• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಿಡಿಪಿ ಬೆಳವಣಿಗೆಯ ನೈಜ ಸ್ವರೂಪ ಹುಟ್ಟು ಹಾಕಿದ ಹಲವು ಪ್ರಶ್ನೆಗಳು : ಉತ್ತರಿಸುವರರು ಯಾರು..?

ದೇಶದ ಒಟ್ಟು ಜಿಡಿಪಿಯನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಪ್ರಮಾಣವಾದ ವಾರ್ಷಿಕ ತಲಾ ಜಿಡಿಪಿಯ ಮಾಪನ ಸಾಧ್ಯವಾದಷ್ಟು ನೈಜ ಚಿತ್ರಣ ಕೊಡುತ್ತದೆ..

ಪ್ರತಿಧ್ವನಿ by ಪ್ರತಿಧ್ವನಿ
September 7, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ
0
ಜಿಡಿಪಿ ಬೆಳವಣಿಗೆಯ ನೈಜ ಸ್ವರೂಪ ಹುಟ್ಟು ಹಾಕಿದ ಹಲವು ಪ್ರಶ್ನೆಗಳು : ಉತ್ತರಿಸುವರರು ಯಾರು..?
Share on WhatsAppShare on FacebookShare on Telegram

ಜಿಡಿಪಿ ಬೆಳವಣಿಗೆ ಮತ್ತು ಕನ್ನಡಿಯೊಳಗಿನ ಗಂಟು

ADVERTISEMENT


–ಬಿ. ಶ್ರೀಪಾದ ಭಟ, ಹಿರಿಯ ಚಿಂತಕರು ,ಲೇಖಕರು, ಶಿಕ್ಷಣ ತಜ್ಞರು..

ವಾಸ್ತವದಲ್ಲಿ…

ಭಾರತದ ಆರ್ಥಿಕತೆಯನ್ನು ಜಿಡಿಪಿ(ಅಂತರಿಕ ಉತ್ತನ್ನ) ಬೆಳವಣಿಗೆ ಆಧರಿಸಿ ನಿರ್ಧರಿಸಲಾಗುತ್ತದೆ. ಇದರ ಪ್ರಮಾಣ ಹೆಚ್ಚಳವಾದರೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ ಜಿಡಿಪಿ ಎಂದರೆ ದೇಶದೊಳಗೆ ಒಂದು ನಿರ್ದಿಷ್ಟ ಅವಧಿಯಲ್ಲಿ (ಮೂರು ತಿಂಗಳು ಅಥವಾ ಒಂದು ವರ್ಷದಲ್ಲಿ) ಉತ್ಪಾದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಹಣಕಾಸಿನ ಮೌಲ್ಯ. ಆರ್ಥಿಕ ತಜ್ಞರು ʼ ಜಿಡಿಪಿ ಎಂದರೆ ದೇಶದ ಬಳಿ ಇರುವ ಹಣದ ಮೊತ್ತವಲ್ಲ. ಅದು ಸರ್ಕಾರದ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಅಲ್ಲ. ಜನರ ಬಳಿ ಇರುವ ನಗದು ಹಣವೂ ಅಲ್ಲ. ಅದನ್ನು ತಕ್ಷಣ ನಗದಾಗಿ ಪರಿವರ್ತಿಸಬಹುದಾದ ಸಂಪತ್ತಿನ ಮೊತ್ತ ಎಂದೂ ಮಾಡಿಕೊಳ್ಳಬಾರದುʼ ಎಂದು ಹೇಳುತ್ತಾರೆ.

CJP General Secretary Afreen On Karnataka Schools : ಕೆಪಿಎಸ್ಸಿ ಹಗರಣವನ್ನು ನಾವು ಸಹಿಸೋದಿಲ್ಲ...

ಇತ್ತೀಚಿನ ಭಾರತದ ಜಿಡಿಪಿ ಅಂಕಿಅಂಶಗಳು ಕೂಡ ಈ ವಿವರಣೆಯನ್ನು ಸಮರ್ಥಿಸುತ್ತವೆ. ಆದರೆ ಜಿಡಿಪಿ ನಿಜವಾಗಿ ಏನನ್ನು ಪ್ರತಿಬಿಂಬಿಸುತ್ತದೆ? ಜಿಡಿಪಿ ಎಂಬುದು ಒಂದು ದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾಗುವ/ಮಾರಾಟವಾಗುವ ಎಲ್ಲಾ ಅಂತಿಮ ಸರಕುಗಳು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಅಳೆಯುವ ಸ್ಥೂಲ ಆರ್ಥಿಕ ಸೂಚಕವಾಗಿದೆ. ಇಲ್ಲಿ ಬಂಡವಾಳಶಾಹಿಗಳ ಬ್ಯಾಲೆನ್ಸ್‌ ಶೀಟ್‌ ಸಹ ಒಳಗೊಳ್ಳಲಾಗುತ್ತದೆ.

ಒಟ್ಟಾರೆಯಾಗಿ ನೋಡಿದರೆ, ಜಿಡಿಪಿ ಒಂದು ದೇಶದ ಆರ್ಥಿಕತೆಯ ಗಾತ್ರ ಮತ್ತು ಕಾರ್ಯಕ್ಷಮತೆಯನ್ನು ಅಳೆಯುವ ಮಾನದಂಡವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಅದು ತೋರಿಸುವುದಕ್ಕಿಂತ ಹೆಚ್ಚಿನ ಸಂಗತಿಗಳನ್ನು ಮರೆಮಾಚುತ್ತದೆ. ಜಿಡಿಪಿ ಬೆಳವಣಿಗೆಯ ದರ ಹೆಚ್ಚಾದರೆ ನಮ್ಮ ಜೀವನಮಟ್ಟವೂ ಸುಧಾರಿಸುತ್ತಿದೆ ಎಂದು ಹಾದಿ ತಪ್ಪಿಸುತ್ತಾರೆ. ನಾವು ಯಾವ ರೀತಿಯಲ್ಲಿ ಬೆಳೆಯುತ್ತಿದ್ದೇವೆ ಎಂಬುದನ್ನು ಯಾರೂ ಪರಿಶೀಲಿಸುತ್ತಿಲ್ಲ.

ಇದರ ಬದಲಿಗೆ ದೇಶದ ಒಟ್ಟು ಜಿಡಿಪಿಯನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಪ್ರಮಾಣವಾದ ವಾರ್ಷಿಕ ತಲಾ ಜಿಡಿಪಿಯ ಮಾಪನ ಸಾಧ್ಯವಾದಷ್ಟು ನೈಜ ಚಿತ್ರಣ ಕೊಡುತ್ತದೆ. ಇದು ಪ್ರತಿ ವ್ಯಕ್ತಿಗೆ ಸಂಬಂಧಿಸಿದಂತೆ ಆರ್ಥಿಕ ಉತ್ಪಾದನೆಯ ಉತ್ತಮ ಅಳತೆಯನ್ನು ನೀಡುತ್ತದೆ ಭಾರತದ ತಲಾ ಜಿಡಿಪಿ ಕೂಡ ತಪ್ಪು ಚಿತ್ರಣ ನೀಡುವ ಸಾಧ್ಯತೆಯಿದೆ.. ಅನೇಕ ಸಂದರ್ಭಗಳಲ್ಲಿ ಹೆಚ್ಚಿನ ಆದಾಯ ಹೊಂದಿರುವ ಅತಿ ಶ್ರೀಮಂತರ ಸರಾಸರಿ ಆದಾಯವನ್ನು ಮೇಲಕ್ಕೆ ಹಿಗ್ಗಿಸಿದರೆ ತಲಾ ಜಿಡಿಪಿ ಸಾಮಾನ್ಯ ಜನರ ನೈಜ ಆರ್ಥಿಕ ಸ್ಥಿತಿಯನ್ನು ಸರಿಯಾಗಿ ಪ್ರತಿಬಿಂಬಿಸುವುದಿಲ್ಲ.

Did India Overstate GDP Growth During Modi 1.0?

ಭಾರತದ ಜಿಡಿಪಿ ಬೆಳೆಯುತ್ತಿದ್ದರೂ ಅದರ ಪ್ರಯೋಜನಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ಇದು ಜಿಡಿಪಿ ಮತ್ತು ಆರ್ಥಿಕ ಅಸಮಾನತೆ ಕುರಿತು ಮಹತ್ವದ ಚರ್ಚೆಗೆ ದಾರಿ ಮಾಡಿಕೊಡುತ್ತದೆ. ದೇಶದ ಆರ್ಥಿಕ ಬೆಳವಣಿಗೆಯ ಲಾಭ ಎಲ್ಲರಿಗೂ ತಲುಪುತ್ತಿದೆ ಎಂಬ ಸುಳ್ಳುಗಳು ಬಹಿರಂಗಗೊಳ್ಳುತ್ತವೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ನಿರಂತರವಾಗಿ ಹೆಚ್ಚುತ್ತಿರುವ ಅಗಾಧ ಅಸಮಾನತೆಯ ಭಾರತದ ವಾಸ್ತವ ಬಿಚ್ಚಿಕೊಳ್ಳುತ್ತದೆ. ಈ ವಿಷಯವನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಿದಾಗ, ಈ ಅಸಮಾನತೆಗೆ ಕಾರಣವಾಗುತ್ತಿರುವ ವಿವಿಧ ಅಂಶಗಳು ಅರ್ಥವಾಗುತ್ತದೆ.

ಇದನ್ನೂ ಓದಿ : ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

ಇಂದಿಗೂ 80 ಕೋಟಿ ಜನಸಂಖ್ಯೆ ಬಿಪಿಎಲ್‌ ಕಾರ್ಡ ಹೊಂದಿದ್ದಾರೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು, ವಂಚಿತ ಸಮುದಾಯಗಳು, ಅಲೆಮಾರಿಗಳು ಮತ್ತು ಅನೌಪಚಾರಿಕ, ಅಸಂಘಟಿತ ಆರ್ಥಿಕ ವಲಯದಲ್ಲಿ ತೊಡಗಿಸಿಕೊಂಡಿರುವವರು ಈ ಸಂಪತ್ತು ಸೃಷ್ಟಿಯ ಪ್ರಕ್ರಿಯೆಯಿಂದ ಇನ್ನೂ ಹೊರಗುಳಿದಿದ್ದಾರೆ. ಜಿಡಿಪಿತ ಅಭಿವೃದ್ಧಿಗೂ ಇವರ ಬದುಕಿಗೂ ಯಾವುದೇ ಸಂಬಂಧವಿರುವುದಿಲ್ಲ. ಭಾರತದ ಜಿಡಿಪಿ ಹೆಚ್ಚಿನ ಮಟ್ಟದಲ್ಲಿದ್ದರೂ ಅದರ ಜೊತೆಯಲ್ಲೇ ಅನೇಕ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಮುಂದುವರಿಯುತ್ತದೆ. ಜಿಡಿಪಿ ಅಭಿವೃದ್ದಿಯಾಗಿರುವ ಸಂದರ್ಭಗಳಲ್ಲಿ ರೈತರ ಆತ್ಮಹತ್ಯೆಗಳೂ ಹೆಚ್ಚಾಗಿವೆ. ಇದರಿಂದ ಜಿಡಿಪಿಯ ಲಾಭ ಎಂದರೆ ಅಸಮಾನತೆ ಮತ್ತಷ್ಟು ಹೆಚ್ಚಾಗಿದೆ ಎನ್ನುವ ವಾಸ್ತವ ನಮ್ಮ ಮುಂದಿದೆ.

ಸಾಮಾನ್ಯವಾಗಿ ಆರ್ಥಿಕ ಬೆಳವಣಿಗೆಯ ಹೆಚ್ಚಿನ ಲಾಭವು ಅತಿ ಶ್ರೀಮಂತರ, ಸಮಾಜದ ಮೇಲ್ವರ್ಗದವರ ಕೈಯಲ್ಲೇ ಹೆಚ್ಚು ಕೇಂದ್ರೀಕೃತವಾಗುತ್ತದೆ. ಕೆಲವು ಅಧ್ಯಯನಗಳು ಭಾರತದಲ್ಲಿ ಬಳಕೆ ಸಂಬಂಧಿತ ಅಸಮಾನತೆ ಕಡಿಮೆಯಾಗಿದೆ ಎಂದು ಸೂಚಿಸಿದ್ದರೂ ಆದಾಯದ ಅಸಮಾನತೆ ಇನ್ನೂ ಗಂಭೀರವಾದ ಸಮಸ್ಯೆಯಾಗಿದೆ. ಜನಸಂಖ್ಯೆಯ ಅತ್ಯಲ್ಪ ಪ್ರಮಾಣದ ಜನರು ದೇಶದ ಒಟ್ಟು ಸಂಪತ್ತಿನ ಅಸಮಾನ ಪ್ರಮಾಣದ ದೊಡ್ಡ ಪಾಲನ್ನು ಹೊಂದಿದ್ದಾರೆ.

ಜಿಡಿಪಿ ಬೆಳವಣಿಗೆಯ ನೈಜ ಸ್ವರೂಪ ಮತ್ತು ಪ್ರಶ್ನೆಗಳು

2026-27ರ ಮೊದಲ ತ್ರೈಮಾಸಿಕದಲ್ಲಿ(ಎಪ್ರಿಲ್-ಜೂನ್) ಜಿಡಿಪಿ ಶೇ.7.8ರಷ್ಟು ಬೆಳವಣಿಗೆಯಾಗಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಕೂಡಲೆ ವಿಡಿಯೋ ಮೂಲಕ ʼದೇಶ ಪ್ರಗತಿಯತ್ತ ಸಾಗುತ್ತಿದೆʼ ಎಂದು ಬೆನ್ನು ತಟ್ಟಿಕೊಂಡಿದ್ದಾರೆ. ಎಂದಿನಂತೆ ಮಡಿಲು ಮಾಧ್ಯಮಗಳು ಈ ಸುದ್ದಿಗೆ ಭರ್ಜರಿ ಪ್ರಚಾರ ಕೊಡುತ್ತಿವೆ ಮತ್ತು ಬಿಜೆಪಿ ಐಟಿ ಸೆಲ್‌ ತನ್ನ ಸುಳ್ಳುಗಳ ಬತ್ತಳಿಕೆಯಿಂದ ಬಾಣಗಳನ್ನು ಬಿಡುತ್ತಿದೆ. ಆದರೆ ಭಾರತದ ಮಾಜಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ಅವರು ಸರ್ಕಾರದ ಈ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

PR can polish picture of GDP, not economy': Congress slams Modi govt, cites  former finance secy's remarks

ಅವರ ಪ್ರಕಾರ ಭಾರತದ ನೈಜ ಜಿಡಿಪಿ ಬೆಳವಣಿಗೆ ಅಂದಾಜು ಶೇ.2.6 ಮಾತ್ರ. 2025-26 ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ. ಹೀಗಾಗಿ ಹಿಂದಿನ ವರ್ಷದ ಅಂಕಿ ಕಡಿಮೆಯಾದ ನಂತರ ಈ ವರ್ಷದ ಬೆಳವಣಿಗೆಯ ಪ್ರಮಾಣ ಹೋಲಿಕೆಯಲ್ಲಿ ಸಹಜವಾಗಿಯೇ ಹೆಚ್ಚು ದೊಡ್ಡದಾಗಿ ಕಾಣುತ್ತದೆ. 2011-12ರ ಬೇಸ್‌ ವರ್ಷವನ್ನು ಆಧರಿಸಿ 2025-26ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 86 ಲಕ್ಷ ಕೋಟಿ (ಶೇ.6.8) ಎಂದು ವರದಿಯಾಗಿತ್ತು. 2026-27ರ ಜಿಡಿಪಿ ಮಾಪನಕ್ಕಾಗಿ 2022-23 ಬೇಸ್‌ ವರ್ಷಕ್ಕೆ ಬದಲಾಯಿಸಿದ್ದಾರೆ.

ಅದಕ್ಕೆ ಅನುಗುಣವಾಗಿ ಹಿಂದಿನ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯನ್ನು 86 ಲಕ್ಷ ಕೋಟಿಯಿಂದ 80 ಲಕ್ಷ ಕೋಟಿಗೆ ಇಳಿಸಿದ್ದಾರೆ.(6 ಲಕ್ಷ ಕೋಟಿ ಕಡಿತ). ಇದರ ಆಧರಿಸಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿನ 88 ಲಕ್ಷ ಕೋಟಿ ಜಿಡಿಪಿಯನ್ನು ತುಲನಾತ್ನಕವಾಗಿ ಲೆಕ್ಕಾಚಾರ ಹಾಕಿ ಶೇ.7.8 ಎಂದು ಹೇಳುತ್ತಿದ್ದಾರೆ. ಇಂದಿನ ಆರ್ಥಿಕ ಹಿಂಜರಿಕೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ವೇಗವಾಗಿ ಬೆಳೆಯುತ್ತಿದೆ ಎನ್ನುವ ಬಲೂನ್‌ ಹಾರಿ ಬಿಡಲು ಕಷ್ಟವಾಗಿತ್ತು. ಹಾಗಾಗಿ ಹಿಂದಿನ ವರ್ಷದ ಆರ್ಥಿಕತೆಯ ಗಾತ್ರವನ್ನೇ ಚಿಕ್ಕದಾಗಿ ಮಾಡಲಾಯಿತು. ಮೊದಲಿಗೆ ಈ ಬೇಸ್‌ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದ್ದು ಯಾಕೆ ಎನ್ನುವುದಕ್ಕೆ ಸೂಕ್ತ ಸಮರ್ಥನೆಗಳಿಲ್ಲ. ಇಡೀ ಲೆಕ್ಕಾಚಾರದಲ್ಲಿ ಪಾರದರ್ಶಕತೆಯ ಕೊರತೆಯಿದೆ. ಎನ್‌ಡಿಎ ಸರ್ಕಾರಕ್ಕೆ ಮೂಲ ಮಾನದಂಡವನ್ನೇ ಬದಲಿಸುವುದು ಆರ್ಥಿಕ ಅದ್ಭುತವಲ್ಲ ಎನ್ನುವ ಪ್ರಾಥಮಿಕ ಪಾಠವನ್ನು ಯಾರಾದರೂ ಹೇಳಿಕೊಡಬೇಕಿದೆ.

MLA GT Devegowda On JDS And HD Kumaraswamy: 3 ವರ್ಷದಿಂದ ಪಕ್ಷದವರೇ ಅವಮಾನ ಮಾಡಿದ್ದಾರೆ #pratidhvani

ಸರ್ಕಾರವು ಈ ಬದಲಾವಣೆ ಏಕೆ ಮಾಡಲಾಗಿದೆ, ಯಾವ ದತ್ತಾಂಶದ ಆಧಾರದ ಮೇಲೆ ಮಾಡಲಾಗಿದೆ, ಯಾವ ವಲಯಗಳಲ್ಲಿ ಎಷ್ಟು ಪರಿಷ್ಕರಣೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಸಾರ್ವಜನಿಕವಾಗಿ ವಿವರಿಸಬೇಕಾಗುತ್ತದೆ. ಸರ್ಕಾರ ʼಅಂಕಿಅಂಶಗಳು ಬದಲಾಗಿವೆ, ಅಷ್ಟೇʼ ಎಂದು ಹೇಳಿ ಮುಂದೆ ಸಾಗಲು ಸಾಧ್ಯವಿಲ್ಲ. ಅಷ್ಟು ದೊಡ್ಡ ಬದಲಾವಣೆಯಾದಾಗ ಅದರ ಹಿಂದೆ ಇರುವ ಕಾರಣ ಮತ್ತು ಲೆಕ್ಕಾಚಾರವನ್ನು ಜನರಿಗೆ ವಿವರಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ಆದರೆ ಮೋದಿ ಸರ್ಕಾರ ಇದಕ್ಕೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲ.

ಇಂತಹ ವಿಶ್ವಾಸಾರ್ಹತೆ ಇಲ್ಲದ ಅಂಕಿಅಂಶಗಳ ಮೇಲಾಟವನ್ನು ಗುಮಾನಿಯಿಂದ ನೋಡುತ್ತಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಬೇಕಿದೆ

ಹಿಂದಿನ ವರ್ಷದ ಜಿಡಿಪಿ ಅಂಕಿಅಂಶಗಳನ್ನು ಏಕೆ ಕೆಳಮುಖವಾಗಿ ಪರಿಷ್ಕರಿಸಲಾಯಿತು?
ಅಂಕಿಅಂಶಗಳನ್ನು ಏಕೆ ತಿರುಚಲಾಗುತ್ತಿದೆ?

ಹಾಗಾದರೆ ಭಾರತದ ನೈಜ ಜಿಡಿಪಿ ಬೆಳವಣಿಗೆ ಎಷ್ಟು?

ಯುಪಿಎ 1&2 ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಸರಾಸರಿ ಶೇ.11.14ರಷ್ಟಿದ್ದರೆ ಮೋದಿ ನೇತೃತ್ವದ ಕಳೆದ ಹನ್ನೊಂದು ವರ್ಷಗಳಲ್ಲಿ ಶೇ.6.21ರಷ್ಟಿದೆ. ಯಾಕೆ ಜಿಡಿಪಿ ಬೆಳವಣಿಗೆ ಶೇ.5ರಷ್ಟು ಕುಂಠಿತವಾಗಿದೆ?

ಜಿಡಿಪಿ ಬೆಳವಣಿಗೆ ನಿಜವಾಗಿದ್ದರೆ ನಿರುದ್ಯೋಗದ ಪ್ರಮಾಣ ಯಾಕೆ ಹೆಚ್ಚಾಗುತ್ತಿದೆ?

ಉತ್ತಮ ಗುಣಮಟ್ಟದ ಉದ್ಯೋಗಗಳು ಏಕೆ ಸೃಷ್ಟಿಯಾಗುತ್ತಿಲ್ಲ?

The Demographic Dividend - GEOGRAPHY MYP/GCSE/DP

ರಘುರಾಮ್‌ ರಾಜನ್‌ ʼಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗದಿದ್ದರೆ ಭಾರತದ ಜನಸಂಖ್ಯಾ ಲಾಭಾಂಶದ (Demographic Dividend) ಪ್ರಯೋಜನವನ್ನು ಭಾರತ ಕಳೆದುಕೊಳ್ಳುವ ಸಾಧ್ಯತೆ ಇದೆಯೇ?ʼ ಎಂದು ಕೇಳುತ್ತಾರೆ

ಯಾಕೆ ಭಾರತದ ಪ್ರಜೆಗಳ ತಲಾ ವಾರ್ಷಿಕ ಜಿಡಿಪಿ ಕೇವಲ ರೂ. 1.6 -2.1 ಲಕ್ಷದಷ್ಟಿದೆ?(ಮಾಸಿಕ 13 ಸಾವಿರ-17 ಸಾವಿರ) (2025ರ ವಿಶ್ವ ಬ್ಯಾಂಕ್‌ ವರದಿ)
ಯಾಕೆ ಅಸಮಾನತೆ ಅತಿ ಹೆಚ್ಚಿನ ಪ್ರಮಾಣದಲ್ಲಿದೆ?

ಯಾಕೆ ಶೇ1ರಷ್ಟು ಅತಿ ಶ್ರೀಮಂತರ ಬಳಿ ಶೇ.41ರಷ್ಟು, ಶೇ.10ರಷ್ಟು ಶ್ರೀಮಂತರ ಬಳಿ ಶೇ.58, ಮಧ್ಯಮವರ್ಗ,, ಕೆಳವರ್ಗದ ಶೇ.50ರಷ್ಟು ಜನಸಂಖ್ಯೆ ಬಳಿ ಶೇ15ರಷ್ಟು ಸಂಪತ್ತಿದೆ? (2026 ಜಾಗತಿಕ ಅಸಮಾನತೆ ವರದಿ) ಯಾಕೆ 2004-2013ರ ಯುಪಿಎ ಸರ್ಕಾರದಲ್ಲಿ ಸರಾಸರಿ ವಾರ್ಷಿಕ ರೆವಿನ್ಯೂ ಸ್ವೀಕೃತಿ ಶೇ.14.2ರಷ್ಟಿದ್ದರೆ 2014-2025ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ರೆವಿನ್ಯೂ ಸ್ವೀಕೃತಿ ಶೇ.10.7ರಷ್ಟಿದೆ?

ಯಾಕೆ ಕಳೆದ ಹತ್ತು ವರ್ಷಗಳಲ್ಲಿ ರೆವಿನ್ಯೂ ಸ್ವೀಕೃತಿ ಶೇ.3.3ರಷ್ಟು ಕುಂಠಿತವಾಗಿದೆ?
2014ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಡಾಲರ್‌ ಎದುರು ರೂಪಾಯಿ ಮೌಲ್ಯ 58.59ರಷ್ಟಿದ್ದರೆ ಸೆಪ್ಟೆಂಬರ್‌ 2026ರಲ್ಲಿ 95ರಷ್ಟಿದೆ. ಯಾಕೆ ಕಳೆದ ಹತ್ತು ವರ್ಷಗಳಲ್ಲಿ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ?

ಭಾರತದ ಉತ್ಪಾದನಾ ವಲಯದ ಬೆಳವಣಿಗೆ ಪಿಎಂಐ ಜೂನ್‌ 2026ರಲ್ಲಿ 54.2 ಅಂಕಗಳಿಂದ ಜುಲೈ 2026ರಲ್ಲಿ 53.5 ಅಂಕಗಳಿಗೆ ಕುಸಿದಿದೆ. 2025 ಎಪ್ರಿಲ್‌ನಲ್ಲಿ 58.2 ಅಂಕಗಳಿತ್ತು. 2021ರಲ್ಲಿ 55.5, 2022ರಲ್ಲಿ 56 ಅಂಕಗಳಿತ್ತು.(ಹಣಕಾಸು ಇಲಾಖೆ ವರದಿ) ಇದು ಬೇಡಿಕೆಯಲ್ಲಿ ಕುಸಿತ, ಉದ್ಯೋಗ ನಷ್ಟ ಮತ್ತು ನಿಧಾನಗತಿಯ ಅಭಿವೃದ್ಧಿಯನ್ನು ಸೂಚಿಸುತ್ತದೆ. ಹಾಗಿದ್ದರೆ ಜಿಡಿಪಿ ಉತ್ತಮವಾಗಿದೆ ಎನ್ನುವುದು ಮರೆಮೋಸವಲ್ಲವೇ?

2019ರಲ್ಲಿ ಕಾರ್ಪೋರೇಟ್‌ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಿದರೂ ಸಹ ಭಾರತೀಯ ಕೈಗಾರಿಕೋದ್ಯಮಿಗಳು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲು ಏಕೆ ಹಿಂಜರಿಯುತ್ತಿದ್ದಾರೆ?

ವಿದೇಶಿ ನೇರ ಹೂಡಿಕೆ (ಎಫ್‌ಡಿಐ ) ಭಾರತಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏಕೆ ಬರುತ್ತಿಲ್ಲ? ಕಳೆದ ನಾಲ್ಕು ವರ್ಷಗಳಲ್ಲಿ 180 ಬಿಲಿಯನ್‌ ಡಾಲರ್‌ನಷ್ಟು (17 ಲಕ್ಷ ಕೋಟಿ) ಬಂಡವಾಳವನ್ನು ಯಾಕೆ ಹಿಂಪಡೆದುಕೊಂಡಿದ್ದಾರೆ(ಹೊರ ಹರಿವು)?

2022-23ರಲ್ಲಿ 29.35 ಬಿಲಿಯನ್‌ ಡಾಲರ್(2.78‌ ಲಕ್ಷ ಕೋಟಿ), 2023-24ರಲ್ಲಿ 44.47 ಬಿಲಿಯನ್‌ ಡಾಲರ್(4.22‌ ಲಕ್ಷ ಕೋಟಿ), 2024-25ರಲ್ಲಿ 51.49 ಬಿಲಿಯನ್‌ ಡಾಲರ್‌(4.8 ಲಕ್ಷ ಕೋಟಿ), 2025-26ರಲ್ಲಿ 54.04 ಬಿಲಿಯನ್‌ ಡಾಲರ್(5.22‌ ಲಕ್ಷ ಕೋಟಿ) ಬಂಡವಾಳವನ್ನು ಹಿಂಪಡೆದುಕೊಂಡಿದ್ದಾರೆ. ಹಾಗಿದ್ದರೆ ಜಿಡಿಪಿ ಅಭಿವೃದ್ಧಿಯಾಗಿದೆ ಎನ್ನುವುದರ ಅರ್ಥವೇನು? ಈ ಅಂಕಿಅಂಶಗಳು ಜಿಡಿಪಿ ಬೆಳವಣಿಗೆ ಎನ್ನುವುದು ಒಂದು ವಂಚನೆ ಎಂದು ಸಾಬೀತುಪಡಿಸುತ್ತವೆ.

ಕೊನೆಯಿರದ ಪ್ರಶ್ನೆಗಳು

ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿವೆ. ಖರೀದಿ ಸಾಮರ್ಥ್ಯ ಕುಸಿಯುತ್ತಿದೆ. ಇದರಿಂದಾಗಿ ಬೇಡಿಕೆ ಕಡಿಮೆಯಾಗುತ್ತಿದೆ. ವಾಸ್ತವದಲ್ಲಿ ಎಲ್ಲಾ ಸರಕುಗಳು ಮತ್ತು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಸೇವೆ ಮೇಲಿನ ತೆರಿಗೆಯಲ್ಲಿಯೂ ಹೆಚ್ಚಳವಾಗಿದೆ. ಈ ಕಾರಣದಿಂದ ಹಣದುಬ್ಬರ ಹೆಚ್ಚಾಗಿದೆ. ಈ ಕಾರಣದಿಂದ ಜಿಎಸ್ ಟಿ ಸಂಗ್ರಹ ಸಹಜವಾಗಿ ಏರಿಕೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಉತ್ಪಾದನೆ (production) ಮತ್ತು ಉತ್ಪನ್ನತೆಯ (productivity) ಸಾಮರ್ಥ್ಯ ಕುಂಠಿತವಾಗಿದೆ. ಉತ್ಪನ್ನಗಳ (products) ಗಾತ್ರ ಮತ್ತು ಪ್ರಮಾಣವೂ (volume ) ಕಡಿಮೆಯಾಗಿದೆ. ಗ್ರಾಹಕರ ಬೇಡಿಕೆ ಮತ್ತು ಬಳಕೆ ಹೆಚ್ಚಳವಾಗಿಲ್ಲ. ಕೋವಿಡ್ ಪೂರ್ವ ದಿನಗಳಿಗಿಂತಲೂ ಈಗ ಬೇಡಿಕೆ ಮತ್ತು ಬಳಕೆಯಲ್ಲಿ ಕೇವಲ ಶೇ. 2ರಷ್ಟು ಮಾತ್ರ ಏರಿಕೆಯಾಗಿದೆ. ನಿರುದ್ಯೋಗ ಹೆಚ್ಚಿದೆ.

Krishna Byre Gowda : ಜಸ್ಟ್ ಕ್ಲೀನ್ ಬೆಂಗಳೂರು ಅಭಿಯಾನಕ್ಕೆ ಚುರುಕು ಮುಟ್ಟಿಸಿದ GBA ಮಿನಿಸ್ಟರ್..!

ವಾಸ್ತವದಲ್ಲಿ ಜಿಎಸ್ ಟಿ ಸಂಗ್ರಹದ ಹೆಚ್ಚಳಿಕೆಗೂ ಜನಸಾಮಾನ್ಯರ ಬದುಕಿಗೂ, ಆರ್ಥಿಕ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಸರಕುಗಳ ಮೌಲ್ಯ ಹೆಚ್ಚಳವಾಗುತ್ತಿರುವ ಕಾರಣಕ್ಕೆ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ ಹೊರತಾಗಿ ಬೇಡಿಕೆ ಹೆಚ್ಚಾಗಿಲ್ಲ. ವೇತನವೂ ಏರಿಕೆಯಾಗಿಲ್ಲ. ಆದಾಯದ ಮೊತ್ತ ಕಡಿಮೆಯಾಗುತ್ತಿದೆ. ಕುಟುಂಬಗಳ ಸಾಲದ ಹೊರೆ ಹೆಚ್ಚಾಗುತ್ತಿದೆ. ಆದರೆ ಜಿಡಿಪಿ ಬೆಳವಣಿಗೆ ಮಾತ್ರ ಏರುಮುಖದಲ್ಲಿದೆ. ಮತ್ತು ತೆರಿಗೆ ಪಾಲನ್ನು ಕೆರೆಯ ನೀರನು ಕೆರೆಗೆ ಚೆಲ್ಲಬೇಕಾದ ಮೋದಿ ಸರಕಾರ ತೆರಿಗೆ ಹೆಚ್ಚಳದಿಂದ ಬಂದ ಹಣವನ್ನು ರಾಜ್ಯಗಳಿಗೂ ಪಾವತಿಸುತ್ತಿಲ್ಲ. ಹಾಗಿದ್ದಲ್ಲಿ ಎಲ್ಲಿ ವಿನಿಯೋಗಿಸುತ್ತಿದೆ ಎನ್ನುವುದು ಇಂದಿಗೂ ಬಹಿರಂಗವಾಗಿಲ್ಲ. ಇಂತಹ ಮರೆಮೋಸ ಮೋದಿ ನೇತೃತ್ವ ಸರ್ಕಾರದಿಂದ ಮಾತ್ರ ಸಾಧ್ಯ.

ನಿಜವಾದ ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಉತ್ಪಾದನೆಯ ಹೆಚ್ಚಳವಲ್ಲ. ಅದರಲ್ಲಿ ಉಚಿತ, ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ, ಆರೋಗ್ಯ ಸೇವೆ ಮತ್ತು ಮೂಲಸೌಕರ್ಯಗಳ ಲಭ್ಯತೆಯೂ ಸೇರಿರಬೇಕು. ಸಾಮಾಜಿಕ ನ್ಯಾಯ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ಕ್ಷೇತ್ರಗಳಲ್ಲಿಯೇ ಭಾರತ ಇನ್ನೂ ಹಲವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಜಿಡಿಪಿ ಬೆಳವಣಿಗೆಯಿಂದ ಸಮಾಜ ಮತ್ತು ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ರೀತಿಯ ಬದಲಾವಣೆಗಳು ಮತ್ತು ಮಾನವೀಯ ಫಲಿತಾಂಶಗಳು ಉಂಟಾಗುತ್ತಿಲ್ಲ.

ಅಭಿವೃದ್ಧಿಯ ಲಾಭವು ಸಮಾಜದ ವಂಚಿತ ಸಮುದಾಯಗಳನ್ನು, ಕೆಳವರ್ಗವನ್ನು ತಲುಪುವಂತಹ ಸಮಗ್ರ ಮತ್ತು ಒಳಗೊಳ್ಳುವಿಕೆಯ ಅಭಿವೃದ್ಧಿಯ ಆಶಯಗಳನ್ನು ಹೊಂದಿದ ಸಮಾಜವಾದಿ ಆರ್ಥಿಕ ನೀತಿ ಸಾಧ್ಯವಾಗುವವರೆಗೆ ನಿಜವಾದ ಸಮೃದ್ಧ ಭಾರತದ ಕನಸು ಕೈಗೆಟುಕದ ಕನ್ನಡಿಯ ಗಂಟಾಗಿ ಉಳಿಯುತ್ತದೆ.

Tags: #RuralDevelopmentFreedomGDPGovernment of IndiaGross Domestic ProductMarginalized CommunitiesPratidhvaniShripad Bhat
Previous Post

ನಟಿ ರಮ್ಯಾ ಬಳಿ ಎಷ್ಟು ಕೋಟಿ ಆಸ್ತಿ? ವೈರಲ್ ಆಗುತ್ತಿರುವ ನೆಟ್‌ವರ್ತ್ ಲೆಕ್ಕದ ಅಸಲಿಯತ್ತೇನು?

Next Post

ವಾಲ್ಮೀಕಿ ನಿಗಮದ ಹಣ ಹಗರಣ: ನಾಗೇಂದ್ರ ವಿಚಾರಣೆ ಮತ್ತೆ ಆರಂಭಿಸಿದ ಇಡಿ

Related Posts

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು
Top Story

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು

by ಪ್ರತಿಧ್ವನಿ
September 16, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿತ...

Read moreDetails
ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

September 16, 2026
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

September 16, 2026
‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

September 15, 2026
100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

September 15, 2026
Next Post
ವಾಲ್ಮೀಕಿ ನಿಗಮದ ಹಣ ಹಗರಣ: ನಾಗೇಂದ್ರ ವಿಚಾರಣೆ ಮತ್ತೆ ಆರಂಭಿಸಿದ ಇಡಿ

ವಾಲ್ಮೀಕಿ ನಿಗಮದ ಹಣ ಹಗರಣ: ನಾಗೇಂದ್ರ ವಿಚಾರಣೆ ಮತ್ತೆ ಆರಂಭಿಸಿದ ಇಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada