ಬೆಂಗಳೂರು : ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿರುವ ನೂತನ ಕಾಕ್ರೋಚ್ ಜನತಾ ಪಕ್ಷ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದೆ. ಈಗಾಗಲೇ ಐತಿಹಾಸಿಕವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಸಿತ್ತು.

ಅಲ್ಲದೆ ಪ್ರಮುಖವಾಗಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇದೇ ಆತಂಕದಲ್ಲಿ ದೇಶದಲ್ಲಿ ಆಕಾಂಕ್ಷಿಗಳ ಆತ್ಮಹತ್ಯೆ ಸರಣೆ ಮುಂದುವರೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಕ್ರೋಚ್ ಜನತಾ ಪಕ್ಷ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಈ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಲಿದೆ.
ಹೋರಾಟದ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಸಿಜೆಪಿಯು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದೆ. ಜೂನ್ 11 ರಂದು ಮಹಾರಾಷ್ಟ್ರದ ಪುಣೆಯಿಂದ ಆರಂಭವಾಗುವ ಹೋರಾಟವು ಜೂನ್ 20 ರಂದು ದೆಹಲಿಯಲ್ಲಿ ಬೃಹತ್ ಪ್ರಮಾಣದಲ್ಲಿ ನಡೆಯಲಿದೆ. ಶಾಂತಿಯುತವಾಗಿ ನಡೆಯುವ ಈ ಪ್ರತಿಭಟನೆಯು ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಜೊತೆಗೆ ನೀಟ್ ಮರು ಪರೀಕ್ಷೆಯ ಬಗ್ಗೆ ವಿಶ್ವಾಸಾರ್ಹತೆಯನ್ನು ಪಶ್ನಿಸುತ್ತಿದೆ.
ಇದನ್ನೂ ಓದಿ : ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಪ್ರಮುಖವಾಗಿ ನಾಳೆಯಿಂದ ಪಂಜಾಬ್‌ನ ಅಮೃತಸರ, ಬೆಂಗಳೂರು, ಲಖ್ನೋ, ಜೈಪುರ, ಹೈದ್ರಾಬಾದ್ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಯುವಕರ ಕೇಂದ್ರದ ವಿರುದ್ಧ ಬೀದಿಗಿಳಿಯಲಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಒಂದು ಸಮಸ್ಯೆಯಲ್ಲ, ಇದು ದೇಶದ ಲಕ್ಷಾಂತರ ಕುಟುಂಬಗಳು ಹಾಗೂ ಯುವಸಮೂಹದ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೆ ಯುವಕರ ಭವಿಷ್ಯ ಕೂಡ ಸಂಕಷ್ಟಕ್ಕೆ ಸಿಲುಕಿದೆ. ವೈದ್ಯರಾಗುವವರ ಕನಸಗಳು ಅನಿಶ್ಚಿತತೆಯಿಂದ ಕೂಡಿದ್ದು, ಇದಕ್ಕೆ ಕೇಂದ್ರವೆ ಹೊಣೆ ಎಂದು ಕಾಕ್ರೋಚ್ ಜನತಾ ಪಕ್ಷ ಕಿಡಿಕಾರಿದೆ.

ಧರ್ಮೇಂದ್ರ ಪ್ರಧಾನ್ ಈ ಹಗರಣದ ಹೊಣೆ ಹೊರದಿದ್ದರೆ ಇನ್ನಷ್ಟು ಅಕ್ರಮಗಳು ಹೀಗೆ ಮುಂದುವರೆಯುವ ಆತಂಕವೂ ಇದೆ. ಮುಂಬರುವ ಪರೀಕ್ಷೆಗಳ ಬಗ್ಗೆ ವಿಶ್ವಾಸ್ವಾರ್ಹತೆ ಹೇಗೆ ಮೂಡಲು ಸಾಧ್ಯ? ಇದು ಗಂಭೀರವಾದ ವಿಚಾರವಾಗಿದೆ ಎಂದು ಸಿಜೆಪಿ ಕಳವಳ ವ್ಯಕ್ತಪಡಿಸಿದೆ.
ಈ ಇಡೀ ಹೋರಾಟ ದೇಶದ ಶಿಕ್ಷಣ ವ್ಯವಸ್ಥೆಯ ಸಮಗ್ರತೆ ಹಾಗೂ ನಂಬಿಕೆಯ ಮೇಲೆ ಹಲವು ಗುರುತರ ಪ್ರಶ್ನೆಗಳಿಗೆ ಉತ್ತರವಾಗಲಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳಿಗೆ ವಿದ್ಯಾರ್ಥಿಗಳೇಕೆ ಬೆಲೆ ತೆರಬೇಕು, ಜವಾಬ್ದಾರಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದವರು ರಾಜೀನಾಮೆ ನೀಡುವುದು ಸೂಕ್ತ ಎಂದು ಸಿಜೆಪಿ ಒತ್ತಾಯಿಸಿದೆ. ಶಿಕ್ಷಕರು, ಯುವಕರು, ವಿದ್ಯಾರ್ಥಿಗಳು ಈ ಹೋರಾಟದಲ್ಲಿ ಭಾಗವಹಿಸುವಂತೆ ಪಕ್ಷ ಕರೆ ನೀಡಿದೆದ.
ಇನ್ನೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದಿದ್ದರೆ ಜೂನ್ 20 ರಿಂದ ಹೋರಾಟ ಚಳುವಳಿಯಾಗಿ ಪರಿಣಮಿಸಲಿದೆ ಎಂದು ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.






