ನವದೆಹಲಿ : ಇರಾನ್‌ನ ಮೇಲೆ ಯುದ್ಧ ಸಾರಿದ್ದನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಇರಾನ್ ಮೇಲಿನ ಅಮೆರಿಕದ ದಾಳಿ ಮತ್ತು 1941 ರಲ್ಲಿ ಪರ್ಲ್ ಹಾರ್ಬರ್ ಮೇಲಿನ ಜಪಾನ್ ದಾಳಿಯ ನಡುವೆ ಹೋಲಿಕೆ ಮಾಡುವ ಮೂಲಕ ಟ್ರಂಪ್ ಉದ್ದಟತನದ ಹೇಳಿಕೆ ನೀಡಿದ್ದಾರೆ.
ಜಪಾನ್ ಪ್ರಧಾನಿ ಸನೇ ತಕೈಚಿ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ, ಪತ್ರಕರ್ತರೊಬ್ಬರು ಇರಾನ್ ಮೇಲೆ ದಾಳಿ ಮಾಡುವ ಮೊದಲು ಮಿತ್ರರಾಷ್ಟ್ರಗಳ ಗಮನಕ್ಕೆ ಯಾಕೆ ನೀವು ತಂದಿರಲಿಲ್ಲ ಎಂದು ಟ್ರಂಪ್‌ಗೆ ಪ್ರಶ್ನಿಸಿದ್ದಾರೆ. ಆಗ ನಾವು ಆಶ್ಚರ್ಯವನ್ನು ಬಯಸಿದ್ದೆವು. ಆ ಅಚ್ಚರಿಯ ಬಗ್ಗೆ ಜಪಾನ್‌ಗಿಂತ ಚೆನ್ನಾಗಿ ಬೇರೆ ಯಾರಿಗೆ ತಿಳಿದಿದೆ.? ಪರ್ಲ್ ಹಾರ್ಬರ್ ಬಗ್ಗೆ ನೀವು ನನಗೆ ಏಕೆ ಹೇಳಲಿಲ್ಲ? ಎನ್ನುವ ಮೂಲಕ ಟ್ರಂಪ್ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ: ಜೆಡಿಎಸ್ ಕೈವಾಡ? ರಾಜಕೀಯ ವಲಯದಲ್ಲಿ ಸಂಚಲನ
ಆಗ ಅಲ್ಲಿ ನೆರೆದಿದ್ದ ಅಧಿಕಾರಿಗಳು ಮತ್ತು ಪತ್ರಕರ್ತರು ಸ್ವಲ್ಪ ನಗೆಗಡಲಲ್ಲಿ ತೇಲಿದರು. ನೀವು ನಮಗಿಂತ ಹೆಚ್ಚಾಗಿ ಆಶ್ಚರ್ಯವನ್ನು ನಂಬುತ್ತೀರಿ ಅಂತ ನಾನು ಭಾವಿಸುತ್ತೇವೆ ಎಂದು ಮರುತ್ತರ ನೀಡಿದ್ದಾರೆ. ಅಮೆರಿಕವನ್ನು ಎರಡನೇ ಮಹಾಯುದ್ಧಕ್ಕೆ ಎಳೆದ ಕ್ಷಣವನ್ನು ನೆನಪಿಸುತ್ತಿದ್ದಂತೆ ತಕೈಚಿಯ ಕಣ್ಣುಗಳಲ್ಲಿ ಅಚ್ಚರಿಯ ಭಾವ ಮೂಡಿತ್ತು. ಹೀಗೆ ಜಪಾನ್ ಪ್ರಧಾನಿಯ ಎದುರಲ್ಲೇ ಹಳೆಯ ದಾಳಿಯನ್ನುನೆನಪಿಸಿರುವ ಟ್ರಂಪ್ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗುತ್ತಿದೆ.
ಪ್ರಮುಖವಾಗಿ ಡಿಸೆಂಬರ್ 7, 1941 ರಂದು ಹವಾಯಿಯ ಪರ್ಲ್ ಹಾರ್ಬರ್‌ನಲ್ಲಿರುವ ಅಮೆರಿಕ ನೌಕಾ ನೆಲೆಯ ಮೇಲೆ ಜಪಾನಿನ ದಾಳಿಯಲ್ಲಿ 2,390 ಅಮೆರಿಕನ್ನರು ಸಾವನ್ನಪ್ಪಿದ್ದರು. ಅಲ್ಲದೆ ಮರುದಿನ ಅಮೆರಿಕ ಜಪಾನ್ ಮೇಲೆ ಯುದ್ಧ ಘೋಷಿಸಿತ್ತು. ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕ ಪರಮಾಣು ಬಾಂಬ್ ದಾಳಿಗಳನ್ನು ನಡೆಸಿ, ಲಕ್ಷಾಂತರ ನಾಗರಿಕರನ್ನು ಬಲಿ ಪಡೆದಿತ್ತು. ಕೆಲವು ದಿನಗಳ ನಂತರ, ಆಗಸ್ಟ್ 1945 ರಲ್ಲಿ ಅಮೆರಿಕವು ಜಪಾನ್ ಅನ್ನು ಸೋಲುವಂತೆ ಮಾಡಿತ್ತು.






