ಬೆಂಗಳೂರು : ನನ್ನ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮಿಬ್ಬರ ನಡುವಿನ ಸಂಬಂಧ ಕುರಿತ ಚರ್ಚೆ ಅನಗತ್ಯ. ಇಬ್ಬರ ಸಂಬಂಧ ಹಾಳಾಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಿದ್ದರಾಮಯ್ಯ ಜೊತೆ ಭಿನ್ನಮತ ವಿಚಾರ ಬಗ್ಗೆ ಮಾಧ್ಯಮ ಜೊತೆ ಮಾತನಾಡಿದ ಅವರು, “ನಾನು ಮೊದಲಿನಿಂದಲೂ ಹೇಳಿದ್ದೇನೆ. ನಮ್ಮ ನಡುವೆ ಗೊಂದಲವಿಲ್ಲ. ಕೆಲವು ಐಟಿ ಸೆಲ್ನವರು ಹೆಚ್ಚಿನ ಪ್ರಚಾರ ಮಾಡಿದರು. ನಮಗೆ ಗೊತ್ತಿರುವ ಐಟಿ ಸೆಲ್ನವರೇ ಹೆಚ್ಚಿನ ಪ್ರಚಾರ ಕೊಟ್ಟರು. ಅನವಶ್ಯಕ ಚರ್ಚೆ ಅದು. ಅದರ ಬಗ್ಗೆ ಅಹಿಂದ ಸಂಘಟನೆ ಇದ್ದೇ ಇರುತ್ತದೆ. ಪಕ್ಷವನ್ನು ಹೊರತುಪಡಿಸಿಯೂ ಸಂಘಟನೆ ಕೆಲಸ ಇದ್ದೇ ಇರುತ್ತದೆ. ಅಹಿಂದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಮಹಾ ರಾಜಕೀಯದಲ್ಲಿ “ಆಪರೇಷನ್ ಟೈಗರ್” ಸಂಚಲನ : ಠಾಕ್ರೆಗೆ ಕೈ ಕೊಟ್ಟು “ಶಿಂಧೆಯ” ಬಾಣ ಹೂಡ್ತಾರಾ ಸಂಸದರು..?
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಅಧ್ಯಕ್ಷ ಆಗಿಯೇ ಪಕ್ಷದ ಕೆಲಸ ಮಾಡಬೇಕು ಅಂತೇನೂ ನಿಯಮವಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದ ಬಳಿಕ ಇದುವರೆಗೆ ಒಂದು ಸರ್ಕಾರ ರಿಪೀಟ್ ಆಗಿಲ್ಲ. ದುಡಿದರೆ ಕೂಲಿ ಸಿಕ್ಕಿಯೇ ಸಿಗುತ್ತದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕೆಲಸ ಮಾಡಿದ್ದೇವೆ ಅಂತ ಅವರಿಗೆ ಅಧಿಕಾರ ಕೊಟ್ಟರು. ಯಾರು ಪಕ್ಷಕ್ಕೆ ದುಡಿಯುತ್ತಾರೆ ಅವರಿಗೆ ಅಧಿಕಾರ ಸಿಗಲೇಬೇಕು. 2028ರ ಬಗ್ಗೆ ಈಗಲೇ ಚರ್ಚೆ ಯಾಕೆ? ಇನ್ನೂ ಮಗುನೇ ಹುಟ್ಟಿಲ್ಲ ಚರ್ಚೆ ಯಾಕೆ? ನನಗೂ ಕೂಲಿ ಸಿಕ್ಕಿದೆ, ಮಂತ್ರಿ ಮಾಡಿದ್ದಾರೆ. ನನಗೆ ಡಬಲ್ ಸಮಾಧಾನ ಆಗಿದೆ. ಕೆಲಸ ಮಾಡುವವರಿಗೆ ಹುದ್ದೆ ಅವಶ್ಯಕತೆ ಇಲ್ಲ. ಹಿಂದಿನ ಚುನಾವಣೆ, ಮೊದಲಿನ ಚುನಾವಣೆ ಎಲ್ಲಾ ಸಂದರ್ಭದಲ್ಲಿ ಕೂಡ ನಾನು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ನಾನು ಹೆಚ್ಚುವರಿಯಾಗಿ ಕ್ರೀಡಾ ಖಾತೆ ಕೇಳಿದ್ದೆ. ಬಹುಶಃ ಪರಮೇಶ್ವರ್ ಕೇಳಿ ತೆಗೆದುಕೊಂಡಿರಬಹುದು. ನನಗೆ ಕ್ರೀಡಾ ಖಾತೆ ಇಷ್ಟ ಇತ್ತು. ನಾನು ಪ್ರತಿ ವರ್ಷ 50 ಲಕ್ಷ ಖರ್ಚು ಮಾಡಿ ಕ್ರೀಡೆ ನಡೆಸುತ್ತೇನೆ. ಹಾಗಾಗಿ ಸ್ಪೋರ್ಟ್ಸ್ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆವು. ಹಿಂದೆಯೂ ಕ್ರೀಡಾ ಖಾತೆ ಕೇಳಿದ್ದೆವು, ಧರ್ಮಸಿಂಗ್ ಅವಧಿಯಲ್ಲಿ ಕೇಳಿದ್ದೆವು. ಈಗ ಪರಮೇಶ್ವರ್ ಅವರಿಗೆ ಕೊಟ್ಟಿದ್ದಾರೆ. ಅವರಿಗೆ ಕ್ರೀಡೆ ಬಗ್ಗೆ ಒಲವಿದೆ, ಅದಕ್ಕೆ ಕೇಳಿ ಪಡೆದಿರಬಹುದು ಎಂದರು.






