಿ ಕಂಡುಬರುವ ಸಾಧ್ಯತೆ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.

Farmers Fighting Belagavi :  ಎಲ್ಲ ಇವತ್ತೇ ನಿರ್ಧಾರವಾಗಲಿ, ಪಟ್ಟು ಬಿಡದ ರೈತರು, ಪೇಚಿಗೆ ಸಿಎಂ.. #pratidhvani

ಹಿಂಗಾರು ಮಳೆಯ ಅವಧಿಯ ಈ ತಿಂಗಳ ಮಳೆ ಬಹುತೇಕ ಮುಕ್ತಾಯಗೊಂಡಿದ್ದು, ನವೆಂಬರ್ ಎರಡನೇ ವಾರದವರೆಗೆ ರಾಜ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದೆ ಎಂದು ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಬೆಳಗಿನ ಜಾವ ಚಳಿ ಹೆಚ್ಚಾಗಿ ಅನುಭವಕ್ಕೆ ಬಂದರೂ, ಹಗಲಿನ ವೇಳೆಯಲ್ಲಿ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇರುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬೆಳಗಿನ ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯುವ ನಿರೀಕ್ಷೆಯಿದ್ದು, ಮುಂದಿನ ದಿನಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳ ಬಗ್ಗೆ ಜನರು ಗಮನಹರಿಸುವುದು ಅಗತ್ಯವಾಗಿದೆ.

 

 

Tags: bengaluru weatherCold WeatherEl NinoFog AlertKarnataka rain forecastKarnataka WeatherTemperature DropVijayapura WeatherWeather UpdateWinter Season
Previous Post

ರಚಿತಾ ರಾಮ್‌ ಭೇಟಿಗೆ ಅಡ್ಡಿಯಾಗಿದ್ದರೇ ವಿಜಯಲಕ್ಷ್ಮೀ? ಅಸಲಿ ಸಂಗತಿ ಏನು?

Next Post

ಬುದ್ಧ ಬೇಕು ! ಏಕೆ-ಹೇಗೆ-ಯಾರಿಗೆ ?

Related Posts

ರಚಿತಾ ರಾಮ್‌ ಭೇಟಿಗೆ ಅಡ್ಡಿಯಾಗಿದ್ದರೇ ವಿಜಯಲಕ್ಷ್ಮೀ? ಅಸಲಿ ಸಂಗತಿ ಏನು?
ಕರ್ನಾಟಕ

ರಚಿತಾ ರಾಮ್‌ ಭೇಟಿಗೆ ಅಡ್ಡಿಯಾಗಿದ್ದರೇ ವಿಜಯಲಕ್ಷ್ಮೀ? ಅಸಲಿ ಸಂಗತಿ ಏನು?

by ಪ್ರತಿಧ್ವನಿ
October 26, 2026
0

  ನಟ ದರ್ಶನ್‌ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರನ್ನು ಸುತ್ತುವರಿದಿರುವ ವಿವಾದಗಳು ಮತ್ತೆ ಚರ್ಚೆಗೆ ಬಂದಿವೆ. ನಟಿ ರಚಿತಾ ರಾಮ್‌ ಅವರು ದರ್ಶನ್‌ ಅವರನ್ನು ಜೈಲಿನಲ್ಲಿ...

Read moreDetails
ಕಬ್ಬಿನ ಬೆಲೆ ಮಾತುಕತೆಗೆ ಆಹ್ವಾನಿಸಿ ರೈತರಿಗೆ ಮಾತಿನ ಅವಕಾಶ ನಿರಾಕರಣೆ! ಸಭೆಯಲ್ಲೇ ರೈತರ ಕಿತ್ತಾಟ

ಕಬ್ಬಿನ ಬೆಲೆ ಮಾತುಕತೆಗೆ ಆಹ್ವಾನಿಸಿ ರೈತರಿಗೆ ಮಾತಿನ ಅವಕಾಶ ನಿರಾಕರಣೆ! ಸಭೆಯಲ್ಲೇ ರೈತರ ಕಿತ್ತಾಟ

October 26, 2026
ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆರೋಪ; ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ ಹೇರಿದ್ದೇಕೆ?

ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆರೋಪ; ಮಾತಂಗಿ ದೇವಿ ದರ್ಶನಕ್ಕೆ ನಿರ್ಬಂಧ ಹೇರಿದ್ದೇಕೆ?

October 26, 2026
ಪ್ರಮೋದಾದೇವಿ ಪತ್ರಕ್ಕೆ ಯತೀಂದ್ರ ತಿರುಗೇಟು; ಅರಮನೆ, ಅಂಬಾರಿ ಬಗ್ಗೆ ಹೇಳಿದ್ದೇನು?

ಪ್ರಮೋದಾದೇವಿ ಪತ್ರಕ್ಕೆ ಯತೀಂದ್ರ ತಿರುಗೇಟು; ಅರಮನೆ, ಅಂಬಾರಿ ಬಗ್ಗೆ ಹೇಳಿದ್ದೇನು?

October 26, 2026
Significant surge in women's travel due to free bus services: Statistics from 4 states, including Karnataka, revealed

ಉಚಿತ ಬಸ್ ನಿಂದ ಮಹಿಳೆಯರ ಪ್ರಯಾಣದಲ್ಲಿ ಭಾರೀ ಏರಿಕೆ :  ಕರ್ನಾಟಕ ಸೇರಿ 4 ರಾಜ್ಯಗಳ ಅಂಕಿಅಂಶಗಳು ಬಹಿರಂಗ

October 26, 2026
Next Post
We need the Buddha! Why—how—for whom?

ಬುದ್ಧ ಬೇಕು ! ಏಕೆ-ಹೇಗೆ-ಯಾರಿಗೆ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada