ಬೆಂಗಳೂರು, ಏ. 23:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುರುವಾರ ಅಧಿಕೃತವಾಗಿ ಪ್ರಕಟಿಸಿದರು. ಇದರೊಂದಿಗೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯಗೊಂಡಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ (98.4%) ಮೊದಲ ಸ್ಥಾನದಲ್ಲಿದ್ದು, ಉಡುಪಿ (98.18%), ಉತ್ತರ ಕನ್ನಡ (98.09%), ಹಾಸನ (97.51%), ಮಂಡ್ಯ (97.45%) ಜಿಲ್ಲೆಗಳು ಮುಂದಿನ ಸ್ಥಾನಗಳಲ್ಲಿಿವೆ. ಮತ್ತೊಂದೆಡೆ ಕಲಬುರಗಿ ಜಿಲ್ಲೆ 85.06% ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಜಿಲ್ಲಾವಾರು ಎಸ್‌ಎಸ್‌ಎಲ್‌ಸಿ ಫಲಿತಾಂಶ
* ಉಡುಪಿ – ಶೇಕಡ 98.18
* ದಕ್ಷಿಣ ಕನ್ನಡ – ಶೇಕಡ 98.4
* ಉತ್ತರ ಕನ್ನಡ – ಶೇಕಡ 98.09
* ಹಾಸನ – ಶೇಕಡ 97.51
* ಮಂಡ್ಯ – ಶೇಕಡ 97.45
* ಶಿರಸಿ – ಶೇಕಡ 97.21
* ಹಾವೇರಿ – ಶೇಕಡ 96.87
* ಕೊಡಗು – ಶೇಕಡ 96.68
* ಶಿವಮೊಗ್ಗ – ಶೇಕಡ 96.56
* ವಿಜಯನಗರ – ಶೇಕಡ 96.39
* ಬೆಂಗಳೂರು ಗ್ರಾಮಾಂತರ – ಶೇಕಡ 95.83
* ಧಾರವಾಡ – ಶೇಕಡ 95.59
* ಕೋಲಾರ – ಶೇಕಡ 95.5
* ಬಾಗಲಕೋಟೆ – ಶೇಕಡ 95.42
* ಬೆಂಗಳೂರು ಉತ್ತರ – ಶೇಕಡ 95.33
* ಗದಗ – ಶೇಕಡ 95.24
* ಚಿಕ್ಕಮಗಳೂರು – ಶೇಕಡ 94.99
* ಬೆಳಗಾವಿ – ಶೇಕಡ 94.75
* ದಾವಣಗೆರೆ – ಶೇಕಡ 94.64
* ಮೈಸೂರು – ಶೇಕಡ 94.45
* ರಾಯಚೂರು – ಶೇಕಡ 94.41
* ವಿಜಯಪುರ – ಶೇಕಡ 94.16
* ಚಿಕ್ಕೋಡಿ – ಶೇಕಡ 94.09
* ಬಳ್ಳಾರಿ – ಶೇಕಡ 93.35
* ಕೊಪ್ಪಳ – ಶೇಕಡ 93.1
* ರಾಮನಗರ – ಶೇಕಡ 92.83
* ಚಿತ್ರದುರ್ಗ – ಶೇಕಡ 92.25
* ಬೀದರ್ – ಶೇಕಡ 92.17
* ತುಮಕೂರು – ಶೇಕಡ 92.04
* ಯಾದಗಿರಿ – ಶೇಕಡ 91.89
* ಚಾಮರಾಜನಗರ – ಶೇಕಡ 91.89
* ಬೆಂಗಳೂರು ದಕ್ಷಿಣ – ಶೇಕಡ 91.64
* ಚಿಕ್ಕಬಳ್ಳಾಪುರ – ಶೇಕಡ 90.88
* ಮಧುಗಿರಿ – ಶೇಕಡ 90.24
* ಕಲಬುರಗಿ – ಶೇಕಡ 85.06

ತ್ರಿಭಾಷಾ ಸೂತ್ರದಡಿ ತೃತೀಯ ಭಾಷೆಯನ್ನು ಗ್ರೇಡಿಂಗ್ ಮೂಲಕ ಹೊರಗಿಡಲು ಆರಂಭದಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದರೂ, ನ್ಯಾಯಾಲಯದ ಆದೇಶದಂತೆ ಈ ಬಾರಿ ಅಂಕಗಳನ್ನು ಪರಿಗಣಿಸಲಾಗಿದೆ. ತೃತೀಯ ಭಾಷೆಯಲ್ಲಿ 98.55% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 7,69,751 ವಿದ್ಯಾರ್ಥಿಗಳ ಪೈಕಿ 7,58,623 ಮಂದಿ ಪಾಸ್ ಆಗಿದ್ದಾರೆ.
ಈ ಬಾರಿ 2,393 ಸರ್ಕಾರಿ, 824 ಅನುದಾನಿತ ಹಾಗೂ 2,959 ಖಾಸಗಿ ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ. ಇನ್ನೊಂದೆಡೆ 5 ಅನುದಾನಿತ ಮತ್ತು 22 ಖಾಸಗಿ ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿರುವುದು ಗಮನಾರ್ಹವಾಗಿದೆ.ಗ್ರಾಮಾಂತರ ಭಾಗದ 4,42,280 ವಿದ್ಯಾರ್ಥಿಗಳ ಪೈಕಿ 4,19,261 ಮಂದಿ ಉತ್ತೀರ್ಣರಾಗಿದ್ದರೆ, ನಗರ ಪ್ರದೇಶದ 3,27,929 ವಿದ್ಯಾರ್ಥಿಗಳಲ್ಲಿ 3,05,533 ಮಂದಿ ಪಾಸ್ ಆಗಿದ್ದಾರೆ.

ಶ್ರೇಣಿವಾರು ಫಲಿತಾಂಶದಲ್ಲಿ 68,207 ವಿದ್ಯಾರ್ಥಿಗಳು A+ (90–100%), 1,30,403 ಮಂದಿ A (80–90%), 1,40,963 ವಿದ್ಯಾರ್ಥಿಗಳು B+ (70–79%), 1,42,645 ಮಂದಿ B (60–69%), 1,28,722 ವಿದ್ಯಾರ್ಥಿಗಳು C+ (50–59%) ಹಾಗೂ 1,13,854 ಮಂದಿ C (33–49%) ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಾರೆ, ಈ ಬಾರಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಕಂಡುಬಂದಿದ್ದು, ಜಿಲ್ಲಾವಾರು ಸಾಧನೆ ಹಾಗೂ ಶ್ರೇಣಿಗಳ ಹಂಚಿಕೆ ರಾಜ್ಯದ ಶಿಕ್ಷಣ ಮಟ್ಟವನ್ನು ಪ್ರತಿಬಿಂಬಿಸಿದೆ.






