• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಘೋಷಣೆ ಬೆಟ್ಟದಷ್ಟು, ಸಾಧನೆ ಶೂನ್ಯ! ಭರವಸೆ ಕಾಂಗ್ರೆಸ್‌ನದು, ಮೋಸ ಮಾತ್ರ ಬಡವರ ಪಾಲು!”

ಸಿಎಂ ಡಿಕೆ ಶಿವಕುಮಾರ್ ಅವರೇ, ಇದು ಕೇವಲ ಒಂದು ಯೋಜನೆ ರದ್ದಾಗಿರುವ ವಿಷಯವಲ್ಲ, ನಿಮ್ಮ ಸರ್ಕಾರದ ಆಡಳಿತ ವೈಫಲ್ಯ : ಅಶೋಕ್‌ ಕಿಡಿ..

ಪ್ರತಿಧ್ವನಿ by ಪ್ರತಿಧ್ವನಿ
July 3, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Indira Kit on R Ashok

Indira KittR Ashok

Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ಸರ್ಕಾರದ ಇಂದಿರಾ ಕಿಟ್‌ ಯೋಜನೆಯ ವಿಳಂಬದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಪಡೀತರ ಆಹಾರ ಧಾನ್ಯಗಳ ಬದಲಿಗೆ ಇಂದಿರಾ ಕಿಟ್‌ ನೀಡುವ ಮೂಲಕ ಅದರಲ್ಲಿಯೇ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಾರದಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT
PM & CM Removal After Jail? | 130th Amendment Bill : ಮಳೆಗಾಲದ ಅಧಿವೇಶನದಲ್ಲಿ ಮಸೂದೆ ಜಾರಿ ಸಾಧ್ಯತೆ #pmmodi

ಘೋಷಣೆಗಷ್ಟೇ ಸೀಮಿತವಾದ ‘ಇಂದಿರಾ ಕಿಟ್’,ಈ ದಿವಾಳಿ ಸರ್ಕಾರದಲ್ಲಿ ‘ಇಂದಿರಾ ಕಿಟ್’ಗೂ ಕಂಟಕವಾಗಿದೆ. ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಹುಪ್ರಚಾರಿತ ಭರವಸೆ ನೆಲಕಚ್ಚಿದೆ. ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒಳಗೊಂಡ ‘ಇಂದಿರಾ ಕಿಟ್’ ನೀಡುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಲಾಗಿತ್ತು. ಆದರೆ ಯೋಜನೆ ಜಾರಿಯಾಗುವ ಮೊದಲೇ ಕೈಬಿಡಲಾಗಿದೆ ಎಂಬ ವರದಿಗಳು ಸರ್ಕಾರದ ಅಸಮರ್ಥತೆ, ದಿವಾಳಿತನ ಮತ್ತು ಆಡಳಿತ ವೈಫಲ್ಯವನ್ನು ಬಯಲಿಗೆಳೆದಿವೆ ಎಂದು ಟೀಕಿಸಿದ್ದಾರೆ.

ಘೋಷಣೆ ಜೋರಾಗಿತ್ತು, ಅನುಷ್ಠಾನ ಮಾತ್ರ ಶೂನ್ಯ. ವರದಿಗಳ ಪ್ರಕಾರ, ಟೆಂಡರ್ ಪ್ರಕ್ರಿಯೆ ವಿವಾದ, ಆಡಳಿತಾತ್ಮಕ ಗೊಂದಲ ಮತ್ತು ಭಾರೀ ವಿಳಂಬದ ನಡುವೆ ಸಿಲುಕಿ, ಎಂಟು ತಿಂಗಳಾದರೂ ಅಂತಿಮಗೊಳ್ಳಲಿಲ್ಲ. ಈಗ ಇಡೀ ಯೋಜನೆಯನ್ನೇ ಕೈಬಿಟ್ಟಿರುವುದು, ನಾಡಿನ ಕೋಟ್ಯಂತರ ಬಡ ಕುಟುಂಬಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ರದ್ದಾಗಿದ್ದ ಭಾರತ-ಬಾಂಗ್ಲಾದೇಶ ಸರಣಿ ಮತ್ತೆ ಆಯೋಜನೆ? BCB ಅಧ್ಯಕ್ಷರಿಂದ ದೊಡ್ಡ ಮಾಹಿತಿ

ಟೆಂಡರ್ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಯಾರು ಹೊಣೆ? ಘೋಷಿಸಿದ ಯೋಜನೆಯನ್ನು ಜಾರಿಗೊಳಿಸುವ ಸಾಮರ್ಥ್ಯವೇ ಸರ್ಕಾರಕ್ಕೆ ಇರಲಿಲ್ಲವೇ? 1.25 ಕೋಟಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಮಾತು ಕೊಟ್ಟ ಸರ್ಕಾರ, ಈಗ ಆ ಮಾತಿನಿಂದ ಏಕೆ ಹಿಂದೆ ಸರಿಯಿತು? ಗ್ಯಾರಂಟಿಗಳ ಹೆಸರಿನಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ಬಡವರ ಹೊಟ್ಟೆಯ ಮೇಲೆಯೇ ತಣ್ಣೀರು ಬಟ್ಟೆ ಹಾಕುತ್ತಿದ್ದೀರಾ? ಸಿಎಂ ಡಿಕೆ ಶಿವಕುಮಾರ್ ಅವರೇ, ಇದು ಕೇವಲ ಒಂದು ಯೋಜನೆ ರದ್ದಾಗಿರುವ ವಿಷಯವಲ್ಲ. ಇದು ನಿಮ್ಮ ಸರ್ಕಾರದ ಆಡಳಿತ ವೈಫಲ್ಯ, ಆರ್ಥಿಕ ದಿವಾಳಿತನ ಮತ್ತು ಕೊಟ್ಟ ಮಾತಿಗೆ ಬೆಲೆ ಇಲ್ಲದ ವಚನ ಭ್ರಷ್ಟ, ವಿಶ್ವಾಸಘಾತುಕ ರಾಜಕಾರಣಕ್ಕೆ ಜೀವಂತ ಸಾಕ್ಷಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಮೂಲಕ ಅಶೋಕ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಮೊದಲು ಭರ್ಜರಿ ಘೋಷಣೆ… ನಂತರ ಕೋಟ್ಯಾಂತರ ರೂಪಾಯಿ ಪ್ರಚಾರ… ಕೊನೆಗೆ ಮೌನವಾಗಿ ಯೋಜನೆಗೆ ಕತ್ತರಿ. ಇದೇನಾ ನಿಮ್ಮ “ಕರ್ನಾಟಕ ಮಾದರಿ”? ಜನರ ವಿಶ್ವಾಸದೊಂದಿಗೆ ಆಟವಾಡಿ, ಬಡವರ ಹೆಸರಿನಲ್ಲಿ ರಾಜಕೀಯ ಮಾಡಿ, ಕೊನೆಗೆ ಅವರ ಪಾಲಿನ ಯೋಜನೆಗಳನ್ನೇ ಕೈಬಿಡುವ ಸರ್ಕಾರಕ್ಕೆ ಜನತಾ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಈ ಜನವಿರೋಧಿ, ವಿಶ್ವಾಸಘಾತುಕ ಆಡಳಿತಕ್ಕೆ ಮಟಪೆಟ್ಟಿಗೆ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ. ಘೋಷಣೆ ಬೆಟ್ಟದಷ್ಟು… ಸಾಧನೆ ಶೂನ್ಯ!
ಭರವಸೆ ಕಾಂಗ್ರೆಸ್‌ನದು… ಮೋಸ ಮಾತ್ರ ಬಡವರ ಪಾಲು! ಎಂದು ಅಶೋಕ್‌ ಲೇವಡಿ ಮಾಡಿದ್ದಾರೆ.

Tags: 5 Guarantee schemesAPL Ration Cardbjp karnatakabpl ration cardCM DK Shivakumarcongress karnatakaFood DepartmentGuarantee ScamIndira KitKarnataka GovernmentPratidhvaniR Ashok
Previous Post

ಕಾಂಗ್ರೆಸ್‌ನಲ್ಲಿ ರೇಟ್ ಫಿಕ್ಸ್ ಆಗಿದೆ..ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗ್ತಿಲ್ಲ: ವಿಜಯೇಂದ್ರ ವ್ಯಂಗ್ಯ

Next Post

ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

Related Posts

Rain Damage
Top Story

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

by ಪ್ರತಿಧ್ವನಿ
July 5, 2026
0

ಬೆಳಗಾವಿ : ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಒಂದೊಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈಗಾಗಲೇ ನಗರದ ವಿವಿಧ ಭಾಗಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದಲ್ಲದೆ, ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆಯೇ...

Read moreDetails
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

July 4, 2026
‘ಗ್ರಾಮಾಯಣ’ ಚಿತ್ರಕ್ಕೆ ಕಾನೂನು ಸಂಕಷ್ಟ: ಲಹರಿ ವೇಲು ಸ್ಪಷ್ಟನೆ ಇಲ್ಲಿದೆ

‘ಗ್ರಾಮಾಯಣ’ ಚಿತ್ರಕ್ಕೆ ಕಾನೂನು ಸಂಕಷ್ಟ: ಲಹರಿ ವೇಲು ಸ್ಪಷ್ಟನೆ ಇಲ್ಲಿದೆ

July 4, 2026
Next Post
ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

ಸುದೀಪ್‌ ಅವರೇ ಫಸ್ಟ್‌ & ಲಾಸ್ಟ್‌ ಚಾಯ್ಸ್! ಈಗ ಚಿತ್ರಕ್ಕೆ ಸುದೀಪ್‌ ಆಯ್ಕೆ ಯಾಕೆ? ರಾಜಮೌಳಿ ಬಿಚ್ಚಿಟ್ಟ ಸತ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada