• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ?: ಗೃಹಜ್ಯೋತಿ ಪರಿಷ್ಕರಣೆಗೆ ಜೆಡಿಎಸ್ ಕಿಡಿ

ಪ್ರತಿಧ್ವನಿ by ಪ್ರತಿಧ್ವನಿ
July 1, 2026
in Top Story, ಕರ್ನಾಟಕ, ರಾಜಕೀಯ
0
ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ?: ಗೃಹಜ್ಯೋತಿ ಪರಿಷ್ಕರಣೆಗೆ ಜೆಡಿಎಸ್ ಕಿಡಿ
Share on WhatsAppShare on FacebookShare on Telegram

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮರು ಪರಿಶೀಲನೆಗಳಾಗುತ್ತಿದ್ದು, ಗೃಹ ಲಕ್ಷ್ಮಿ ಯೋಜನೆ ಬಳಿಕ ಇದೀಗ ಗೃಹ ಜ್ಯೋತಿ ಯೋಜನೆಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಇಂದಿನಿಂದ ಆರಂಭವಾಗಿದೆ.

ADVERTISEMENT
K. J. George : ಅನರ್ಹರಿಗೆ ಗ್ಯಾರಂಟಿ ಕಟ್ ಸಚಿವ ಜಾರ್ಜ್ ಏನಂದ್ರು..? #pratidhvani

 

ಸರ್ಕಾರಿ ಯೋಜನೆಗಳ ಮರು ಪರಿಶೀಲನೆಯನ್ನು ವಿರೋಧಿಸಿರುವ ಜೆಡಿಎಸ್ ಕಾಂಗ್ರೆಸ್‌ ದುರಾಡಳಿತದಲ್ಲಿ ಕನ್ನಡಿಗರಿಗೆ ದಿನವೂ ಸಂಕಟ ಎಂದು ಕಿಡಿಕಾರಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೆಡಿಎಸ್‌, ಎಲ್ಲರಿಗೂ ಫ್ರೀ, ಯಾವುದೇ ಷರತ್ತುಗಳಿಲ್ಲ ಎಂದು ಭಾಷಣ ಬಿಗಿದು, ಜನರ ಕಿವಿಗೆ ಹೂವಿಟ್ಟು ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರ, ಈಗ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದೆ. ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಈಗ ಜನಸಾಮಾನ್ಯರನ್ನು ‘ಗೃಹಜ್ಯೋತಿ’ ಯೋಜನೆಯಿಂದ ಹೊರಹಾಕಲು ಕುತಂತ್ರ ಹೆಣೆದಿದೆ ಎಂದು ಆರೋಪಿಸಿದೆ.

ಗೃಹಜ್ಯೋತಿ ಯೋಜನೆಯ ಪುನರ್‌ ಪರಿಶೀಲನೆಯ ವೇಳೆ ಫಲಾನುಭವಿಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಬಾಡಿಗೆ ಒಪ್ಪಂದ ಪತ್ರವನ್ನು ತೋರಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಅಸಮಧಾನ ಹೊರಹಾಕಿರುವ ಜೆಡಿಎಸ್‌, ಮನೆ-ಮನೆ ಪರಿಶೀಲನೆ ನೆಪದಲ್ಲಿ ಎಸ್ಕಾಂ ಅಧಿಕಾರಿಗಳನ್ನು ಬಿಟ್ಟು, ಜನಸಾಮಾನ್ಯರನ್ನು ದಾಖಲೆಗಳ ಹೆಸರಿನಲ್ಲಿ ಬೆದರಿಸುವ ಕೆಲಸ ಶುರುವಾಗಿದೆ. ಕಾಂಗ್ರೆಸ್‌ ಅವರೇ, ರಾಜ್ಯದ ಜನತೆಗೆ ಉತ್ತರಿಸಿ
ಉಚಿತ ವಿದ್ಯುತ್ ಪಡೆಯಲು ಪಾನ್ ಕಾರ್ಡ್ (PAN Card) ಯಾಕೆ ಬೇಕು? ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ? ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಆಧಾರ್ ಕಾರ್ಡ್‌ ಅಥವಾ ವೋಟರ್ ಐಡಿ ಸಾಲದೇ? ಎಂದು ಪ್ರಶ್ನಿಸಿದೆ.

BK Hariprasad Controversial Speech: ಪ್ರಧಾನಿ ವಿರುದ್ಧ ಹರಿಪ್ರಸಾದ್ ವಿವಾದಿತ ಹೇಳಿಕೆ ವೈರಲ್!  #pratidhvani

ನಿಮ್ಮ ಉದ್ದೇಶ ಸ್ಪಷ್ಟವಾಗಿದೆ. ಕಳ್ಳ ಮಾರ್ಗದಲ್ಲಿ ಷರತ್ತುಗಳನ್ನು ವಿಧಿಸಿ, ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನಾಮ ಹಾಕುವುದು. ಬಡವರು, ರೈತರು ಮತ್ತು ಮಧ್ಯಮ ವರ್ಗದವರನ್ನು ದಿನಕ್ಕೊಂದು ದಾಖಲೆ ಕೇಳಿ ಕಚೇರಿಗಳಿಗೆ ಅಲೆದಾಡಿಸಿ, ಸತಾಯಿಸಿ, ಸೌಲಭ್ಯಗಳಿಂದ ವಂಚಿಸುವುದೇ ನಿಮ್ಮ ಸಾಧನೆಯೇ? ಕಾಂಗ್ರೆಸ್‌ ದುರಾಡಳಿತದಲ್ಲಿ ಕನ್ನಡಿಗರಿಗೆ ದಿನವೂ ಸಂಕಟ ಎಂದು ಜೆಡಿಎಸ್‌ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದೆ.

Previous Post

ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್

Next Post

BJPಗೆ ಪ್ರಶ್ನೆ = ದೇಶದ್ರೋಹಿ? : ರೈತರ ನಂತರ CJP ಕೂಡ ತುಕ್ಡೆ ತುಕ್ಡೆ ಗ್ಯಾಂಗ್? ಹತಾಶರಾದ ಕೇಸರಿ ನಾಯಕರು..!

Related Posts

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು
Top Story

ಆರ್‌ಎಸ್‌ಎಸ್‌ ನೋಂದಣಿ ವಿವಾದದ ಬಗ್ಗೆ ಸಂಘದ ಹೊಸ ನಿಲುವು

by ಪ್ರತಿಧ್ವನಿ
July 2, 2026
0

ಬೆಂಗಳೂರು: ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನೋಂದಣಿ ವಿಚಾರದ ಸುತ್ತ ರಾಜಕೀಯ ವಾಗ್ವಾದ ತೀವ್ರಗೊಂಡಿರುವ ಬೆನ್ನಲ್ಲೇ, ಸಂಘದ ಉನ್ನತ ಮಟ್ಟದ ಸಭೆಯಲ್ಲಿ (ಬೈಠಕ್) ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ...

Read moreDetails
ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

July 2, 2026
ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

July 2, 2026
ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

July 2, 2026
Na Divakar Article

ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ  ಸ್ವ-ಪ್ರಜ್ಞೆ

July 2, 2026
Next Post
BJP VS CJP

BJPಗೆ ಪ್ರಶ್ನೆ = ದೇಶದ್ರೋಹಿ? : ರೈತರ ನಂತರ CJP ಕೂಡ ತುಕ್ಡೆ ತುಕ್ಡೆ ಗ್ಯಾಂಗ್? ಹತಾಶರಾದ ಕೇಸರಿ ನಾಯಕರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada