ಬೆಂಗಳೂರು : ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಳೆದ ಮೇ 15ರಿಂದ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿರುವ ಯುವಕರ ಕೇಂದ್ರಿತವಾಗಿರುವ ಈ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಿಗೆ ನಿರ್ಬಂಧವಿಸುವ ಯತ್ನಗಳು ನಡೆಯುತ್ತಿವೆ.

ಪ್ರಮುಖವಾಗಿ 22 ಮಿಲಿಯನ್ ಇರುವ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗುತ್ತಿದೆ ಎಂದು ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ನಾವು ಇಂದು ಸಣ್ಣ ತಪ್ಪುಮಾಡುವವರೆಗೂ ಸರ್ಕಾರ ಕಾದುಕೊಂಡು ಕುಳಿತಿದೆ. ಎಲ್ಲ ಯುವಕರು ಶಾಂತತೆಯಿಂದ ಇರಬೇಕು ಎಂದು ಕರೆ ನೀಡಿದ್ದಾರೆ.
ಕಾಕ್ರೋಚ್ ಜನತಾ ಪಕ್ಷವನ್ನು ಕ್ರ್ಯಾಕ್‌ಡೌನ್ ಮಾಡಲಾಗುತ್ತಿದೆ. ನಮ್ಮ ಇನ್‌ಸ್ಟಾಗ್ರಾಮ್ ಪುಟ, ನನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್, ಟ್ವಿಟರ್ ಖಾತೆ, ಬ್ಯಾಕಪ್ ಖಾತೆ ಎಲ್ಲವನ್ನೂ ಹ್ಯಾಕ್ ಅಥವಾ ಕಾರ್ಯನಿರ್ವಹಿಸದಂತೆ ನಿಲ್ಲಿಸಲಾಗಿದೆ. ಪಕ್ಷದ ಅಧಿಕೃತ ಖಾತೆಗಳ ನಿಯಂತ್ರಣ ಕಳೆದುಕೊಂಡಿರುವುದರಿಂದ, ಅಲ್ಲಿ ಕಾಣಿಸಿಕೊಳ್ಳುವ ಯಾವುದೇ ಅನಧಿಕೃತ ಪೋಸ್ಟ್‌ಗಳನ್ನು ಅಧಿಕೃತ ಹೇಳಿಕೆ ಎಂದು ಭಾವಿಸಬಾರದು ಎಂದು ದೀಪ್ಕೆ ತಮ್ಮ ಹಿಂಬಾಲಕರಿಗೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ : ಬೌರಿಂಗ್ ಆಸ್ಪತ್ರೆ ಗೋಡೆ ದುರಂತ: ನಿಜ ಕಾರಣ ಬಹಿರಂಗಪಡಿಸಿದ ಲೋಕಾಯುಕ್ತ ವರದಿ!
ಅಲ್ಲದೆ ಈ ಬಗ್ಗೆ ಖುದ್ದು ಅಭಿಜಿತ್ ದೀಪ್ಕೆ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ, ಇನ್‌ಸ್ಟಾಗ್ರಾಮ್ ಖಾತೆಯನ್ನು ‘ಸುರಕ್ಷತೆಗಾಗಿ ನಿರ್ಬಂಧಿಸಲಾಗಿದೆ, ನಿಮ್ಮ ವೈಯಕ್ತಿಕ ಮಾಹಿತಿ, ಪರಿಶೀಲನೆ ಮಾಡಿ ಬಳಿಕ ಅದರ ಪಾಸ್‌ವರ್ಡ್ ನೀವು ಬದಲಿಸಿದರೆ ಮಾತ್ರ ಖಾತೆಯನ್ನು ಚಾಲ್ತಿಗೆ ಬರುತ್ತದೆ ಎಂಬ ಸಂದೇಶ ನೀಡಿದೆ. ಆದರೆ ಖಾತೆಯನ್ನು ಹಿಂಪಡೆಯುವ ಪ್ರಕ್ರಿಯೆ ಪದೇ ಪದೇ ಕೈಕೊಡುತ್ತಿದೆ.
ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿ ವಿಶೇಷವಾಗಿ ಯುವ ಬಳಕೆದಾರರ ನಡುವೆ ಇನ್‌ಸ್ಟಾಗ್ರಾಮ್ ಮುಂತಾದ ವೇದಿಕೆಗಳಲ್ಲಿ ತೀವ್ರ ಜನಪ್ರಿಯತೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ ಅವರ ಹೇಳಿಕೆ ಹಾಗೂ ದೇಶದ ರಾಜಕೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಹಾಗೂ ರಾಜಕೀಯ ಪಕ್ಷಗಳನ್ನುಟೀಕಿಸುವ ಉದ್ದೇಶದಿಂದ ಹುಟ್ಟುಹಾಕಲಾದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಾಮಾಜಿಕ ಮಾಧ್ಯಮದಲ್ಲಿ ಸುನಾಮಿ ಎಬ್ಬಿಸಿದೆ. ಇದಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ದೇಶದ ಜೆನ್‌ಝೀಗಳು (ಯುವಕರು) ಇದರ ಬೆನ್ನ ಹಿಂದೆ ನಿಂತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಇನ್ನೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳಿಂದ ಈ ಪಕ್ಷದ ಸಂಸ್ಥಾಪಕನಿಗೆ ಬೆದರಿಕೆಯ ಕರೆಗಳು ಬರುತ್ತಿವೆ. ಯುವಕರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದಲ್ಲಿ ಈ ಪಕ್ಷವನ್ನು ಬೆಂಬಲಿಸುತ್ತಿರುವುದರಿಂದ ಬಿಜೆಪಿ ಸೇರಿದಂತೆ ಇತರ ಪಕ್ಷಗಳಿಗೆ ನಡುಕ ಶುರುವಾಗಿದೆ. ಹೀಗಾಗಿ ಈ ಪಕ್ಷದ ನಾಗಾಲೋಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಷಡ್ಯಂತ್ರಗಳು ನಡೆಯುತ್ತಿವೆ ಎಂಬ ಚರ್ಚೆಗಳು ಶುರುವಾಗಿವೆ.






