• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಗ್ರಾಮಾಯಣ’ ಚಿತ್ರಕ್ಕೆ ಕಾನೂನು ಸಂಕಷ್ಟ: ಲಹರಿ ವೇಲು ಸ್ಪಷ್ಟನೆ ಇಲ್ಲಿದೆ

ಪ್ರತಿಧ್ವನಿ by ಪ್ರತಿಧ್ವನಿ
July 4, 2026
in Top Story
0
‘ಗ್ರಾಮಾಯಣ’ ಚಿತ್ರಕ್ಕೆ ಕಾನೂನು ಸಂಕಷ್ಟ: ಲಹರಿ ವೇಲು ಸ್ಪಷ್ಟನೆ ಇಲ್ಲಿದೆ
Share on WhatsAppShare on FacebookShare on Telegram

ಬಹುನಿರೀಕ್ಷಿತ ‘ಗ್ರಾಮಾಯಣ’ ಚಿತ್ರದ ಬಿಡುಗಡೆ ಬೆನ್ನಲ್ಲೇ ಚಿತ್ರ ಕಾನೂನು ವಿವಾದಕ್ಕೆ ಸಿಲುಕಿದೆ. ಚಿತ್ರದ ಮೊದಲ ನಿರ್ಮಾಪಕರಾದ ದಿವಂಗತ ಎನ್. ಲಕ್ಷ್ಮೀನರಸಿಂಹ ಮೂರ್ತಿ ಅವರ ಮಕ್ಕಳು ಚಿತ್ರದ ಹಕ್ಕು ವರ್ಗಾವಣೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ADVERTISEMENT

‘ಗ್ರಾಮಾಯಣ’ ಚಿತ್ರಕ್ಕೆ ಆರಂಭದಲ್ಲಿ ಎನ್. ಲಕ್ಷ್ಮೀನರಸಿಂಹ ಮೂರ್ತಿ ಮುಹೂರ್ತ ನೆರವೇರಿಸಿದ್ದರು. ಆದರೆ, ಬಳಿಕ ನಿರ್ಮಾಪಕ ಹಾಗೂ ನಿರ್ದೇಶಕ ದೇವನೂರು ಚಂದ್ರು ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಸಿನಿಮಾ ಸ್ಥಗಿತಗೊಂಡಿತ್ತು.

 

ಈ ನಡುವೆ ನಿರ್ಮಾಪಕ ಲಕ್ಷ್ಮೀನರಸಿಂಹ ಮೂರ್ತಿ ನಿಧನರಾದರು.ನಂತರ ಅವರ ಪತ್ನಿ ಲತಾ ಶ್ರೀ ಮೂರ್ತಿ ಅವರು ಚಿತ್ರದ ಎಲ್ಲಾ ಹಕ್ಕುಗಳನ್ನು ನಿರ್ದೇಶಕ ದೇವನೂರು ಚಂದ್ರು ಅವರಿಗೆ ಹಸ್ತಾಂತರಿಸಿದರು. ಬಳಿಕ ಲಹರಿ ಸಂಸ್ಥೆ ಚಿತ್ರವನ್ನು ತನ್ನ ವಶಕ್ಕೆ ಪಡೆದು ಮತ್ತೊಮ್ಮೆ ಮುಹೂರ್ತ ನೆರವೇರಿಸಿ ನಿರ್ಮಾಣ ಪೂರ್ಣಗೊಳಿಸಿತು. ಸುಮಾರು ಎರಡು ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದ ಬಳಿಕ ಚಿತ್ರ ಜುಲೈ 3ರಂದು ಬಿಡುಗಡೆಯಾಯಿತು.ಆದರೆ ಇದೀಗ, ಮೊದಲ ನಿರ್ಮಾಪಕರ ಮಕ್ಕಳಾದ 18 ವರ್ಷದ ಎಲ್. ಮನೋಹರ್ ಕೃಷ್ಣ ಹಾಗೂ 10 ವರ್ಷದ ಕುಮಾರಿ ಎಲ್. ಸಂಸ್ಕೃತಿ, ತಮ್ಮ ತಾಯಿ ತಮ್ಮ ಒಪ್ಪಿಗೆ ಪಡೆಯದೇ ಚಿತ್ರದ ಹಕ್ಕುಗಳನ್ನು ರಹಸ್ಯ ‘ಅಸೈನ್‌ಮೆಂಟ್ ಅಗ್ರಿಮೆಂಟ್’ ಮೂಲಕ ವರ್ಗಾಯಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಕ್ಕು ವರ್ಗಾವಣೆಯಿಂದ ತಮಗೆ ಸಿಗಬೇಕಿದ್ದ ಆರ್ಥಿಕ ಹಕ್ಕುಗಳಿಂದ ವಂಚಿತರಾಗಿದ್ದೇವೆ ಎಂದು ಅವರು ದೂರಿದ್ದಾರೆ.

 

 

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು, “ನಾವು ಚಿತ್ರದ ಹಕ್ಕುಗಳನ್ನು ಲತಾ ಶ್ರೀ ಮೂರ್ತಿ ಅವರಿಂದ ಸಂಪೂರ್ಣ ಕಾನೂನುಬದ್ಧವಾಗಿ ಪಡೆದುಕೊಂಡಿದ್ದೇವೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಒಪ್ಪಂದ ಮಾಡಿಕೊಂಡಿದ್ದೇವೆ. ಯಾವುದೇ ಕಾನೂನುಬಾಹಿರ ಕ್ರಮ ಕೈಗೊಂಡಿಲ್ಲ. ಇಲ್ಲಿಯವರೆಗೆ ನಮ್ಮ ವಿರುದ್ಧ ನ್ಯಾಯಾಲಯದಿಂದ ಯಾವುದೇ ನೋಟಿಸ್ ಬಂದಿಲ್ಲ. ಮುಂದಿನ ಎಲ್ಲಾ ವಿಚಾರಗಳನ್ನು ನಮ್ಮ ಕಾನೂನು ತಂಡ ನೋಡಿಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಈ ಕಾನೂನು ವಿವಾದ ಶುರುವಾಗಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದ್ದು, ನ್ಯಾಯಾಲಯದ ತೀರ್ಪಿನತ್ತ ಎಲ್ಲರ ಗಮನ ನೆಟ್ಟಿದೆ.

 

 

Tags: #CourtCase#DevanuruChandru#FilmUpdate#GraamaayanaMovie#kannadafilmindustry#KannadaNews#LahariVelu#LakshminarasimhaMurthy#LathaSreemurthy#LegalDispute#MovieControversy#MovieRights#sandalwoodbreakingnewsCinemaNewsEntertainmentNewsGraamaayanakannadacinemakannadamovie
Previous Post

SIR ತಂದಿಟ್ಟ ಗಂಡಾಂತರಕ್ಕೆ ಅಸುನೀಗಿದ ಗ್ರಾಮ ಲೆಕ್ಕಾಧಿಕಾರಿ : ಈ ಸಾವಿಗೆ ಹೊಣೆ ಯಾರು..?

Next Post

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

Related Posts

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!
Top Story

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

by ಪ್ರತಿಧ್ವನಿ
July 5, 2026
0

ಬೆಂಗಳೂರು: ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಂಡ 24 ಕೈದಿಗಳು ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜ್ಯದ ಗೃಹ ಸಚಿವ...

Read moreDetails
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

July 4, 2026
SIR issue

SIR ತಂದಿಟ್ಟ ಗಂಡಾಂತರಕ್ಕೆ ಅಸುನೀಗಿದ ಗ್ರಾಮ ಲೆಕ್ಕಾಧಿಕಾರಿ : ಈ ಸಾವಿಗೆ ಹೊಣೆ ಯಾರು..?

July 4, 2026
BREAKING NEWS : ಎರಡು BMTC ಬಸ್‌ಗಳ ನಡುವೆ ಭೀಕರ ಅಪಘಾತ : ಹಲವು ಪ್ರಯಾಣಿಕರಿಗೆ ಗಂಭೀರ ಗಾಯ..!

BREAKING NEWS : ಎರಡು BMTC ಬಸ್‌ಗಳ ನಡುವೆ ಭೀಕರ ಅಪಘಾತ : ಹಲವು ಪ್ರಯಾಣಿಕರಿಗೆ ಗಂಭೀರ ಗಾಯ..!

July 4, 2026
Next Post
ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

ಕೋಮಲ್‌ ಬರ್ತ್‌ ಡೇಗೆ ರೋಲೆಕ್ಸ್ ಗಿಫ್ಟ್‌!‌ ಗ್ಲಿಮ್ಸ್‌, ಪೋಸ್ಟರ್‌ ಹೊರಬಂತು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada