• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಹ್ಲಾದ್‌ ಜೋಶಿಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಿಲ್ಲ: ಬಿ.ಕೆ ಹರಿಪ್ರಸಾದ್‌

ಪ್ರತಿಧ್ವನಿ by ಪ್ರತಿಧ್ವನಿ
June 27, 2026
in Top Story, ಕರ್ನಾಟಕ, ರಾಜಕೀಯ
0
ಪ್ರಹ್ಲಾದ್‌ ಜೋಶಿಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಿಲ್ಲ: ಬಿ.ಕೆ ಹರಿಪ್ರಸಾದ್‌
Share on WhatsAppShare on FacebookShare on Telegram

ಬೆಂಗಳೂರು: ಬಿ.ಕೆ ಹರಿಪ್ರಸಾದ್‌ಗೆ ಸಾಮಾನ್ಯ ಜ್ಞಾನ ಇಲ್ಲ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌ ತಿರುಗೇಟು ನೀಡಿದ್ದು, “ಭಾಷಾ ಪ್ರಖಂಡ ಪಂಡಿತ”, “ಜ್ಞಾನ ಭಂಡಾರದ ಶಿಖರ”, “ಸಾರ್ವಜನಿಕ ಜೀವನದ ಸಾಕಾರಮೂರ್ತಿಯೇ” ಆಗಿರುವ ಪ್ರಹ್ಲಾದ್‌ ಜೋಶಿಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಂತೂ ಬಂದಿಲ್ಲ, ಬರುವುದೂ ಇಲ್ಲ ಎಂದು ಕಿಡಿಕಾರಿದ್ದಾರೆ.

ADVERTISEMENT
Bidadi Town Ship Protest : ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮಹಿಳೆಯರು ಆಕೋಶ..! #dkshivakumar

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಯಡಿಯೂರಪ್ಪನವರು ಪಕ್ಷ ತೊರೆದು, ಹೊಸ ಪಕ್ಷ ಕಟ್ಟಿದಾಗ ಇದೇ ಜೋಶಿ, ಸಾರ್ವಜನಿಕವಾಗಿ ಆಡಿರುವ ಮಾತುಗಳು ಒಂದೊಂದು ಆಣಿಮುತ್ತುಗಳು ಎಂಬುದನ್ನು ಮರೆತಿದ್ದಾರೆ. ಯಾರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಿರೋ, ಇಂದು ಅವರೇ ನಿಮ್ಮ ರಾಜಕೀಯದ ಪರಮ ಪೂಜ್ಯರು. ಹಿಂದೆ ಯಾರನ್ನು ರಾಜಕೀಯವಾಗಿ ನೆಲಸಮ ಮಾಡಿದ್ದೀರೋ, ಇಂದು ಅವರ ಪಾದಪೂಜೆ ಮಾಡುತ್ತಿರುವುದು ನಿಮ್ಮ ಸಾಮಾನ್ಯ ಜ್ಞಾನದ ಪರಮಾವಧಿಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆಗಳ ಪ್ರಹಾರ ಮುಂದುವರಿಸಿರುವ ಅವರು, ಅಯೋಧ್ಯೆ ಶ್ರೀರಾಮನ ಹೆಸರಿನಲ್ಲಿ ನಿರ್ಮಾಣವಾದ ದೇವಸ್ಥಾನದ ಕಾಮಗಾರಿ ವೆಚ್ಚ ಹಾಗೂ ನಿರ್ವಹಣೆಯಲ್ಲಿ ನಡೆದಿರುವ ಕೋಟ್ಯಾಂತರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಜೆಪಿ ನಾಯಕರಿಗೆ ಯೋಗ್ಯತೆ ಇದೆಯೇ? “ನಾ ಖಾವೂಂಗಾ,ನಾ ಖಾನೇ ದೂಂಗಾ” ಎಂದು ಬೊಬ್ಬೆ ಹೊಡೆದಿದ್ದವರು ಈಗ ಬಾಯ್ತೆರೆದು ಮಾತಾಡುವುದು ಬಿಡಿ, ಮುಖ ಕೂಡ ತೋರಿಸುತ್ತಿಲ್ಲ ಯಾಕೆ? ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ?

Bidadi Town Ship Protest : ಬೈರಮಂಗಲದಲ್ಲಿ ಕುಮಾರಸ್ವಾಮಿ ವಿರುದ್ದ ರೈತರು ಪ್ರತಿಭಟನೆ..! #hdkumaraswamy

ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು ಮತಗಳನ್ನು ಕೇಳಿ ಪಡೆದವರು, ಅದೇ ಶ್ರೀರಾಮನಿಗೆ ಜನ ಸಾಮಾನ್ಯರು ನೀಡಿದ ದೇಣಿಗೆಯ ಒಂದೊಂದು ರೂಪಾಯಿಯ ಲೆಕ್ಕ‌ಕೊಡಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲವೇ? ಸಾರ್ವಜನಿಕ ಪ್ರಶ್ನಗಳಿಗೆ ಉತ್ತರ ಕೊಡದೆ ಇರುವುದು ಸಾರ್ವಜನಿಕ ಭಾಷಾ ಪಂಡಿತರ ಸಾಮಾನ್ಯ ಜ್ಞಾನದ ಪರಿಮಿತಿಗೆ ಬರುವುದಿಲ್ಲವೇ?” ರಾಮನ ಹೆಸರನ್ನು ರಾಜಕೀಯಕ್ಕೆ ಬಳಸಬಹುದು, ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್‌ ಗುಡುಗಿದ್ದಾರೆ.

Previous Post

ರಾಜ್ಯದ ಆರೋಗ್ಯ ಇಲಾಖೆಯೇ ಐಸಿಯುನಲ್ಲಿದೆ-ಆರ್‌.ಅಶೋಕ್‌ ವ್ಯಂಗ್ಯ

Next Post

ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?

Related Posts

ನಮಗೆ ದುಃಖಿಸಲು ಬಿಡಿ: ಕೈ ಮುಗಿದು ಕೇಳಿಕೊಂಡ ನಟಿ ಕೃಷಿ ತಾಪಂಡ
Top Story

ನಮಗೆ ದುಃಖಿಸಲು ಬಿಡಿ: ಕೈ ಮುಗಿದು ಕೇಳಿಕೊಂಡ ನಟಿ ಕೃಷಿ ತಾಪಂಡ

by ಪ್ರತಿಧ್ವನಿ
June 29, 2026
0

ಕನ್ನಡ ಚಿತ್ರರಂಗದ ನಟಿ ಕೃಷಿ ತಾಪಂಡ ಅವರ ಆಪ್ತ ಗೆಳೆಯ ವೈಶಾಕ್ ಇತ್ತೀಚೆಗೆ ನಟಿಯ ಮನೆಯಲ್ಲೇ ಸಾವಿಗೆ ಶರಣಾಗಿದ್ದರು. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಕೃಷಿ ಘಟನೆ ನಡೆದ...

Read moreDetails
ಅಂತ್ಯ ಕಿರುಚಿತ್ರದ ಪೋಸ್ಟರ್‌ ತಂದಿಟ್ಟ ಸಂಕಟ : ಮೂವರು ಯುವಕರ ದಾರುಣ ಅಂತ್ಯ..!

ಅಂತ್ಯ ಕಿರುಚಿತ್ರದ ಪೋಸ್ಟರ್‌ ತಂದಿಟ್ಟ ಸಂಕಟ : ಮೂವರು ಯುವಕರ ದಾರುಣ ಅಂತ್ಯ..!

June 29, 2026
RSS ವಿರುದ್ಧ ಹೇಳಿಕೆ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ನ್ಯಾಯಾಲಯ ಸಮನ್ಸ್

RSS ವಿರುದ್ಧ ಹೇಳಿಕೆ ಪ್ರಕರಣ: ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ನ್ಯಾಯಾಲಯ ಸಮನ್ಸ್

June 29, 2026
ಅರಾಜಕ ಸಮಾಜದ ಅನಾಗರಿಕ  ಮನಸ್ಥಿತಿಗಳು

ಅರಾಜಕ ಸಮಾಜದ ಅನಾಗರಿಕ ಮನಸ್ಥಿತಿಗಳು

June 29, 2026
ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

ಮಾದಕದ್ರವ್ಯ ವಿರುದ್ಧ ಸರ್ಕಾರದ ಕಠಿಣ ನಿಲುವು: ಪಾನ್ ಮಸಾಲಾ, ಗುಟ್ಕಾ ಮಾರಾಟಕ್ಕೆ ಬ್ರೇಕ್?

June 28, 2026
Next Post
ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?

ಬೇರೆ ವಿಚಾರಗಳಲ್ಲಿ ನಿರರ್ಗಳತೆ..ರಾಮಮಂದಿರ ದೇಣಿಗೆ ಕೇಸ್‌ನಲ್ಲಿ ಮೋದಿ ಮೌನ ಯಾಕೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada