ಹಾವೇರಿ : ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕರೆಗಳನ್ನು ಉಳಿಸಬೇಕು. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆರೆ ಹೂಳು ತೆಗೆಯಲು 200 ಕೋಟಿ ರೂ. ಇಟ್ಟಿದ್ದರು. ಅದೇ ರೀತಿ ಕೆರೆ ಹೂಳು ತೆಗೆಯಲು ರಾಜ್ಯ ಸರ್ಕಾರ ಪತ್ಯೇಕ ಹಣ ಮೀಸಲಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಶಿಗ್ಗಾವಿ ಸವಣೂರು ತಾಲೂಕುಗಳು ಕೆರೆಗಳಿಂದ ಕೂಡಿವೆ. ಸುಮಾರು ಐನೂರು ಕೆರೆಗಳಿವೆ. ಅವುಗಳಲ್ಲಿ ಕನಿಷ್ಟ 100 ದೊಡ್ಡ ಕೆರೆಗಳಿವೆ. 150 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. 2015, 16, 17 ರಲ್ಲಿ ಬರಗಾಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ಹೂಳು ತೆಗೆಯುವ ಕೆಲಸ ಆಯಿತು. ಇಂತಹ ಭಗೀರಥ ಕೆಲಸಕ್ಕೆ ಭಾರತ ಸೇವಾ ಸಂಸ್ಥೆ ಕೆರೆಗಳ ಹೂಳು ತೆಗೆಯಲು ದೊಡ್ಡ ಸಹಾಯ ಮಾಡಿದೆ ಎಂದು ಸ್ಮರಿಸಿದ್ದಾರೆ.
ಎರಡು ಮೂರು ವರ್ಷದಿಂದ ಒಳ್ಳೆಯ ಮಳೆಯಾಗಿದೆ. ಆದ್ದರಿಂದ ಹೂಳು ತೆಗೆಯಲು ಆಗಿರಲಿಲ್ಲ. ಈ ವರ್ಷ ಬೇಸಿಗೆಗೆ ಕೆರೆ ಬತ್ತಿ ಹೋಗಿರುವುದರಿಂದ ಮತ್ತೆ ಹೂಳು ತೆಗೆಯುವ ಕೆಲಸ ಮಾಡಲು ಶ್ರೀಕಾಂತ ದುಂಡಿಗೌಡರು ಭಾರತ ಸೇವಾ ಸಂಸ್ಥೆ ವತಿಯಿಂದ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಟ ಒಂದು ಕೆರೆ ಹೂಳೆತ್ತುವ ತೀರ್ಮಾನ ಮಾಡಿದ್ದಾರೆ ಎಂದು ಬೊಮ್ಮಾಯಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : BREAKING NEWS : ಶಾಮನೂರು, ಮೇಟಿ ಕುಟುಂಬಕ್ಕೆ ಟಿಕೆಟ್ ಘೋಷಣೆ : ಯಾರ ಕೈ ಮೇಲು..?
ಇದದಿಂದ ಪ್ರೇರಣೆ ಪಡೆದು ಇನ್ನಷ್ಟು ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೂಳು ತೆಗೆಯುವ ಕೆಲಸ ಮಾಡಿದರೆ ನಮ್ಮ ಹೊಲ, ನಮ್ಮ ಮನೆ ಎನ್ನುವ ಭಾವನೆ ಮೂಡುತ್ತದೆ. ಅದೇ ರೀತಿ ನಮ್ಮ ಹೊಲ, ನಮ್ಮ ಮನೆ, ನಮ್ಮ ಕೆರೆ ನಮ್ಮ ಊರು ಎಂಬ ಭಾವನೆ ಬೆಳೆಸಿಕೊಂಡರೆ ಹಳ್ಳಿಗಳು ನಮಗೆ ಗ್ರಾಮ ಸ್ವರಾಜ್ಯ ಸಿಕ್ಕಿದೆ. ಸ್ವರಾಜ್ಯದಿಂದ ಸುರಾಜ್ಯ ಆಗುತ್ತವೆ. ಆ ನಿಟ್ಟಿನಲ್ಲಿ ಶ್ರೀಕಾಂತ ಪ್ರಯತ್ನಕ್ಕೆ ಅಭಿನಂದನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆರೆ ಹೂಳೆತ್ತಲು ಈಗಾಗಲೇ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಲ್ಲಿ ಹಾವೇರಿ ಜಿಲ್ಲೆ ಸೇರಿದೆ. ಹಾವೇರಿಗೆ ಕ್ರಿಯಾ ಯೋಜನೆ ಆಗಿದೆ. ಆ ಯೋಜನೆ ಅಡಿಯಲ್ಲಿ ಪ್ರತಿ ತಾಲೂಕಿಗೂ ಕೆರೆ ಅಭಿವೃದ್ಧಿಗೆ ಹಣ ಬರುತ್ತದೆ. ರಾಜ್ಯ ಸರ್ಕಾರ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ 200 ಕೋಟಿ ರೂ. ಕೆರೆ ಹೂಳು ತೆಗೆಯಲು ಇಟ್ಟಿದ್ದರು. ಅದೇ ರೀತಿ ಕೆರೆ ಹೂಳು ತೆಗೆಯಲು ಹಣ ಇಡಬೇಕು, ಕೆರೆಗಳ ರಕ್ಷಣೆ ಮಾಡಿದರೆ ನಮ್ಮ ಭೂಮಿ ರಕ್ಷಣೆ ಆಗುತ್ತದೆ ಎಂದು ಕರೆ ನೀಡಿದ್ದಾರೆ.
ಕೆರೆ ನಿಸರ್ಗದತ್ತವಾಗಿರುವುದು. ಅದಕ್ಕೆ ಕೆರೆಗಳಿಗೆ ಫ್ಲಡ್ ಕ್ಯಾರಿಯರ್ಸ್ ಅನ್ನುತ್ತಾರೆ. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ, ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕೆರೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಚ್ಚರಿಯ ಫಲಿತಾಂಶ ಬರುತ್ತೆ ನೋಡಿ..
ಉಪ ಚುನಾವಣೆಯ ಕುರಿತು ಪತಿಕ್ರಿಯಿಸಿ, ನಾವು ಬಹಳ ಲೆಕ್ಕಾಚಾರ ಹಾಕಿ ದಾವಣಗೆರೆಯಲ್ಲಿ ಟಿಕೆಟ್ ನೀಡಿದ್ದೇವೆ. ಬರುವಂತಹ ದಿನಗಳಲ್ಲಿ ಬಡವರು, ಎಸ್ಸಿ ಎಸ್ಟಿ ಜನರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ. ಆಶ್ಚರ್ಯಕರ ಫಲಿತಾಂಶ ದಾವಣಗೆರೆಯಲ್ಲಿ ದೊರೆಯುತ್ತದೆ ಎಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ವಿಜಯ ಪಥದಲ್ಲಿ ನಾವು ಹೋಗುತ್ತಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಅಂತರದಲ್ಲಿ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುತ್ತೇವೆ ಸಂಸದ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






