• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಕಾಗದದಲ್ಲಿ ಮಾತ್ರ ಗೊಬ್ಬರ ತೋರಿಸುವ ಈ ಮೋಸದ ಆಡಳಿತವನ್ನು ಕರ್ನಾಟಕದ ರೈತರು ಎಂದಿಗೂ ಕ್ಷಮಿಸುವುದಿಲ್ಲ”

ನಿಮ್ಮ ಸಂಪುಟದಲ್ಲಿ ಕೃಷಿ ಸಚಿವರು ಯಾಕಿಲ್ಲ? ಯಾವಾಗ ನೇಮಕವಾಗುತ್ತಾರೆ? : ಸರ್ಕಾರದ ವಿರುದ್ಧ ಆರ್‌ ಅಶೋಕ್‌ ವಾಗ್ದಾಳಿ..!

ಪ್ರತಿಧ್ವನಿ by ಪ್ರತಿಧ್ವನಿ
June 13, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
“ಕಾಗದದಲ್ಲಿ ಮಾತ್ರ ಗೊಬ್ಬರ ತೋರಿಸುವ ಈ ಮೋಸದ ಆಡಳಿತವನ್ನು ಕರ್ನಾಟಕದ ರೈತರು ಎಂದಿಗೂ ಕ್ಷಮಿಸುವುದಿಲ್ಲ”

R Ashoka Lashes Out CM DKS

Share on WhatsAppShare on FacebookShare on Telegram

ಬೆಂಗಳೂರು : ಕಾಗದದಲ್ಲಿ 10.65 ಲಕ್ಷ ಟನ್ ಗೊಬ್ಬರ, ರೈತರ ಕೈಯಲ್ಲಿ ಖಾಲಿ ಚೀಲ, ಇದು ಡಿಕೆ ಶಿವಕುಮಾರ್ ಸರ್ಕಾರದ ಕೃಷಿ ನೀತಿ! ಮುಂಗಾರು ಆರಂಭವಾಗಿದೆ. ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯದಿಂದ ರಾಜ್ಯದ ಅನ್ನದಾತ ಇಂದು ರಸಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೃಷಿ ಸಚಿವರಂತೂ ಇಲ್ಲವೇ ಇಲ್ಲ, ರೈತರು ಗೋಳಾಡುತ್ತಿದ್ದಾರೆ  ಎಂದು ವಿಪಕ್ಷ ನಾಯಕ‌ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ADVERTISEMENT
Santhosh Lad : ಲಾಡ್ ಕಾರ್ಮಿಕ ಇಲಾಖೆಗೆ ಕಾಯಕಲ್ಪ ನೀಡಿರುವ ಭರವಸೆಯ ನಾಯಕ..! #pratidhvani

ಸಹಕಾರ ಸಂಘಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ, ಗೊಬ್ಬರಕ್ಕಾಗಿ ಹಗಲು-ರಾತ್ರಿ ಅಲೆದಾಡುತ್ತಿದ್ದಾರೆ. ಆದರೆ ಕೃಷಿ ಸಚಿವರು ಮತ್ತು ಕಾಂಗ್ರೆಸ್ ಸರ್ಕಾರ ಮಾತ್ರ ಖಾತೆ ಹಂಚಿಕೆ ಗಲಾಟೆಯಲ್ಲಿ ಮಗ್ನವಾಗಿದೆ. ಅತ್ಯಂತ ದೊಡ್ಡ ವಿಪರ್ಯಾಸ ಏನು ಗೊತ್ತೇ? ಕೃಷಿ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 10.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆಯಂತೆ ಎಂದು ಕುಟುಕಿದ್ದಾರೆ.

ಹಾಗಾದರೆ ನಮ್ಮ ಪ್ರಶ್ನೆ ಇಷ್ಟೇ…  ಕೊಪ್ಪಳದಲ್ಲಿ ಗೊಬ್ಬರ ಎಲ್ಲಿದೆ?  ಗದಗದಲ್ಲಿ ಗೊಬ್ಬರ ಎಲ್ಲಿದೆ?  ಹಾವೇರಿಯಲ್ಲಿ ಗೊಬ್ಬರ ಎಲ್ಲಿದೆ?  ಕಲಬುರಗಿಯಲ್ಲಿ ಗೊಬ್ಬರ ಎಲ್ಲಿದೆ? ಯಾದಗಿರಿಯಲ್ಲಿ ಗೊಬ್ಬರ ಎಲ್ಲಿದೆ?  ಬಳ್ಳಾರಿಯಲ್ಲಿ ಗೊಬ್ಬರ ಎಲ್ಲಿದೆ? ಕಾಗದದಲ್ಲಿ ದಾಸ್ತಾನು ಇದ್ದರೆ ಸಾಲದು, ಅದು ರೈತನ ಕೈಗೆ ತಲುಪಬೇಕು.  ಎಕರೆಗೆ ಕೇವಲ ಒಂದು ಚೀಲ ಮಾತ್ರ ಕೊಟ್ಟು ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Karnataka Rain: ರಾಜ್ಯದಲ್ಲಿ ಮುಂದಿನ 3 ದಿನ ಭರ್ಜರಿ ಮಳೆ

ಗಂಟೆಗಟ್ಟಲೆ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ “ದಾಸ್ತಾನು ಇಲ್ಲ” ಎಂಬ ಫಲಕ ತೂಗಾಡುತ್ತಿದೆ, ಇದೇನಾ ಕಾಂಗ್ರೆಸ್ ಸರ್ಕಾರದ ರೈತಪರ ಆಡಳಿತ? ಗ್ಯಾರಂಟಿಗಳ ಪ್ರಚಾರಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವ, ಸರ್ಕಾರಕ್ಕೆ, ರೈತನಿಗೆ ಸಮಯಕ್ಕೆ ಗೊಬ್ಬರ ತಲುಪಿಸುವ ಕನಿಷ್ಠ ಸಾಮರ್ಥ್ಯವೂ ಇಲ್ಲವೇ? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಬಳಿ ಉತ್ತರ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

10.65 ಲಕ್ಷ ಟನ್ ಗೊಬ್ಬರ ನಿಜವಾಗಿಯೂ ಎಲ್ಲಿದೆ? ಯಾರ ನಿರ್ಲಕ್ಷ್ಯದಿಂದ ರೈತರು ಪರದಾಡುತ್ತಿದ್ದಾರೆ? ನಿಮ್ಮ ಸಂಪುಟದಲ್ಲಿ ಕೃಷಿ ಸಚಿವರು ಯಾಕಿಲ್ಲ? ಯಾವಾಗ ನೇಮಕವಾಗುತ್ತಾರೆ? ಅನ್ನದಾತನನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಕಾಗದದಲ್ಲಿ ಮಾತ್ರ ಗೊಬ್ಬರ ತೋರಿಸುವ ಈ ಮೋಸದ ಆಡಳಿತವನ್ನು ಕರ್ನಾಟಕದ ರೈತರು ಎಂದಿಗೂ ಕ್ಷಮಿಸುವುದಿಲ್ಲ. ರೈತರ ಶಾಪ ತಟ್ಟಿದ ಸರ್ಕಾರ ಯಾವತ್ತೂ ಉಳಿದಿಲ್ಲ, ಈ ಕಾಂಗ್ರೆಸ್ ಸರ್ಕಾರವೂ ಇದಕ್ಕೆ ಹೊರತಲ್ಲ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Tags: Agriculture MinisterBidadi Townshipbjp karnatakaCabinet ExpanssionCM DK ShivakumarCongress Governmentfertilizerformers problemsKaarnataka PoliticsKarnataka GovernmentPratidhvaniR ashoka
Previous Post

ಕರ್ನಾಟಕ ರಾಜ್ಯ ಪೊಲೀಸ್‌ಗೆ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ: ಗೃಹ ಸಚಿವರಿಗೆ ಸಿಎಂ ಡಿ.ಕೆ ಶಿವಕುಮಾರ್ ಮನವಿ

Next Post

ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್: ಪ್ರದೀಪ್ ಈಶ್ವರ್ ಕಿಡಿ

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್: ಪ್ರದೀಪ್ ಈಶ್ವರ್ ಕಿಡಿ

ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್: ಪ್ರದೀಪ್ ಈಶ್ವರ್ ಕಿಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada